ಈ ಹಾಡು ರಿಲೀಸ್ ಆಗಿದ್ದೇ, ರಚಿತಾ ರಾಮ್ ಮೇಲೆ ಕೆಂಡಾಮಂಡಲವಾದ ಪ್ರಿಯಾಂಕಾ ಉಪೇಂದ್ರ.!?ನಟಿ ಮೇಲೆ ತನ್ನ ಆಕ್ರೋಶ ಹೊರ ಹಾಕಿದ ಉಪ್ಪಿ ಪತ್ನಿ…

ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ಅಭಿನಯದ, ಆರ್ ಚಂದ್ರು ನಿರ್ದೇಶನದ ‘ಐ ಲವ್ ಯು’ ಸಿನಿಮಾ ಜೂನ್ 14 ರಂದು ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಈಗಾಗಲೇ ಐ ಲವ್ ಯು ಸಿನಿಮಾದ ‘ಮಾತನಾಡಿ ಮಾಯವಾದೆ’ ರಿಲೀಸ್ ಆಗಿದ್ದು ಈ ಹಾಡಿನಲ್ಲಿ ನಟ ಉಪೇಂದ್ರ ಹಾಗೂ ರಚಿತಾ ರಾಮ್ ರೋಮ್ಯಾಂಟಿಕ್ ಆಗಿ ಅಭಿನಯಿಸಿದ್ದಾರೆ. ಆದರೆ ಈ ಹಾಡಿನ ಬಗ್ಗೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ರಚಿತಾ ರಾಮ್ ಮೇಲೆ ಗರಂ ಆಗಿದ್ದಾರೆ.

ಈ ಹಾಡಿನಲ್ಲಿರುವ ಹಸಿ ಬಿಸಿ ದೃಶ್ಯಗಳಿಂದಾಗಿ ಕೆಟ್ಟ ಬಾವನೆ ಬರುತ್ತಿದೆ. ಅದಲ್ಲದೆ ರಚಿತಾ ರಾಮ್ ಹೋದ ಕಡೆಯೆಲ್ಲಾ ಪ್ರತೀ ಸಂದರ್ಶನದ್ಲಲೂ ಅನಗತ್ಯವಾಗಿ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಪ್ರಿಯಾಂಕಾ ಉಪೇಂದ್ರ ಗರಂ ಆಗಿದ್ದಾರೆ.

ರಚಿತಾ ರಾಮ್ ತಾವು ಅಭಿನಯ ಮಾಡಿದ್ದರ ಬಗ್ಗೆ ಹೇಳಿಕೊಳ್ಳಲಿ, ಅವರೇನು ಕನ್ನಡ ಚಿತ್ರರಂಗಕ್ಕೆ ಹೊಸಬರಲ್ಲ, ಅದನ್ನು ಬಿಟ್ಟು ಪದೇ ಪದೇ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದೇಕೆ ಎಂದು ರಚಿತಾ ರಾಮ್ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಕತೆಯ ಬಗ್ಗೆ ಮೊದಲೇ ನನಗೆ ಗೊತ್ತಿದ್ದರೂ, ಟ್ರೈಲರ್ ನಲ್ಲಿ ಈ ಹಾಡನ್ನು ನೋಡುವವರೆಗೂ ಹಾಡಿನ ಬಗ್ಗೆ ಐಡಿಯಾ ನನಗೆ ಇರಲಿಲ್ಲ.ಉಪ್ಪಿರವರಲ್ಲಿ ಈ ಹಾಡಿನ ಬಗ್ಗೆ ಕೇಳಿದಾಗ ಅದು ಸಿನಿಮಾದ ಒಂದು ಭಾಗ ಎಂದು ಹೇಳಿದ್ದರು. ಆದರೆ ರಚಿತಾ ರಾಮ್ ಸಂದರ್ಶನಗಳಲ್ಲಿ ಈ ಹಾಡನ್ನು ನಿರ್ದೇಶನ ಮಾಡಿದ್ದು ಉಪೇಂದ್ರರವರು ಎಂದು ಹೇಳುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಹೆಸರನ್ನು ಹೇಳುತ್ತಲೇ ಇಲ್ಲ. ಎಂದು ರಚಿತಾ ಮೇಲೆ ಕಿಡಿ ಕಾರಿದ್ದಾರೆ.

ಈ ಚಿತ್ರದಲ್ಲಿ ಮಾತನಾಡಲು ಬೇಕಾದಷ್ಟು ವಿಷ್ಯಗಳಿದ್ದರೂ ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ. ಕೇವಲ ಆ ಹಾಡಿನ ಬಗ್ಗೆ ಮಾತ್ರ ಮಾತನಾಡುತ್ತಾರೆ. ಉಪೇಂದ್ರ ಪ್ರಸಿದ್ಧ ನಿರ್ದೇಶಕ. ಅವರ ಬಗ್ಗೆ ಮಾತನಾಡಬೇಕಾದ್ರೆ ಆಕೆ ಜಾಗ್ರತೆಯಿಂದಿರಬೇಕು. ಆ ಹಾಡೊಂದರ ಬಗ್ಗೆ ಮಾತ್ರ ಮಾತನಾಡುವ ರಚಿತಾ ರಾಮ್ ಆ ಸಾಂಗ್ ಮಾಡಲು ಒಪ್ಪಬಾರದಿತ್ತು ಎಂದು ರಚಿತಾ ರಾಮ್ ಮೇಲೆ ಕೆಂಡಾ ಮಂಡಲವಾಗಿದ್ದಾರೆ.