ಕೇವಲ 5 ವರ್ಷಕ್ಕೆ ಬರೋಬ್ಬರಿ 25ಲಕ್ಷ ಸಂಪಾದನೆ ಮಾಡಿದ ಬೆಂಗಳೂರಿನ ಪುಟ್ಟ ಪೋರ..!ಹೇಗೆ ಗೊತ್ತಾ?

ಕಲೆಗೆ ಯಾವುದೇ ರೀತಿಯ ವಯಸ್ಸಿನ ಬೇಧವಿಲ್ಲ. ಅದರಲ್ಲೂ ಐದು ವರ್ಷದ ಮಕ್ಕಳೆಂದರೆ, ಆ ವಯಸ್ಸಿನಲ್ಲಿ ಅವರಿಗೆ ಸರಿಯಾಗಿ ನಡೆಯುವುದಕ್ಕೂ ಬರುವುದಿಲ್ಲ, ಮಾತನಾಡಲು ಸಹ ಬರುವುದಿಲ್ಲ. ಆದರೆ 5 ವರ್ಷದ ಬಾಲಕನೊಬ್ಬ, ತನ್ನ ಪುಟ್ಟ ವಯಸ್ಸಿನಲ್ಲೇ ಬರೋಬ್ಬರಿ 25ಲಕ್ಷ ರೂ ಸಂಪಾದನೆ ಮಾಡುವ ಮೂಲಕ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾನೆ.

ಹೌದು, ಐದು ವರ್ಷದ ಈ ಪೋರ ಯಲಹಂಕದ ದಿವ್ಯ ಹಾಗೂ ರಾಜಶೇಖರನ್ ಅವರ ಮಗ ವಿರಾಟ್ ಕರಣ್ ಎಂದು. ಈಗ ಈ ಪುಟ್ಟ ಬಾಲಕ ತನ್ನ ಚಿಕ್ಕವಯಸ್ಸಿನಲ್ಲಿ ಲಕ್ಷಾಧಿಪತಿಯಾಗುವುದರ ಮುಖಾಂತರ ಎಲ್ಲರ ಕಣ್ಣು ಉಬ್ಬೇರುವಂತೆ ಮಾಡಿದ್ದಾನೆ. ವಿರಾಟ್ ಕರಣ್ ಕುಂಚ ಹಿಡಿದು ಆಡುತ್ತಿದ್ದ ಸಮಯದಲ್ಲೇ, ಈತನ ತಂದೆ ತಾಯಿಗಳು ಚಿತ್ರ ಬಿಡಿಸುವುದನ್ನು ಪ್ರೋತ್ಸಾಹಿಸಿ, ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸುವುದನ್ನು ಕಲಿಸಿಕೊಟ್ಟಿದ್ದಾರೆ.

ಹೀಗೆ ಚಿತ್ರಕಲೆ ಬಿಡಿಸುವುದನ್ನು ಕಲಿತ ವಿರಾಟ್ ಕರಣ್ ಇಲ್ಲಿಯವರೆಗೂ, ಸುಮಾರು 150 ಕಲಾಕೃತಿಗಳನ್ನು ರಚಿಸಿದ್ದಾರೆ. ಈ ಪುಟ್ಟ ಪೋರನ ಪೈಂಟಿಂಗ್ಸ್ ಗಳು ಭಾರತ ಸೇರಿದಂತೆ ದುಬೈ, ಅಮೆರಿಕಾ ವಿದೇಶಗಳಲ್ಲೂ ವಿರಾಟ್ ಕರಣ್ ಅವರ ಪೇಂಟಿಂಗ್ ಗಳು ಪ್ರದರ್ಶನಗೊಂಡಿವೆ. ಜೊತೆಗೆ ಒಂದು ತಿಂಗಳು ಹದಿನೈದು ಸಾವಿರ ರೂಪಾಯಿಗೂ ಅಧಿಕ ಮಟ್ಟದಲ್ಲಿ ಮಾರಾಟವಾಗಿದ್ದು, ಇವುಗಳ ಮೇಲೆ ಕ್ರಾಫ್ಟ್ ವರ್ಕ್ ಕೂಡ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.

5ವರ್ಷದ ಈ ಪುಟ್ಟ ಬಾಲಕ ಪದಗಳಲ್ಲಿ ವರ್ಣಿಸಲಾಗದಿರುವುದನ್ನು ಚಿತ್ರಗಳ ಮೂಲಕ ಹೇಳುತ್ತಿದ್ದು, ಕಾರ್ ರೇಸ್ ಟ್ರಾಕ್, ಫ್ಲವರ್ಸ್ ಸೇರಿದಂತೆ ತನ್ನ ಕಲ್ಪನೆಗೆ ತಕ್ಕ ಹಾಗೆ ಅನೇಕ ಕಲಾಕೃತಿಗಳನ್ನು ರಚಿಸಿದ್ದಾನೆ. ಇಲ್ಲಿಯವರೆಗೂ 150 ಕಲಾಕೃತಿಗಳನ್ನು ರಚಿಸಿರುವ ವಿರಾಟ್ ಕರಣ್ 25 ಲಕ್ಷ ರೂಗಳನ್ನು ಸಂಪಾದನೆ ಮಾಡುವ ಮೂಲಕ ಲಕ್ಷಾಧಿಪತಿಯಾಗಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದಾನೆ.