ಮನೆಯಲ್ಲಿದ್ದಾಗಲೂ 4ತಿಂಗಳ ಮಗು ಸೇರಿದಂತೆ ಎಲ್ಲರೂ ಹೆಲ್ಮೆಟ್ ಧರಿಸುತ್ತಾರೆ!ಇದ್ರ ಹಿಂದಿರುವ ಕತೆ ಮಾತ್ರ ಕಣ್ಣಂಚಲ್ಲಿ ನೀರು ತರಿಸುವಂತೆ ಮಾಡುತ್ತೆ

ಸಾಮಾನ್ಯವಾಗಿ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುತ್ತೇವೆ. ಇದು ಕಡ್ಡಾಯ ಕೂಡ. ಆದರೂ ಎಷ್ಟೋ ಜನ ಈ ನಿಯಮವನ್ನು ಪಾಲಿಸದೆ ಪೊಲೀಸರಿಗೆನೇ ಏಮಾರಿಸಿಕೊಂಡು ಓಡಾಡುತ್ತಾರೆ. ಆದರೆ ಕುಟುಂಬವಿದೆ.

ಇವರ ಮನೆಯವರು ಬೈಕ್ ಓಡಿಸುವಾಗ ಮಾತ್ರವಲ್ಲದೇ ಮನೆಯಲ್ಲೂ ಕೂಡ ತಪ್ಪದೆ ಹೆಲ್ಮೆಟ್ ಧರಿಸುತ್ತಾರೆ.
ಇದೇನಪ್ಪಾ ನಾವು ಬೈಕ್ ಓಡಿಸುವಾಗಲೇ ಸರಿಯಾಗಿ ಹೆಲ್ಮೆಟ್ ಧರಿಸೋದಿಲ್ಲ. ಇವ್ರೆಂತಾ ವಿಚಿತ್ರ ಜನರು ಮನೆಯಲ್ಲೂ ಹೆಲ್ಮೆಟ್ ಧರಿಸುತ್ತಾರಲ್ಲಾ ಎಂದು ಯಾರಿಗಾದರೂ ಅಚ್ಚರಿ ಆಗದೇ ಇರೋದಿಲ್ಲ.

ಆದರೆ ಈ ಕುಟುಂಬದಲ್ಲಿರುವ ಮಂದಿ ಮಾತ್ರ ಪ್ರತೀ ಸಮಯದಲ್ಲೂ ಟಿವಿ ನೋಡುತ್ತಿರಬೇಕಾದರೆ, ಮನೆಯಲ್ಲಿ ಯಾವುದೇ ಕೆಲಸ ಮಾಡುತ್ತಿರಬೇಕಾದರೆ, ಅಡುಗೆ ಮನೆಯಲ್ಲಿ ಇದ್ದಾಗಲೂ ಸಹ ಹೆಲ್ಮೆಟ್ ತಪ್ಪದೇ ಧರಿಸುತ್ತಾರೆ.

ವಿಶೇಷವೆಂದರೆ ಇವರ ಮನೆಯಲ್ಲಿರುವ ೪ ತಿಂಗಳ ಮಗುವಿನಿಂದ ಹಿಡಿದು ದೊಡ್ಡವರು ಸಹ ಹೆಲ್ಮೆಟ್ ಧರಿಸುತ್ತಾರೆ. ಮನೆಯಲ್ಲೂ ಕೂಡ ಯಾವಾಗಲೂ ಹೆಲ್ಮೆಟ್ ಧರಿಸುವ ಈ ಕುಟುಂಬ ಇರುವುದು ಅಮೇರಿಕಾ ದೇಶದ ಟೆಕ್ಸಾಸ್ ನಲ್ಲಿ. ಇವರ ನಡುವಳಿಕೆ ನೋಡಿ ಕೆಲವು ಜನರು ಕಾಮಿಡಿ ಮಾಡಿದ್ರೆ ಕೆಲವರು ಶಾಕ್ ಆಗ್ತಾರೆ.

ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ, ಗ್ಯಾರಿ ಎಂಬುವವರ ಈ ಕುಟುಂಬ ಮನೆಯಲ್ಲೂ ಕೂಡ ಹೆಲ್ಮೆಟ್ ಧರಿಸುವ ಹಿಂದಿನ ಕಾರಣ ಕೇಳಿದ್ರೆ ನಿಮಗೂ ಸಹ ಕಣ್ಣೀರು ಬರ್ದೇ ಇರೋದಿಲ್ಲ ಸ್ನೇಹಿತರೆ..ಈ ಕುಟುಂಬದ ಗ್ಯಾರಿ ಎಂಬುವವನಿಗೆ ೪ ತಿಂಗಳ ಮಗು ಇದೆ. ಆದರೆ ಅವರ ದುರಾದೃಷ್ಟವೆಂದರೆ ಈ ಹಸುಗೂಸಿಗೆ ಒಂದು ಭಯಾನಕ ಖಾಯಿಲೆ ಇದ್ದು, ಇದರಿಂದ ಆ ಮಗುವಿನ ತಲೆ ದೇಹಕ್ಕಿಂತಲೂ ದೊಡ್ಡದಾಗಿ ಬೆಳೆಯುತ್ತಲೇ ಇರುತ್ತದೆ. ಸಾಕಷ್ಟು ವೈದ್ಯರಲ್ಲೂ ತೋರಿಸಿದರೂ ಇದಕ್ಕೆ ಪರಿಹಾರ ಸಿಕ್ಕಿಲ್ಲ.

ಹಾಗಾಗಿ ವೈದ್ಯರು ಆ ಮಗುವಿಗೆ ಯಾವಾಗಲೂ ತಲೆಗೆ ಹೆಲ್ಮೆಟ್ ಹಾಕುವುದರಿಂದ ಈ ಸಮಸ್ಯಗೆ ಸ್ವಲ್ಪವಾದರೂ ಪರಿಹಾರ ಸಿಗುತ್ತೆ ಎಂದು ಹೇಳಿದ್ದಾರೆ. ಹೀಗಾಗಿ ಮಗುವಿಗೆ ಹೆಲ್ಮೆಟ್ ಹಾಕುವುದಲ್ಲದೆ, ಇದು ಮಗುವಿಗೆ ಸಹಜವಾಗಿ ಅಭ್ಯಾಸವಾಗಲಿ ಎಂದು ಕುಟುಂಬದವರೆಲ್ಲಾ ಹೆಲ್ಮೆಟ್ ಹಾಕುತ್ತಾರಂತೆ.