ಆ ಒಂದೇ ಒಂದೇ ಒಂದು ರನೌಟ್ ಭಾರತ ಫೈನಲ್ ಗೇರುವ ಕನಸನ್ನು ನುಚ್ಚು ನೂರಾಗಿಸಿತು..?

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಹಾಲಿ ವಿಶ್ವಕಪ್ ನ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದ್ದು ನಾಲ್ಕನೇ ಬಾರೀ ಫೈನಲ್ ಗೇರುವ ಕನಸು ನುಚ್ಚು ನೂರಾಗಿದೆ. ಭಾರತ ಹೀಗೆ ಮುಗ್ಗರಿಸಲು ಆ ಒಂದೇ ಒಂದು ರನೌಟ್ ಕಾರಣ..

ಹೌದು, ಟಾಸ್ ಗೆದ್ದಿದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 240 ರನ್ ಗಳನ್ನು ಗಳಿಸಿತ್ತು. ಚೇಸ್ ಮಾಡಲು ಸಾಮಾನ್ಯ ಗುರಿಯಂತಿದ್ದು, ಗೆಲ್ಲುವ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ ಆರಂಭ ಮಾಡಿದ ಟೀಮ್ ಇಂಡಿಯಾಕೆ ಆರಂಭದಲ್ಲಿ ಆಘಾತವಾಯಿತು. ಅಗ್ರಾ ಕ್ರಮಾಂಕದ ಬ್ಯಾಟ್ಸಮನ್ ಗಳಾದ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್ ಗಳನ್ನೂ ಕಳೆದುಕೊಂಡಿದ್ದ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತ್ತು.

ನಂತರ ಬಂದ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ ೩೨ ರನ್ ಗಳನ್ನೂ ಗಳಿಸಿ ಪಂದ್ಯಕ್ಕೆ ನೆರವಾಗುವ ಸಮಯದಲ್ಲೇ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಕಳೆದುಕೊಂಡಿದ್ದು ಭಾರತಕ್ಕೆ ದೊಡ್ಡ ಆಘಾತವನ್ನೇ ಉಂಟು ಮಾಡಿತ್ತು. ಈ ಸಮಯದಲ್ಲಿ ಇಂಡಿಯಾ ತಂಡ ೫ ವಿಕೆಟ್ ಕಳೆದುಕೊಂಡು ಕೇವಲ ೯೨ ರನ್ ಗಳನ್ನು ಮಾತ್ರ ಗಳಿಸಿತ್ತು.

ಈ ಹಂತದಲ್ಲಿ ಬಂಡ ದೋನಿ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಬೆನ್ನುಲುಬಾಗಿ ನಿಂತು, ಎಂದಿನಂತೆ ಧೋನಿ ತಮ್ಮ ತಾಳ್ಮೆಯ ಆಟವಾಡಿದರೆ, ಜಡೇಜಾ ಸ್ಪೋಟಕ ಆಟಕ್ಕೆ ಮುಂದಾಗಿ ನೂರು ರನ್ ಗಳ ಜೊತೆಯಾಟ ಆಡಿದರು. ಧೋನಿ ೩೫ ರನ್ ಗಳಿಸಿದ್ದು, ರವೀಂದ್ರ ಜಡೇಜಾ ಶತಕದತ್ತ ಮುನ್ನುಗ್ಗುತಿದ್ದರು. ಈ ಸಮಯದಲ್ಲಿ ಭಾರತ ಗೆಲ್ಲಲು ೧೫ ಬಾಲ್ ಗಳಿಗೆ ೩೫ ರನ್ ಬೇಕಿತ್ತು. ಇದೇ ಸಮಯದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜಡೇಜಾ ವಿಕೆಟ್ ಒಪ್ಪಸಿ ಹೊರನಡೆದರು.

ಆದರೆ ಭಾರತಕ್ಕೆ ಇನ್ನೂ ಅವಕಾಶವಿತ್ತು, ಏಕೆಂದರೆ ಇನ್ನೂ ಕ್ರೀಸ್ ನಲ್ಲಿ ಧೋನಿ ಇದ್ದರು. ತಮ್ಮ ಹಳೆಯ ಶೈಲಿಯಲ್ಲಿ ದೊಡ್ಡ ಹೊಡೆತಗಳ ಮೂಲಕ ಭಾರತಕ್ಕೆ ಜಯ ತಂದುಕೊಂಡುವ ಧೋನಿಯ ಲೆಕ್ಕಾಚಾರ ಒಂದೇ ಒಂದು ರನೌಟ್ ನಿಂದ ತಲೆಕೆಳಕಾಗಿತ್ತು. ೪೯ನೇ ಓವರ್ ನಲ್ಲಿ ಸಿಕ್ಸರ್ ಒಡೆದ ಧೋನಿ, ಮತ್ತೊಂದು ಬದಿಯಲ್ಲಿದ್ದ ಭಾವನೇಶ್ವರ್ ಗೆ ಕ್ರೀಸ್ ಬಿಟ್ಟು ಕೊಡಲಿಲ್ಲ. ಎರಡು ರನ್ ಗಳಿಸುವ ಸಮಯದಲ್ಲಿ ಕೂಡ ಕೇವಲ ಒಂದು ರನ್ ಗಗಳಿಸಿ ಕ್ರೀಸ್ ನಲ್ಲಿದ್ದರು. ನ್ಯೂಜಿಲೆಂಡ್ ಬೌಲರ್ ಎಸೆದ ಕೊನೆಯ ಓವರ್ ನ ಮೂರನೇ ಬಾಲಿನಲ್ಲಿ ಮೂರು ರನ್ ಗಳಿಸಲು ಹೋಗಿ ರನ್ ಔಟ್ ಆಗಿದ್ದರು.

ಚೆಂಡನ್ನು ಹಿಡಿತಕ್ಕೆ ಪಡೆದಿದ್ದ ಫೀಲ್ಡರ್ ಮಾರ್ಟಿನ್ ಗಪ್ಟಿಲ್ ನೇರವಾಗಿ ಚೆಂಡನ್ನು ವಿಕೆಟ್ ಗೆ ಎಸೆದರು. ಕ್ಷಣ ಮಾತ್ರದಲ್ಲಿ ಬೇಲ್ಸ್ ಹಾರಿತ್ತು. ಕ್ರೀಸ್ ನಿಂದ ಕೆಲವೇ ಇಂಚುಗಳಷ್ಟು ದೂರವಿದ್ದ ಧೋನಿ ರೋಚಕ ರನೌಟ್ ಗೆ ಬಲಿಯಾದರು. ಈ ಒಂದು ರನ್ ಔಟ್ ಭಾರತವನ್ನು ವಿಶ್ವಕಪ್ ಫೈನಲ್ ನಿಂದ ಹೊರಗಿಡುವಂತೆ ಮಾಡಿದಲ್ಲದೆ ಧೋನಿ ತಮ್ಮ ಕಟ್ಟಕಡೆಯ ವಿಶ್ವಕಪ್ ನಲ್ಲಿ ರನ್ ಔಟ್ ಗೆ ಬಲಿಯಾಗುವಂತೆ ಮಾಡಿತು.