ವಾಸ್ತು ಶಾಸ್ತ್ರದ ಪ್ರಖಾರ ನಿಮ್ಮ ಮನೆಯಲ್ಲಿ ಹೀಗಿದ್ದರೆ ಧನ ಪ್ರಾಪ್ತಿಯಾಗುತ್ತದೆ..!

ಸನಾತನ ಹಿಂದೂ ಧರ್ಮದಲ್ಲಿ ವಾಸ್ತುಶಾಸ್ತ್ರಕ್ಕೆ ಅದರದ್ದೇ ಆದ ಮಹತ್ವವಿದ್ದು, ಪುರತಾನವಾಗಿದೆ.ಇದು ವೈಜ್ಞಾನಿಕವಾಗಿಯೂ ಸತ್ಯ ಎಂಬ ಅಭಿಪ್ರಾಯಗಳಿವೆ.ನಾವು ನಡೆದುಕೊಳ್ಳುವ ಸ್ವಭಾವಗಳು ಹಾಗೂ ನಡುವಳಿಕೆಗಳು ನಮ್ಮ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿ ಪ್ರಭಾವ ಬೀರುತ್ತವೆ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಈಗಂತೂ ಭಾರತೀಯರು ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯಶಾಸ್ತ್ರದ ಮೊರೆ ಹೋಗುವುದು ಸಾಮಾನ್ಯವಾಗಿದ್ದು, ವಾಸ್ತ್ರ ಇಲ್ಲದೆ ಯಾರೂ ಸಹ ಮನೆ ಕೂಡ ಕಟ್ಟುವುದಿಲ್ಲ.ಹಾಗಾಗಿ ಭಾರತೀಯ ವಾಸ್ತು ಶಾಸ್ತ್ರದ ಪ್ರಖಾರ ಮನೆಯಲ್ಲಿ ಹೀಗಿದ್ದರೆ ಮಾತ್ರ ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.

ವಾಸ್ತುವಿಗೆ ಸಂಬಂಧಪಟ್ಟಂತೆ ಕೆಲವು ಪ್ರಮುಖ ಮಾಹಿತಿಗಳನ್ನು ನೀಡಲಾಗಿದೆ…

ನಾಮಫಲಕ : ಭಾರತೀಯ ವಾಸ್ತುಶಾಸ್ತ್ರದ ಮನೆಯ ಬಾಗಿಲಿಗೆ ನಮ ಫಲಕ ಇದ್ದರೆ ತುಂಬಾ ಒಳ್ಳೆಯದು.

ದೀಪ : ನಿಮ್ಮ ಮನೆಯಲ್ಲಿ ಮರೆಯದೇ ಪ್ರತೀದಿನ ಹಣತೆ ದೀಪ ಹಾಗೂ ಊದುಬತ್ತಿ ಹಚ್ಚಿ. ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ಹೊರಹೋಗಿ ಶಾಂತಿ ನೆಮ್ಮದಿ ನಿಲುಸುತ್ತದೆ.

ಅಡುಗೆ ಮನೆ ಕೋಣೆ : ಮನೆಯಲ್ಲಿರುವ ಅಡುಗೆ ಮನೆಗೂ ಕೂಡ ವಾಸ್ತು ಶಾಸ್ತ್ರದಲ್ಲಿ ಬಹಳ ಮಹತ್ವವಿದೆ.ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಕೋಣೆ ಇರಬೇಕು.ಒಂದು ವೇಳೆ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇಲ್ಲವಾದಲ್ಲಿ, ಅದೇ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಆದ್ರೂ ಇಡೀ.

ನಿಂಬೆಹಣ್ಣು : ದೇವರ ಪೂಜೆ, ಮಾಟಾ ಮಂತ್ರ ಸೇರಿದಂತೆ ಅಡುಗೆಗೂ ಸಹ ನಿಂಬೆಹಣ್ಣನ್ನು ಬಳಸುತ್ತಾರೆ. ಜೊತೆಗೆ ವಾಸ್ತು ಶಾಸ್ತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ನಿಂಬೆ ಹಣ್ಣನ್ನು ಒಂದು ಗ್ಲಾಸಿನ ನೀರಿನಲ್ಲಿ ಇಟ್ಟು ಪ್ರತೀ ಶನಿವಾರ ತಪ್ಪದೆ ಬದಲಿಸುತ್ತಾ ಹೋಗಿ.ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ.

