ಅನೇಕ ವರ್ಷಗಳಿಂದ ಇದ್ದ ಅದೃಷ್ಟದ ಮನೆಯನ್ನು ಖಾಲಿ ಮಾಡುವಾಗ ಮನೆಯಲ್ಲಿನ ವಸ್ತುಗಳನ್ನು ಪುಡಿ ಪುಡಿ ಮಾಡಿದ್ರಾ ನಟ ಯಶ್..?

ನಟ ರಾಕಿಂಗ್ ಸ್ಟಾರ್ ಯಶ್ ರವರು ಅನೇಕ ವರ್ಷಗಳಿಂದ, ಬೆಂಗಳೂರಿನ ಬನಶಂಕರಿಯಲ್ಲಿ ವಾಸಮಾಡುತ್ತಿದ್ದ ಬಾಡಿಗೆ ಮನೆಯನ್ನು ಈಗ ಖಾಲಿ ಮಾಡಿದ್ದಾರೆ. ಆದರೆ ಖಾಲಿ ಮಾಡಿದ ಸಂದರ್ಭದಲ್ಲಿ ಒಳಗಾಗಿ ಮನೆಯಲ್ಲಿದ್ದ ವಸ್ತುಗಳನ್ನು ಹೊಡೆದು ಹಾನಿ ಮಾಡಿದ್ದಾರೆ ಎಂದು ಸುದ್ದಿ ವರದಿಯಾಗಿದೆ.

ನಟ ಯಶ್ ರವರಿಗೆ ಅದೃಷ್ಟದ ಮನೆಯೆಂದೇ ಹೇಳಲಾಗಿದ್ದ ಬಾಡಿಗೆ ಮನೆಯನ್ನು, ಕೋರ್ಟ್ ಆದೇಶದಂತೆ ಮೇ 31ರ ಒಳಗೆ ಖಾಲಿ ಮಾಡಬೇಕಾಗಿತ್ತು. ಆದರೆ ಮೇ 31 ಮುಗಿದಿದ್ದರೂ ನಟ ಯಶ್ ಕುಟುಂಬ ಬಾಡಿಗೆ ಮನೆಯನ್ನು ಖಾಲಿ ಮಾಡದ ಹಿನ್ನೆಲೆಯಲ್ಲಿ, ಮನೆಯ ಮಾಲೀಕರು ಮತ್ತೆ ಕೋರ್ಟ್ ಮೆಟ್ಟಿಲೇರಲು ರೆಡಿಯಾಗಿದ್ದರು ಎಂದು ಹೇಳಲಾಗಿದೆ.

ಇದರಿಂದ ಎಚ್ಚೆತ್ತುಕೊಂಡ ನಟ ಯಶ್ ರವರು ಕೋರ್ಟ್ ಆದೇಶದಂತೆ ಎರಡು ತಿಂಗಳ ಬಾಡಿಗೆ ಹಾಗೂ 80,000 ಡಿಡಿಯನ್ನು ಹಾಗೂ ಕೀಯನ್ನು ಬಾಡಿಗೆ ಮನೆಯ ಮಾಲೀಕರಾದ ಡಾಕ್ಟರ್ ಮುನಿಪ್ರಸಾದ್ ಅವರಿಗೆ ಕೊಟ್ಟು ಮನೆ ಕಾಲಿ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಮನೆ ಖಾಲಿ ಮಾಡಿದ ಸಂದರ್ಭದಲ್ಲಿ ಹತಾಶೆಯಲ್ಲಿದ್ದ ಯಶ್ ಮನೆಯಲ್ಲಿದ್ದ ಕಮೋಡ್, ಲೈಟಿಂಗ್ಸ್ ಸೇರಿದಂತೆ ಮನೆಯಲ್ಲಿದ್ದ ಹಾಲವಾರು ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಹೇಳಲಾಗಿದೆ ಮಾಲೀಕರು ಯಶ್ ವಿರುದ್ಧ ಆರೋಪ ಮಾಡಿದ್ದಾರೆ.

ನಟ ಯಶ್ ಮನೆ ಖಾಲಿ ಮಾಡಿದ ನಂತರ ಮನೆಯ ಮಾಲೀಕ ಬಾಗಿಲು ತೆರೆದು ನೋಡಿದಾಗ ಮಾಲೀಕನಿಗೆ ಶಾಕ್ ಎದುರಾಗಿದ್ದು ಮನೆಯಲ್ಲಿದ್ದ ಕೆಲವು ವಸ್ತುಗಳು ಒಡೆದಿರುವುದು ಕಣ್ಣಿಗೆ ಕಾಣಿಸಿದೆ. ಹಾಗಾಗಿ ಮನೆಯ ಮಾಲೀಕರು ಮತ್ತೊಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