ತಾಂಬೂಲವನ್ನು ಕೊಡುವಾಗ, ತೆಗೆದುಕೊಳ್ಳುವಾಗ ಹುಷಾರ್..!

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆದುಬಂದ ಹಲವಾರು ಆಚರಣೆಗಳಿವೆ. ಪ್ರತಿಯೊಂದು ಆಚರಣೆಗೆ ಸಹ ಅದರದ್ದೇ ಆದ ವಿಶೇಷ ಮಹತ್ವ ಇದೆ. ಅದರಲ್ಲಿ ತಾಂಬೂಲ ಕೊಡುವುದು, ತೆಗೆದುಕೊಳ್ಳುವುದು ಸಹ ಒಂದು.

ಹಿಂದೂ ಧರ್ಮದಲ್ಲಿ ಮನೆಗೆ ಬಂದ ಅತಿಥಿಗಳನ್ನು ದೈವ ಸಮಾನರೆಂದು ಕಾಣಲಾಗುತ್ತದೆ. ಅದರಲ್ಲೂ ಮನೆಗೆ ಬಂದ ಹೆಣ್ಣುಮಕ್ಕಳಿಗೆ ವಸ್ತ್ರ, ಹೂ, ಹಣ್ಣು ಕಾಯಿ ನೀಡಿ ಸುಖವಾಗಿ ಬಾಳಿ ಎಂಬ ಆಶೀರ್ವಾದ ಮಾಡುವುದು ವಾಡಿಕೆ. ಆದರೆ ವಿಶೇಷ ಮಹತ್ವಹೊಂದಿರುವ ಈ ತಾಂಬೂಲವನ್ನು ಕೊಡುವಾಗ, ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಯಾವುದೇ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಕೂಡದು. ಇದರಿಂತ ಒಳಿತಿಗಿಂತ ಕೆಡಕಾಗುವುದೇ ಹೆಚ್ಚು.

ಹಾಗಾದ್ರೆ ತಾಂಬೂಲ ಕೊಡುವಾಗ, ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು ಎಂಬುದನ್ನ ತಿಳಿಯೋಣ ಬನ್ನಿ…