ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆ ಮತ್ತು ಮಕ್ಕಳನ್ನು, ನದಿಗೆ ಹಾರಿ ರಕ್ಷಿಸಿದ 11ವರ್ಷದ ಪುಟ್ಟ ಬಾಲಕ.!ಸುದ್ದಿಯಾಗಲೇ ಇಲ್ಲ…

ನದಿಯ ನೀರಿನಲ್ಲಿ ಮುಳುಗುತಿದ್ದ ಮಹಿಳೆ ಮತ್ತು ಮಕ್ಕಳಿಬ್ಬರನ್ನು ಹನ್ನೊಂದು ವರ್ಷದ ಬಾಲಕನೊಬ್ಬ, ಅವರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಹೌದು, ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಒಂದು ಸಣ್ಣ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಇದ್ದಕಿದ್ದಂತೆ ನದಿಯ ನೀರಿನ ಮಟ್ಟ ಹೆಚ್ಚಾಗಿ ಈ ಘಟನೆ ನಡೆದಿದೆ. ಅದೇ ವೇಳೆ ಅದೇ ನದಿಯ ದಡದಲ್ಲಿ ನಿಂತಿದ್ದ ೧೧ ವರ್ಷದ ಉತ್ತಮ ತತಿ ಎಂಬ ಬಾಲಕ ಮಹಿಳೆ ಮತ್ತು ಮಕ್ಕಳಿಬ್ಬರನ್ನು ಉಳಿಸಲು ಹಿಂದೂ ಮುಂದು ಯೋಚಿಸದೆ ಕೂಡಲೇ ನದಿಗೆ ಹಾರಿದ್ದಾನೆ.

ನದಿಗೆ ಹಾರಿದ ೧೧ ವರ್ಷ ಉತ್ತಮ ತತಿಯಿಂದ ಆ ಮಹಿಳೆ ಮತ್ತು ಮಗುವೊಂದನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಆದರೆ ದುರದೃಷ್ಟವಶಾತ್ ಮತ್ತೊಂದು ಮಗುವನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಆ ಮಗು ಮುಳುಗಿಹೋಗಿದೆ.

ಕೇವಲ ೧೧ ವರ್ಷದ ಬಾಲಕ ಉತ್ತಮ ಧೈರ್ಯ ತೋರಿ ನದಿಗೆ ಹಾರಿ ಮಹಿಳೆ ಮತ್ತು ಮಗವನ್ನು ರಕ್ಷಣೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಅಸ್ಸಾಂ ಜಿಲ್ಲೆಯ ಅಧಿಕಾರಿಗಳು ಈಗ ರಾಷ್ಟ್ರೀಯ ಶೌರ್ಯ ಪುರಸ್ಕಾರಕ್ಕೆ ಉತ್ತಮ್ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದು ಹೇಳಿದ್ದಾರೆ.