ಮನೆಯ ಮುಂದೆಯೇ ಬೆಳೆಸಬಹುದಾದ ಈ ಗಿಡದಿಂದಾಗುವ ಲಾಭ ಗೊತ್ತಾದರೆ ನೀವು ಆ ಗಿಡವನ್ನು ಮನೆಗೆ ತಂದು ಇಟ್ಟುಕೊಳ್ಳುತ್ತೀರಾ…

ತುಂಬೆ ಗಿಡವನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಸಂಸ್ಕೃತ ಭಾಷೆಯಲ್ಲಿ ಇದಕ್ಕೆ ದ್ರೋಣ ಪುಷ್ಪ, ಚಿತ್ರಪತ್ರಿಕಾ, ಚಿತ್ರ ಕ್ಷುಪ ಅಂತೆಲ್ಲಾ ಕರೆಯುತ್ತಾರೆ. ಈಗಂತೂ ಮನೆ ಮುಂದೆಯೂ ಸಹ ತುಳಸಿ ಗಿಡದಂತೆ ಪಾಟ್ ಗಳಲ್ಲಿ ಇಟ್ಟು ಬೆಳೆಸುತ್ತಾರೆ. ಇದು ಎಲ್ಲಾ ಕಾಲದಲ್ಲಿಯೂ ನೀರು ಕಡಿಮೆ ಇದ್ದರೂ ಹುಟ್ಟಿ ಬೆಳೆಯುವ ಗಿಡವಾಗಿದೆ. ತೋಟ ಗದ್ದೆಗಳಲ್ಲಿ ಸಹ ಈ ಗಿಡ ಬೆಳೆಯುತ್ತದೆ.

ಈ ಗಿಡವು ಬಿಳಿಯಾಕಾರದ ಹೂಗಳನ್ನು ಬಿಡುತ್ತದೆ. ಇದರ ಹೂವು ಕೆಳಭಾಗದಲ್ಲಿ ಸಿಹಿಯಾದ ರಸದ ರೂಪದಲ್ಲಿ ಇರುತ್ತದೆ. ಈ ಗಿಡದ ಬೇರು ಹೆಚ್ಚು ಆಳಕ್ಕೆ ಹೋಗದೆ ಮೇಲೆಯೇ ಇರುತ್ತದೆ. ಎಷ್ಟೋ ಜನಕ್ಕೆ ಗೊತ್ತಿಲ್ಲದ ಉಪಯೋಗಗಳಿವೆ ಈ ತುಂಬೆ ಗಿಡದಿಂದ…

ತುಂಬೆ ಗಿಡದಿಂದಾಗುವ ಉಪಯೋಗಗಳನ್ನು ತಿಳಿಯೋಣ ಬನ್ನಿ…

*ಔಷಧಿ ಸಸ್ಯ ಎಂದೇ ಪರಿಗಣಿಸಲ್ಪಟ್ಟಿರುವ ಈ ಗಿಡವು ಭಾರತ ಸೇರಿದಂತೆ ಜಾವಾ, ಮಾರಿಷಸ್, ಪಿಲಿಪೈನ್ಸ್, ಶ್ರೀಲಂಕಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

*ತುಂಬೆ ಗಿಡದ ಎಲೆಯ ರಸವನ್ನು ಜ್ವರ ಸೇರಿದಂತೆ ಕೀಟನಾಶಕವಾಗಿ ಸಹ ಬಳಸುತ್ತಾರೆ. ಉತ್ಕರ್ಷಣ ನಿರೋಧಕ ಮತ್ತು ಸೂಕ್ಷ್ಮ ಜೀವಿ ಪ್ರತಿರೋಧಕವಾಗಿ ಆಯುರ್ವೇದದಲ್ಲಿ ಬಳಸುವ ವಾಡಿಕೆಯಿದೆ.

*ಈ ಗಿಡದ ಎಲೆಗಳನ್ನು ಬಹಳ ಕಾಲದವರೆಗೆ ಹಾವು ಕಚ್ಚಿದಾಗ ಔಷಧವಾಗಿ ಬಳಸುವುದು ವಾಡಿಕೆಯಲ್ಲಿತ್ತು. ಇದನ್ನು ಮನೆ ಮದ್ದಾಗಿ ಸಂಧಿವಾತ, ಚರ್ಮರೋಗ, ಕೆಮ್ಮು, ಗಂಟಲು ಬೇನೆ ಹಾಗೂ ನೆಗಡಿ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಬಳಸುತ್ತಾರೆ.

ಹೀಗೆ ಹಲವಾರು ಉಪಯೋಗಗಳನ್ನು ಹೊಂದಿರುವ ಈ ಔಷಧಿ ಗಿಡವನ್ನು ಮನೆ ಮುಂದೆಯೂ ಸಹ ನೀವು ಬೆಳೆಸಬಹುದು.