ಕೇವಲ 4 ವರ್ಷಗಳ ಹಿಂದೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡಲು ಆಗದೆ ಪರದಾಡುತ್ತಿದ್ದವನು ಈಗ ಶ್ರೀಮಂತ ಸ್ಟಾರ್ ನಟ!

ಯಶಸ್ಸು ಅನ್ನುವುದು ಯಾರಿಗೂ ಸುಮ್ಮನೇ ಒಲಿಯುವುದಿಲ್ಲ. ಅದರಲ್ಲೂ ಸಿನಿಮಾ ರಂಗದಲ್ಲಂತೂ ಅಷ್ಟು ಬೇಗ ಯಶಸ್ಸು ಸಿಗುವುದೇ ಕಷ್ಟ. ಆದರೆ ಯಶಸ್ಸು ಒಮ್ಮೆ ಸಿಕ್ಕರೆ ಸಾಕು ಅಂತಹವರು ಜೀವನದಲ್ಲಿ ಹಿಂದಕ್ಕೆ ತಿರುಗಿ ನೋಡದಂತೆ ಮುಂದೆ ಹೋಗಿಬಿಟ್ಟಿರುತ್ತಾರೆ.

ಇದಕ್ಕೆ ತಕ್ಕ ನಿದರ್ಶನ ಎಂಬಂತೆ ಕೇವಲ ನಾಲ್ಕು ವರ್ಷಗಳ ಹಿಂದೆ ತನ್ನ ಬ್ಯಾಂಕ್ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಉಳಿಸಿಕೊಳ್ಳಲು ಕಷ್ಟ ಪಡುತ್ತಿದ್ದವರೊಬ್ಬರು ಎಂದು ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದರೆ ಅಚ್ಚರಿ ಆಗದೇ ಇರಲಾರದು.

ಹೌದು, ಫೋರ್ಬ್ ಇಂಡಿಯಾ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ಇತ್ತೀಚೆಗಷ್ಟೇ ತೆಲಗು ಚಿತ್ರರಂಗಕ್ಕೆ ಕಾಲಿಟ್ಟ ನಟರೊಬ್ಬರು 30 ನೇ ಸ್ಥಾನ ಪಡೆದುಕೊಂಡಿರುವುದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ನೀವೇ ಯೋಚನೆ ಮಾಡಿ ತನ್ನ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕೂಡ ಮೆಂಟೈನ್ ಮಾಡಲಾಗದೆ ಪರದಾಡುತ್ತಿದ್ದ ಯುವಕ ಇಂದು ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.

ಕೇವಲ ನಾಲ್ಕೇ ವರ್ಷದಲ್ಲಿ ಇಷ್ಟು ಎತ್ತರಕ್ಕೆ ಬೆಳೆದ ಯುವ ನಟನೆ ತೆಲುಗಿನ ವಿಜಯ್ ದೇವರಕೊಂಡ. ಈ ನಟನೆ ಹೇಳಿರುವ ಪ್ರಕಾರ ನಿನ್ನ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ನಿನ್ನ ಅಕೌಂಟ್ ಕ್ಲೋಸ್ ಮಾಡ್ತಾರೆ ಅಂತ ನನ್ನ ತಂದೆ ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಅವರ ಅಭಿನಯದ ಅರ್ಜುನ್ ರೆಡ್ಡಿ ಮತ್ತು ಗೀತ ಗೋವಿಂದಂ ಚಿತ್ರಗಳ ಸಕ್ಸಸ್ ನಂತರ ನಾಲ್ಕೇ ವರ್ಷದಲ್ಲಿ ತುಂಬಾ ಬದಲಾಗಿದ್ದು ಅವರನ್ನು ಸ್ಟಾರ್ ನಟರ ಸಾಲಿಗೆ ಸೇರಿಸಿದ್ದು ಅಲ್ಲದೆ ಬಿಗ್ ಸಕ್ಸಸ್ ತಂದುಕೊಟ್ಟಿವೆ.

ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡಿರುವ ನಟ ವಿಜಯ್ ದೇವರಕೊಂಡ ಕೇವಲ ನಾಲ್ಕು ವರ್ಷದಲ್ಲಿ ಎಲವೂ ಬದಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ರೀತಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕೂಡ ಯಾವುದೇ ಬ್ಯಾಕ್ ಸಪೋರ್ಟ್ ಇಲ್ಲದೆ ಬೆಳೆದು ಇವತ್ತು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಇವರು ಉದಾಹರಣೆಯಲ್ಲವೇ.