ಅಗ್ನಿಸಾಕ್ಷಿ ಸೀರಿಯಲ್ ನಿಂದ ಹೊರಬಂದ ಸಿದ್ದಾರ್ಥ್ ಪಾತ್ರದಾರಿ ನಟ ವಿಜಯ್ ಸೂರ್ಯ?ಸನ್ನಿದಿ ಪಾತ್ರದ ಕತೆಯೇನು?

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರವಾಹಿ ಅಗ್ನಿಸಾಕ್ಷಿ ಸಿದ್ದಾರ್ಥ್ (ವಿಜಯ್ ಸೂರ್ಯ) ಹೊರಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ವಿಜಯ್ ಸೂರ್ಯ ಸಿದ್ದಾರ್ಥ್ ಆಗಿ ನಟಿಸಿರುವ ಸೀರಿಯಲ್ ಐದು ವರ್ಷಗಳನ್ನು ಪೂರೈಸಿದ್ದು ವಿಜಯ್ ಸೂರ್ಯ ಅವರ ಸಿದ್ದಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ ಎಂದು ಹೇಳಲಾಗಿದೆ. ಈಗ ನಡೆಯುತ್ತಿರುವ ಸೀರಿಯಲ್ ನಲ್ಲಿ ನಟ ಸಿದ್ದಾರ್ಥ್ ಆಸ್ಟ್ರೇಲಿಯಾಗೆ ಹೋಗಲು ಸಿದ್ಧರಾಗಿದ್ದು ಅವರು ಹೋದ ನಂತರ ಅವರ ಪಾತ್ರ ಕೊನೆಯಾಗಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಅಗ್ನಿಸಾಕ್ಷಿ ಧಾರಾವಾಹಿಯ ತಂಡಕ್ಕೆ ಐದು ವರ್ಷಗಳ ಅವಧಿಗೆ ನಟ ವಿಜಯ್ ಸೂರ್ಯ ಅವರು ಅಗ್ರಿಮೆಂಟ್ ಮಾಡಿಕೊಂಡಿದ್ದು, ಈಗ ಅದರ ಅವಧಿ ಮುಕ್ತಾಯಗೊಂಡಿದ್ದು, ನಟ ವಿಜಯ್ ಸೂರ್ಯ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ. ಅಗ್ರಿಮೆಂಟ್ ಮುಗಿದಿರುವ ಕಾರಣ ಇದೆ ಸರಿಯಾದ ಸಮಯವೆಂದು ತಿಳಿದಿರುವ, ನಟ ವಿಜಯ್ ಸೂರ್ಯ ಅವರು ಸೀರಿಯಲ್ ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ನಟ ವಿಜಯ್ ಸೂರ್ಯ ಅವರು ಹಲವಾರು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟ ವಿಜಯ್ ಸೂರ್ಯ ಕುಟುಂಬದ ಜೊತೆ ಕಾಲ ಕಳೆಯುವ ಸಲುವಾಗಿ ಅಗ್ನಿಸಾಕ್ಷಿಯಿಂದ ಬ್ರೇಕಪ್ ತೆಗೆದುಕೊಂಡಿದ್ದಾರೆ.

ಇನ್ನು ನಟ ವಿಜಯ್ ಸೂರ್ಯ ಧಾರಾವಾಹಿಯಿಂದ ಹೊರಬಂದಿದ್ದು, ಅಗ್ನಿಸಾಕ್ಷಿ ಮುಕ್ತಾಯವಾಗಲಿದೆಯಾ ಎಂದು ಪ್ರೇಕ್ಷಕರು ಅನುಮಾನ ಹೊರಹಾಕಿದ್ದಾರೆ. ಇದೇ ಧಾರಾವಾಹಿಯ ಸನ್ನಿದಿ ಪಾತ್ರದ ವೈಷ್ಣವಿ ಕೂಡ ಹೊರಬರಲಿದ್ದಾರೆ ಎಂದು ಹೇಳಲಾಗುತ್ತಿದೆ.