ಈ ಆನೆಗೋಸ್ಕರ ಕೇರಳದಲ್ಲಿ ದೊಡ್ಡ ಯುದ್ಧವೇ ನಡೀತು?ಇದ್ರ 1 ದಿನದ ಬಾಡಿಗೆ ಎಷ್ಟು ಗೊತ್ತಾ!ಎಷ್ಟೋ ಜನರನ್ನ ಬಲಿ ಪಡೆದಿರುವ ಈ ಆನೆಯ ಮೇಲೆ ಕೇರಳಿಗರಿಗೆ ಯಾಕಿಷ್ಟು ಪ್ರೀತಿ ಗೊತ್ತಾ?

ದೇವರ ನಾಡು ಎಂದೇ ಕರೆಯುವ ಕೇರಳದಲ್ಲಿ ಅತೀ ಹೆಚ್ಚಾಗಿ ಧಾರ್ಮಿಕ ಉತ್ಸವಗಳನ್ನು ಮಾಡಲಾಗುತ್ತದೆ. ಅದರಲ್ಲೂ ಆನೆಗಳಿಲ್ಲದೆ ಕೇರಳದ ಯಾವುದೇ ಉತ್ಸವಗಳು ನಡೆಯುವುದಿಲ್ಲ. ಕೇರಳದ ಪ್ರತಿಯೊಂದು ಧಾರ್ಮಿಕ ಉತ್ಸವಗಳಲ್ಲಿ ಆನೆಗಳೇ ಪ್ರಮುಖ ಆಕರ್ಷಣೆ.

ಆದರೆ ಕಳೆದ ವಾರ ನಡೆಯಬೇಕಿದ್ದ ತ್ರಿಶೂರಿನ ಪ್ರಸಿದ್ಧ ಪೂರಂ ಉತ್ಸವದಲ್ಲಿ ‘ಥೇಚಿಕೊಟ್ಟುಕಾವು ರಾಮಚಂದ್ರನ್‌’ ಎಂಬ ಆನೆಯ ಕಾರಣದಿಂದ ದೊಡ್ಡ ವಿವಾದವೇ ಎದ್ದಿತ್ತು. ಈ ಒಂದು ಆನೆಯ ಕಾರಣದಿಂದ ಕೇರಳದಲ್ಲಿ ದೊಡ್ಡ ಮುಷ್ಕರ ಪ್ರತಿಭಟನೆಗಳೇ ನಡೆದವು. ಇದಕ್ಕೆ ಕಾರಣ ತ್ರಿಶೂರಿನ ಜಿಲ್ಲಾಡಳಿತ ಈ ಸಲದ
ಪೂರಂ ಉತ್ಸವದಲ್ಲಿ ರಾಮಚಂದ್ರನ್ ಆನೆಯನ್ನು ಬಳಸದಂತೆ ನಿಷೇಧ ಹೇರಿತ್ತು.

ಥೇಚಿಕೊಟ್ಟುಕಾವು ರಾಮಚಂದ್ರನ್‌ ಆನೆಗೆ ನಿಷೇಧ ಹೇರಿದ್ದರ ಕಾರಣ…

ಏಷ್ಯಾದ ಸೀನಿಯರ್ ಆನೆಯೆಂದೇ ಕರೆಸಿಕೊಳ್ಳುವ ಸುಮಾರು 10.5 ಅಡಿ ಎತ್ತರ ಹೊಂದಿರುವ ರಾಮಚಂದ್ರನ್ ಆನೆಯ ಈಗಿನ ವಯಸ್ಸು 55. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಪೂರಂ ಉತ್ಸವದಲ್ಲಿ
ರಾಮಚಂದ್ರನ್ ಆನೆ ವಡಕ್ಕುಂನಾಥನ್‌ ದೇವಾಲಯದ ದಕ್ಷಿಣ ಮಹಾದ್ವಾರವನ್ನು ತಲೆಯಿಂದ ನೂಕಿ ತೆರೆಯಬೇಕು. ನಂತರ ಉತ್ಸವಮೂರ್ತಿಯನ್ನು ಹೊತ್ತು ಸಾರ್ವಜನಿಕರೊಂದಿಗೆ ಬೆರೆಯಬೇಕು.

ಆದರೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಇದಕ್ಕೆ ನಿಷೇಧ ಹೇರಿರುವುದೇ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಮೂಲ ಕಾರಣ ಹಲವಾರು ವರ್ಷಗಳಿಂದ ಉತ್ಸವಗಳಲ್ಲಿ ಭಾಗವಹಿಸುತ್ತಿರುವ ಈ ಆನೆ ಸುಮಾರು ಇಲ್ಲಿಯವರೆಗೂ ೧೪ ಮಂದಿಯ ಪ್ರಾಣ ತೆಗೆದುಕೊಂಡಿದೆ. ಇದಕ್ಕೆ ಮದವೇರಿದಾಗ ಇದನ್ನು ನಿಯಂತ್ರಿಸಲು ಯಾರ ಕೈನಿಂದಲೂ ಆಗುವುದಿಲ್ಲ. ಮದವೇರಿದ ಸಮಯದಲ್ಲಿ ಎದುರಿಗೆ ಏನೇ ಕಂಡರೂ ಅದನ್ನು ನಾಶ ಮಾಡದೆ ಬಿಡುವುದಿಲ್ಲ ಈ ಆನೆ.