ಔಷಧ : ಮಾತ್ರೆ ಸಿರಪ್ ಗಳಂತಹ ಔಷಧಗಳನ್ನು ಅಡುಗೆ ಮನೆ ಕೋಣೆಯಲ್ಲಿ ಇಡಬೇಡಿ.ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುತ್ತವೆ.

*ಧ್ಯಾನದಿಂದ ಮನಸ್ಸು ಶುದ್ದಿಯಾಗುವುದಲ್ಲದೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಪ್ರತೀದಿನ ಒಮ್ಮೆಯಾದರೂ ಧ್ಯಾನ ಮಾಡಿ. ಇದರಿಂದ ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ಹೆಚ್ಚಾಗುತ್ತದೆ

.*ನೀವು ಮಲಗುವ ಕೊಣೆಯಲ್ಲಿ ಕನ್ನಡಿ ಇರುವುದು ಒಳ್ಳೆಯದಲ್ಲ. ಹಾಗಾಗಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ತೆಗೆಯಲು ಸಾಧ್ಯವಿಲ್ಲವೆಂದಾದರೆ ಕನ್ನಡಿ ಮೇಲೆ ಬಟ್ಟೆ ಹಾಕಿ ಇಲ್ಲವೇ ಕನ್ನ್ನಡಿಯನ್ನು ನಿಮಗೆ ಕಾಣಿಸದಂತೆ ದೂರ ಇಡಿ. ಇಲವೆಂದರೆ ನಿಮ್ಮ ಆರೋಗ್ಯ ಕೆಡುವುದರ ಜೊತೆಗೆ ಮನೆಯಲ್ಲಿ ವೈಮನಸ್ಸು ಹೆಚ್ಚಾಗುವ ಸಂಭವ ಇರುತ್ತದೆ.

*ನಿಮ್ಮ ಮನೆಯಲ್ಲಿನ ಬಾಗಿಲಿನಲ್ಲಿ ಓಂ ಮತ್ತು ಸ್ವಸ್ತಿಕ್ ಚಿಹ್ನೆಗಳನ್ನು ಇಡಿ. ಇದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ.ದೇವರ ಪೂಜೆಯ ವೇಳೆ ಗಂಟೆಯನ್ನು ಬಾರಿಸುತ್ತೇವೆ. ಇದು ಸಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ. ಹಾಗಾಗಿ ಮನೆಯ ಗೇಟ್ ಗಂಟೆಗಳನ್ನು ಹಾಕಿ.

*ಅಡುಗೆಗೆ ಬಳಸುವ ಉಪ್ಪನ್ನು ಡಬ್ಬಿಗಳಲ್ಲಿ ಹಾಕಿ ಮನೆಯ ಎಲ್ಲಾ ಮೂಲೆಗಳಲ್ಲಿ ಇಡಿ. ಇದು ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುತ್ತದೆ. ಗಣೇಶ ಪೂಜೆ ಹಾಗೂ ನವಗ್ರಹ ಶಾಂತಿಯನ್ನು ಮೂರೂ ವರ್ಷಕ್ಕೊಮ್ಮೆ ಆದರೂ ಮಾಡಿಸಿ. ಇದರಿಂದ ವಾಸ್ತುದೋಷ ಪರಿಹಾರವಾಗಿ ಸುಖ ಶಾಂತಿ ನೆಲೆಸುತ್ತದೆ.

*ಮನೆಯಲ್ಲಿ ಹಾಕುವ ಫೋಟೋಗಳು ನಮ್ಮ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವ ಬೀರಲಿದ್ದು, ಕೋಪೋದ್ರಿಕ್ತ ವ್ಯಕ್ತಿ, ಗೂಬೆ, ರಣಹದ್ದು, ಅಳುತ್ತಿರುವ ಹೆಂಗಸು, ಯುದ್ಧದ ದೃಶ್ಯ, ಲೈಂಗಿಕವಾಗಿ ಉದ್ರೇಕಿಸುವ ಭಂಗಿಗಳು ಇಂತಹ ಫೋಟೋಗಳನ್ನು ಮನೆಯಲ್ಲಿ ಹಾಕಬೇಡಿ.ಇದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.