ಜನ ಕಂಡರೂ ರೈಲು ನಿಲ್ಲಿಸುವುದಿಲ್ಲ ಏಕೆ ಗೊತ್ತೆ? ರೈಲು ದುರಂತಗಳು ಹೇಗೆ ಸಂಭವಿಸುತ್ತವೆ ತಿಳಿದಿದೆಯೇ? ಇಲ್ಲಿದೆ ಒಂದು ಸಾಮಾನ್ಯ ಮಾಹಿತಿ…!

ಮೊನ್ನೆ ದಸರಾ ಹಬ್ಬದ ಸಂದರಭದಲ್ಲಿ ನಡೆದ ಅಮೃತ್ ಸರ್ ದುರಂತ ನಿಮಗೆ ನೆನಪಿದೆಯೇ? ರಾವಣ ದಹನ ಸಮಯದಲ್ಲಿ ರೈಲು ಹರಿದು 70 ಜನ ಮೃತ ಪಟ್ಟರು. ಹಲವರು ಗಾಯಗೊಂಡರು. ಸಾವು ನೋವುಗಳಿಂದ ಜನ ಕಂಗೆಟ್ಟರು. ಏಕೆ ರೈಲಿನ ಚಾಲಕ ಈ ದುರಂತವನ್ನು ತಪ್ಪಿಸಬುಹುದಾಗಿತಲ್ಲವೆ ಎಂಬ ಪ್ರಶ್ನೆ ನಿಮಗೆ ಮೂಡಬಹುದು ಅಲ್ಲವೇ? ಬನ್ನಿ ಇದಕ್ಕೆಲ್ಲ ಉತ್ತರ ತಿಳಿಯೋಣ.

ರೈಲಿನ ಎಮರ್ಜೆನ್ಸಿ ಬ್ರೇಕ್ ಹಾಕಿದರೆ ರೈಲು ಪಲ್ಟಿ ಹೊಡೆಯುತ್ತದೆ ಎಂಬ ತಪ್ಪು ಕಲ್ಪನೆ ಕೆಲವರಿಗೆ ಇರುತ್ತದೆ. ಮತ್ತು ಜನರು ಕಂಡರೂ ನಿಯಮದ ಪ್ರಕಾರ ರೈಲಿನ ಡ್ರೈವರ್ ಅಥವಾ ಲೋಕ ಪೈಲಟ್ ಬ್ರೇಕ್ ಹಾಕುವುದಿಲ್ಲ ಎಂಬ ತಪ್ಪು ಮಾಹಿತಿ ನಿಮಗೆ ಇರುತ್ತದೆ. ಆದರೆ ರೈಲು ದುರಂತಗಳಿಗೆ ಕಾರಣ ಇದ್ಯಾವುದೂ ಅಲ್ಲ.

ಹೌದು…ರೈಲಿನ ಚಾಲಕರಿಗೆ ಕೆಲವು ಕಠಿಣ ನಿಯಮಗಳಿವೆ. ಹಸಿರುಬಣ್ಣ ಕಾಣುವ ತನಕ ರೈಲು ಹೊಡಿಸುತ್ತಲೇ ಇರಬೇಕು . ಹಳದಿ ಬಣ್ಣ ಕಾಣಿಸಿದಾಗ ರೈಲನ್ನು ನಿಧಾನ ವಾಗಿ ಚಾಲನೆ ಮಾಡಬೇಕು ಮಾತು ಕೆಂಪು ಬಣ್ಣ ಕಂಡಾಗ ಸಂಪೂರ್ಣವಾಗಿ ನಿಲ್ಲಿಸಬೇಕು. ರೈಲಿನ ಗಾರ್ಡ್ ಹೇಳಿದರೆ ಮಾತ್ರ ರೈಲನ್ನು ನಿಲ್ಲಿಸಬೇಕು ಮತ್ತು ತುರ್ತು ಪರಿಸ್ಥಿತಿಗಳಲ್ಲಿ, ಜನರು ರೈಲ್ವೆ ಹಳಿ ಮೇಲೆ ಕಂಡಾಗಲೂ ರೈಲನ್ನು ಎಮರ್ಜೆನ್ಸಿ ಬ್ರೇಕ್ ಬಳಸಿ ನಿಲ್ಲಿಸಬಹುದು.

ರಸ್ತೆಯ ಮೇಲೆ ಚಲಿಸುವ ವಾಹನಗಳಿಗೆ ಇರುವ ಹಾಗೆ ರೈಲುಗಳಿ ಗೂ ಬ್ರೇಕ್ ಇರುತ್ತದೆ. ಆದರೆ ಈ ಬ್ರೇಕ್ ಹಾಕಿದ ತಕ್ಷಣ ರೈಲು ನಿಂತು ಕೊಳ್ಳುವುದಿಲ್ಲ. ಕನಿಷ್ಠ ಎಂದರು ಬ್ರೇಕ್ ಹಾಕಿದ ನಂತರ 800 ಮೀಟರ್ ದೂರ ಚಲಿಸಿದ ನಂತರವೇ ರೈಲು ನಿಲ್ಲುತ್ತದೆ. ಅಲ್ಲದೆ 1 ಕಿಲೋಮೀಟರ್ ಮೊದಲೇ ಚಾಲಕನಿಗೆ ಹಳಿಯ ಮೇಲೆ ಏನು ಇದೆ ಇಲ್ಲ ಎಂಬುದು ತಿಳಿಯುವುದಿಲ್ಲ.

ಟರ್ನಿಂಗ್ ಇದ್ದರಂತೂ ಹತ್ತಿರಕ್ಕೆ ಹೋಗುವ ತನಕ ಏನು ಕಾಣಿಸುವುದಿಲ್ಲ. ರಾತ್ರಿಯ ಸಮಯದಲ್ಲಿ , ಮಂಜಿನ ವಾತಾವರಣದಲ್ಲಿ ಎದುರಿಗೆ ಏನೂ ಇದ್ದರೂ ಚಾಲಕನಿಗೆ ಸರಿಯಾಗಿ ತಿಳಿಯುವುದಿಲ್ಲ ಹತ್ತಿರಕ್ಕೆ ಹೋದ ನಂತರವಷ್ಟೇ ಎದುರಿಗೆ ಜನರಿದ್ದ ರೆ ಕಾಣುತ್ತಾರೆ. ಎಂಥಹಾ ಸಂದರ್ಭದಲ್ಲಿ ಚಾಲಕ ಹಾರ್ನ್ ಮಾಡಲು ಮಾತ್ರ ಸಾಧ್ಯ.

ಅಮೃತ್ ಸರ್ ದುರಂತದಲ್ಲಿ ಸಹ ಹೀಗೆ ಆದದ್ದು. ಜನರು ಕಂಡ ತಕ್ಷಣ ರೈಲಿನ ಚಾಲಕ ಎಮರ್ಜೆನ್ಸಿ ಬ್ರೇಕ್ ಹಾಕಿದ, ಹಾರ್ನ್ ಕೂಡ ಮಾಡಿದ ಆದರೆ ಪಟಾಕಿ ಸಿಡಿ ಸುತ್ತಿದ್ದ ಜನರಿಗೆ ರೈಲಿನ ಹಾರ್ನ್ ಶಬ್ಧ ಕೇಳಲಿಲ್ಲ. ರೈಲು ನಿಲ್ಲುವಷ್ಟು ರಲ್ಲಿ 70 ಜನರು ಬಲಿಯಾಗಿದ್ದರು.