ಶಾಕಿಂಗ್ ನ್ಯೂಸ್..ಹ್ಯಾಕ್ ಆಗಿದೆ ವಾಟ್ಸಪ್!ಕೂಡಲೇ ಈ ಕೆಲಸ ಮಾಡಿ ಎಂದು ಬಳಕೆದಾರರಿಗೆ ವಾಟ್ಸಪ್ ಕಂಪನಿ ಸೂಚನೆ..ಏನ್ ಮಾಡಬೇಕು?

ಈಗಂತೂ ವಾಟ್ಸಪ್ ಅಪ್ಲಿಕೇಶನ್ ಇಲ್ಲದ ಮೊಬೈಲ್ ಸಿಗುವುದು ಕಷ್ಟ. ಪ್ರತಿಯೊಬ್ಬರೂ ಈ ಮೆಸೇಜಿಂಗ್ ಅಪ್ಲಿಕೇಶನ್ ಉಪಯೋಗಿಸುತ್ತಿರುತ್ತಾರೆ. ಆದರೆ ಈಗ ಜಗತ್ತಿನ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ಫೇಸ್ಬುಕ್ ಮಾಲೀಕತ್ವದ ವಾಟ್ಸಪ್  ಹ್ಯಾಕ್ ಆಗಿದೆ ಸ್ವತಹ ಕಂಪನಿಯೇ ತಿಳಿಸಿದೆ.

ಹೌದು, ವಾಟ್ಸಪ್  ಹ್ಯಾಕ್ ಆಗಿದ್ದು ಈ ಕೂಡಲೇ ಕೂಡಲೇ ಎಲ್ಲ ಬಳಕೆದಾರರು ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಳ್ಳಿ ಎಂದು ಕಂಪನಿ ತಿಳಿಸಿದೆ. ಎನ್‍ಎಸ್ಒ ಗ್ರೂಪ್ ಹೆಸರಿನ ಇಸ್ರೇಲ್ ಮೂಲದ ಭದ್ರತಾ ಸಂಸ್ಥೆಯೊಂದು ವಾಟ್ಸಪ್ ಹ್ಯಾಕ್ ಮಾಡಿದೆ ಎಂದು ಹೇಳಲಾಗಿದೆ.

 ಈ ಕಾರಣದಿಂದಲೇ ವಾಟ್ಸಪ್ ಬಗ್ ಫಿಕ್ಸ್ ಮಾಡಿದ್ದು ತನ್ನ ಅಪ್ಲಿಕೇಶನ್ ಅಪ್‍ಡೇಟ್ ಮಾಡಿದೆ. ಬಳಕೆದಾರರು ಕೂಡ ಈ ಕೂಡಲೇ ನಿಮ್ಮ ವಾಟ್ಸಪ್ ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಳ್ಳಿ.

ಹ್ಯಾಕ್ ಆದ ನಿಮ್ಮ ವಾಟ್ಸಪ್ ಅಪ್ಲಿಕೇಶನ್ ಮೇಲೆ ದಾಳಿ ಹೇಗೆ ನಡೆಯುತ್ತೆ..?

ಯಾರ ವಾಟ್ಸಪ್ ಅಪ್ಲಿಕೇಶನ್ ಮೇಲೆ ಟಾರ್ಗೆಟ್ ಮಾಡಲಾಗುತ್ತದೆಯೋ ಆ ವ್ಯಕ್ತಿಗೆ ವಾಟ್ಸಪ್ ಕಾಲ್ ಬರುತ್ತದೆ. ಆ ಕರೆಯನ್ನು ರಿಸೀವ್ ಮಾಡಿ ಅಥ್ವಾ ಮಾಡದೇ ಇರಿ ಒಂದು ಕಣ್ಗಾವಾಲು ತಂತ್ರಾಂಶ (Surveillance Software) ಇನ್‍ಸ್ಟಾಲ್ ಆಗುತ್ತದೆ. ಈ ಸಾಫ್ಟ್ವೇರ್ ಹೇಗೆ ಅಂದರೂ ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ ಸ್ಟಾಲ್ ಆಗುವಂತೆ ರೂಪಿಸಲಾಗಿದೆ.

ವಾಟ್ಸಪ್ ಹ್ಯಾಕ್ ಮಾಡುವುದರ ಮೂಲಕ ಮಾನವ ಹೋರಾಟಗಾರರು, ವಕೀಲರು ಹಾಗೂ ಪತ್ರಕರ್ತರ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದ್ದು, ವಾಟ್ಸಪ್ ಭದ್ರತಾ ತಂಡ ಇದನ್ನು ಒಂದು ತಿಂಗಳ ಹಿಂದೆಯೇ ಪತ್ತೆ ಹಚ್ಚಿತ್ತು ಎಂದು ಹೇಳಲಾಗಿದೆ.

ಈ ದಾಳಿಯ ಹಿಂದೆ ಸೈಬರ್ ದಾಳಿ ನಡೆಸುವಲ್ಲಿ ಪ್ರಸಿದ್ದಿ ಹೊಂದಿರುವ ಇಸ್ರೇಲ್ ನ ಎನ್‍ಎಸ್‍ಒ ಗ್ರೂಪ್ ಎಂದು ಹೇಳಲಾಗಿದ್ದು, ಈ ಕಂಪನಿ ಸ್ಪೈ ಸಾಫ್ಟ್ ವೇರ್ ಪೆಗಾಸಸ್ ಅಭಿವೃದ್ಧಿ ಪಡಿಸಿದ್ದು, ಫೋನ್ ಮೂಲಕ ಕ್ಯಾಮೆರಾ, ಮೈಕ್ರೋಫೋನ್, ಲೋಕೇಶನ್ ಡೇಟಾಗಳನ್ನು ಈ ಸಾಫ್ಟ್ ವೇರ್ ಸಂಗ್ರಹಿಸಿ ವ್ಯಕ್ತಿಯ ಮೇಲೆ ಗೂಢಾಚಾರಿಕೆ ಮಾಡುತ್ತದೆ ಎಂದು ಹೇಳಲಾಗಿದೆ.