ಎಚ್ಚರವಿರಲಿ, ಇಯರ್ ಫೋನ್ ಬಳಸೋ ಮುಂಚೆ ಇದನೊಮ್ಮೆ ಓದಿ…

ಇದು ಸ್ಮಾರ್ಟ್ ಫೋನ್ ಯುಗ. ಹಳ್ಳಿ ಹಳ್ಳಿಗಳಲ್ಲೂ ಸಹ ಎಲ್ಲರೂ ಕೈನಲ್ಲೂ ಸಹ ಒಂದಕ್ಕಿಂತ ಹೆಚ್ಚು 4G ಸ್ಮಾರ್ಟ್ ಫೋನ್ ಗಳಿವೆ.ಇದರ ಜೊತೆಗೆ ಕಿವಿಗೆ ಇಯರ್ ಫೋನ್. ಹೆಚ್ಚಾಗಿ ಮಾತನಾಡುವವರು ರಾತ್ರಿ ಮಲಗುವ ಸಮಯದಲ್ಲಿಯೂ ಸಹ ಕಿವಿಗೆ ಇಯರ್ ಫೋನ್ ಹಾಕಿಕೊಂಡೆ ಇರುತ್ತಾರೆ.ಇನ್ನೂ ಕೆಲವರು ಸಂಗೀತ ಕೇಳಲು ಸಹ ಮಲಗುವ ಸಮಯದಲ್ಲಿ ಇಯರ್ ಫೋನ್ ಹಾಕಿಕೊಂಡೇ ಮಲಗುತ್ತಾರೆ.

ನಿಮ್ಮಲ್ಲಿಯೂ ಸಹ ಈ ತರದ ಅಭ್ಯಾಸ ಇದ್ದರೆ ಈ ದಿನವೇ ಈ ಕೆಟ್ಟ ಹವ್ಯಾಸ ಬಿಟ್ಟು ಬಿಡಿ. ಏಕೆಂದರೆ ಇಯರ್ ಫೋನ್ ಹೆಚ್ಚಾಗಿ ಬಳಸೋದ್ರಿಂದ ಕಿವಿಗೆ ಅಪಾಯ ತಪ್ಪಿದ್ದಲ್ಲ. ಇದರಿಂದ ಅನೇಕ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

ಇಯರ್ ಫೋನ್ ಯಾವಾಗಲು ಕಿವಿಗೆ ಹಾಕಿಕೊಂಡು ಹೆಚ್ಚಾಗಿ ಬಳಸುವುದರಿಂದ ಕೇಳುವ ಕ್ಷಮತೆ ಕಡಿಮೆಯಾಗುತ್ತದೆ.ಇನ್ನು ಕೆಲವರು ಹೆಚ್ಚಾಗಿ ಸೌಂಡ್ ಇಟ್ಟುಕೊಂಡು ಹಾಡುಗಳನ್ನ ಕೇಳುತ್ತಿರುತ್ತಾರೆ. ಇದರಿಂದ ಕಿವಿಯ ಪದರ ಹಾಳಾಗಿ ಸಂಪೂರ್ಣ ಕಿವುಡಾಗುವ ಸಾಧ್ಯತೆ ಹೆಚ್ಚಿವೆ.

ಮತ್ತೊಂದು ಕೆಟ್ಟ ಹವ್ಯಾಸ ಬಹುತೇಕ ಎಲ್ಲರಲ್ಲೂ ಇದೆ. ಅನೇಕರು ಇಯರ್ ಫೋನ್ ಹಾಕಿಕೊಂಡೇ ಕಾರ್, ಬೈಕ್ ಗಳನ್ನು ಓಡಿಸುವ ಚಾಳಿ ಜಾಸ್ತಿಯಾಗಿದೆ. ಇದು ತುಂಬಾ ಡೇಂಜರ್ ಹವ್ಯಾಸ. ಇಂತಹ ಸಮಯದಲ್ಲಿ ಹಿಂದೆ ಅಥವಾ ಪಕ್ಕದಲ್ಲಿ ಬರುವ ವಾಹನಗಳ ಶಬ್ದ ಕೇಳುವುದಿಲ್ಲ ಇದರಿಂದ ಹೆಚ್ಚಾಗಿ ಅಪಘಾತಗಳಾಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇಯರ್ ಫೋನ್ ಬಳಕೆಯಿಂದ ಕಿವಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇದ್ದು, ಇದರ ಜೊತೆಗೆ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಜೋರಾಗಿ ಸೌಂಡ್ ಇಟ್ಟುಕೊಂಡು ಹಾಡುಗಳನ್ನು ಕೇಳುವುದರಿಂದ ಹೃದಯ ರೋಗ ಕಾಡುವುದಲ್ಲದೆ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ತಂತ್ರಜ್ಞಾನ ಇರುವುದು ನಮ್ಮ ಅನುಕೂಲಕ್ಕಾಗಿ ಹೊರತು ಜೀವನಕ್ಕಾಗಿ ಅಲ್ಲ. ಎಲ್ಲವನ್ನು ಮಿತವಾಗಿ ಬಳಸಿ ನಮ್ಮ ದೇಹದ ಆರೋಗ್ಯ ಮತ್ತು ಪ್ರಾಣವನ್ನು ಕಾಪಾಡಿಕೊಳ್ಳುವುದು ನಮ್ಮ ಮೇಲೆಯೇ ಇದೆ. ಅತೀಯಾಗಿ ಬಳಸಿದ್ರೆ ಅಮೃತ ಕೂಡ ವಿಷ ಆಗುತ್ತೆ ಅನ್ನೋ ಗಾದೆ ಮಾತು ಸತ್ಯ ಆಲ್ವಾ..