ಈ ಆನೆಯ ಒಂದು ಕಣ್ಣು ಸಹ ಕಾಣಿಸುತ್ತಿಲ್ಲ. ಕಳೆದ ಫೆಬ್ರುವರಿ ತಿಂಗಳಿನಲ್ಲಿ ಗೃಹಪ್ರವೇಶದ ಸಮಾರಂಭಕ್ಕೆ ಹೋಗಿದ್ದ ಸಮಯದಲ್ಲಿ ಇಬ್ಬರನ್ನು ಈ ಆನೆ ಬಳಿ ತೆಗೆದುಕೊಂಡಿದೆ. ಇಷ್ಟೆಲ್ಲಾ ಧಾಂದಲೆ ಎಬ್ಬಿಸಿ ಹಲವಾರು ಜನರನ್ನು ಹತ್ಯ ಮಾಡಿ ಹಂತಕ ಆನೆ ಎಂದೆನಿಸಿರುವ ಕೇರಳ ರಾಜ್ಯದ ಅತೀ ಎತ್ತರದ ಆನೆಯ ಮೇಲೆ ಈಗಲೂ ಸಹ ಕೇರಳಿಗರಿಗೆ ಎಲ್ಲಿಲ್ಲದ ಪ್ರೀತಿ.

ಈ ಎಲ್ಲಾ ಕಾರಣಗಳಿಂದ ಜಿಲ್ಲಾಡಳಿತ ರಾಮಚಂದ್ರನ್ ಆನೆಯನ್ನು ನಿಷೇಧ ಮಾಡಿತ್ತು. ಆದರೆ ಕೇರಳ ಆನೆಗಳ ಸಂಘದವರು ರಾಮಚಂದ್ರನ್ ಆನೆಯನ್ನು ಉತ್ಸವದಲ್ಲಿ ಬಾಗಿಯಾಗಲು ಬಿಡದಿದ್ದರೆ ಬೇರೆ ಯಾವುದೇ ಉತ್ಸವಗಳಲ್ಲಿ ಆನೆಗಳು ಬಾಗಿಯಾಗುವುದಿಲ್ಲ ಎಂದು ಪ್ರತಿಭಟನೆ ಮಾಡಿದ್ದರು.

ನಂತರ ಜಿಲ್ಲಾಡಳಿತ ಸಹ ತನ್ನ ಆದೇಶವನ್ನು ಹಿಂತೆಗೆದುಕೊಂಡಿದೆ. ಖ್ಯಾತಿಯ ಜೊತೆಗೆ ಖುಕ್ಯಾತಿಯನ್ನು ಸಹ ಹೊಂದಿರುವ ಈ ರಾಮಚಂದ್ರನ್ ಆನೆಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು, ಈ ಆನೆಯ ಹೆಸರಿನಲ್ಲಿ ಹಲವಾರು ಫೇಸ್ಬುಕ್ ಪುಟಗಳು ಸಹ ತೆರೆದುಕೊಂಡಿವೆ.

ಒಂದು ದಿನದ ಬಾಡಿಗೆ 3 ಲಕ್ಷ.!

ಹೌದು, ಕೇರಳದ ಈ ಎತ್ತರದ ಹಾಗೂ ಏಷ್ಯಾದಲ್ಲಿಯೇ ಸೀನಿಯರ್ ಆನೆ ಎಂದೇ ಕರೆಯುವ ಈ ರಾಮಚಂದ್ರನ್ ಆನೆಯ ಒಂದು ದಿನದ ಬಾಡಿಗೆ ಬರೋಬ್ಬರಿ ೩ ಲಕ್ಷಕ್ಕಿಂತ ಮೇಲೆ ಎಂದು ಹೇಳಲಾಗಿದೆ. ಈ ಆನೆಗಳ ಒಂದು ದಿನದ ಬಾಡಿಗೆ ಸುಮಾರು 3 ಲಕ್ಷ ರೂ. ಎಂದರೆ ಶಾಕ್ ಆಗಬೇಡಿ.! ಇಷ್ಟೊಂದು ದೊಡ್ಡ ಪ್ರಮಾಣದ ಲಾಭ ಇರುವುದರಿಂದಾಗಿಯೇ, ಆನೆಗಳು ಮಸ್ತಿಯ ಸಮಯದಲ್ಲಿದ್ದರೂ ಅವುಗಳನ್ನು ಬಾಡಿಗೆ ನೀಡುವ ಆಮಿಷಕ್ಕೆ ಮಾಲಿಕರು ಒಳಗಾಗುತ್ತಾರೆ.

ಮಸಿಯಲ್ಲಿರುವ ಆನೆಗಳಿಗೆ ಒಮ್ಮೆ ಮದವೇರಿದ ಮುಗಿಯಿತು. ಇದಕ್ಕೆ ಉದಾಹರಣೆ ಎಂಬಂತೆ ಕೇರಳದ
ಪತ್ತನಂತಿಟ್ಟ ಎಂಬಲ್ಲಿ ಮೇ 10ರಂದು ದೇವಾಲಯದ ಮೆರವಣಿಗೆಗೆ ತರಲಾದ ಆನೆಯೊಂದು ರೊಚ್ಚಿಗೆದ್ದು ಹಲವಾರು ವಾಹನಗಳನ್ನು ಜಜ್ಜಿಹಾಕಿತ್ತು. ಏಪ್ರಿಲ್ 13ರಂದು ಕೊಲ್ಲಂನಲ್ಲಿ ಉತ್ಸವಕ್ಕೆ ತರಲಾದ ಆನೆಯೊಂದು ತನ್ನನ್ನು ನೋಡಿಕೊಳ್ಳುತ್ತಿದ್ದ ಮಾವುತನನ್ನೇ ಕೊಂದುಹಾಕಿ ಹಲವರನ್ನು ಗಾಯಗೊಳಿತು.