ನಿಮಗೆ ಗೊತ್ತೇ ಸ್ವಾಮಿ ವಿವೇಕಾನಂದರು ಎಂತಹ ದಿವ್ಯಶಕ್ತಿ ಹೊಂದಿದ್ದರು ಎಂದು?ಇದಕ್ಕೆ ಜರ್ಮನ್ ನಲ್ಲಿ ನಡೆದ ಆ ಒಂದು ಘಟನೆಯೇ ಸಾಕ್ಷಿ!

ಸ್ವಾಮಿ ವಿವೇಕಾನಂದರು ಸನಾತನ ಭಾರತದ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಸಾರಿದ ಮಹಾಯೋಗಿ. ಭಾರತವೆಂದರೆ ಕೇವಲ ದಾರಿದ್ರ, ಅನಾಗರಿಕತೆಯಿಂದ ಕೂಡಿದ ರಾಷ್ಟ್ರ ಎಂದು ಭಾವಿಸಿದ್ದ ಜನರ ಕಣ್ತೆರಿಸಿ ಇಡೀ ವಿಶ್ವವೇ ಭಾರತ ಮತ್ತು ಭಾರತೀಯರಿಗೆ ಗೌರವವನ್ನು ಕೊಡುವಂತೆ ಮಾಡಿದ ವೀರ ಸನ್ಯಾಸಿ.

ವಿವೇಕಾನಂದರು ಕೇವಲ ಒಬ್ಬ ಸಾಮಾನ್ಯ ಸನ್ಯಾಸಿ ಆಗಿರಲಿಲ್ಲ. ಯೋಗ ಮತ್ತು ಅಧ್ಯಾತ್ಮದಲ್ಲಿ ಸಾಧನೆಯ ಶಿಖರವೇರಿದ ಅಪ್ರತಿಮ ಗ್ರಹಿಕಾ ಸಾಮರ್ಥ್ಯವುಳ್ಳ ಮಹಾ ಜ್ಞಾನಿಯಾಗಿದ್ದರು. ಅವರು ಇಡೀ ವಿಶ್ವಕ್ಕೆ ಪರಿಚಯವಾದದ್ದು ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಮೂಲಕ. ಅವರು ಅಮೆರಿಕದಿಂದ ಭಾರತಕ್ಕೆ ತೆರಳುವ ಮುನ್ನ ಯುರೋಪಿಗೆ ಭೇಟಿ ನೀಡಿದ್ದರು.

ಅಲ್ಲಿ ಜರ್ಮನ್ ನ ತತ್ವಶಾಸ್ತ್ರಜ್ಞರ ಮನೆಯಲ್ಲಿ ಉಳಿದುಕೊಳ್ಳುವ ಪ್ರಸಂಗ ಎದುರಾಯಿತು. ಊಟ ಎಲ್ಲ ಮುಗಿದ ನಂತರ ವ್ಯಕ್ತಿಯು ಸ್ವಾಮಿ ವಿವೇಕಾನಂದರ ಜೊತೆ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಿದನು. ಅನೇಕ ವಿಚಾರಗಳು ವಿನಿಮಯವಾದವು. ಆನಂತರ ಸ್ವಾಮಿ ವಿವೇಕಾನಂದರಿಗೇ ಆ ವ್ಯಕ್ತಿಯು ಒಂದು ಪುಸ್ತಕದ ಕುರಿತು ತುಂಬಾ ಮೆಚ್ಚಿಗೆ ವ್ಯಕ್ತಪಡಿಸುತ್ತಾನೆ. ಇದು ಒಂದು ಅತ್ಯಂತ ಶ್ರೇಷ್ಠ ಪುಸ್ತಕವಾಗಿದ್ದು ಇದನ್ನು 1ತಿಂಗಳಿನಿಂದ ಓದುತ್ತಿದ್ದರು ಇನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾನೆ.

ಆಗ ವಿವೇಕಾನಂದರು ಆ ಪುಸ್ತಕವನ್ನು ನನಗೆ ಕೊಡಿ ನಾನು ಸಹ ಓದಿ ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳುತ್ತೇನೆ ಎಂದು ಕೇಳಿದಾಗ ವ್ಯಕ್ತಿಯು ನಗುತ್ತಾನೆ. ಇದು ಜರ್ಮನ್ ಭಾಷೆಯಲ್ಲಿ ಇರುವ ಪುಸ್ತಕ ಅಲ್ಲದೆ ನನಗೆ ಇಷ್ಟು ತಿಂಗಳುಗಳ ಕಾಲವಾದರೂ ಸಾಧ್ಯವಾಗದ್ದನ್ನು ನೀವು ಕೆಲವು ಗಂಟೆಗಳಲ್ಲಿ ಹೇಗೆ ಮುಗಿಸುತ್ತೀರಿ ಎಂದು ಪ್ರಶ್ನಿಸುತ್ತಾನೆ.

ಆಗ ಪರವಾಗಿಲ್ಲ ನನಗೆ ಕೆಲವು ನಿಮಿಷಗಳ ಕಾಲ ಆ ಪಸ್ತಕವನ್ನು ಕೊಡಿ ಎಂದು ಕೇಳುತ್ತಾರೆ. ನಂತರ ಆ ಪುಸ್ತಕವನ್ನು ಆ ವ್ಯಕ್ತಿಯೂ ಸ್ವಾಮಿ ವಿವೇಕಾನಂದರಿಗೆ ನೀಡುತ್ತಾನೆ.

ಸ್ವಾಮೀಜಿಗಳು ಆ ಪುಸ್ತಕವನ್ನು ತನ್ನ ಎರಡೂ ಕೈಗಳಿಂದ ಹಿಡಿದುಕೊಂಡು ಕಣ್ಣುಮುಚ್ಚಿ ಒಂದು ಗಂಟೆಗಳ ಕಾಲ ಹಾಗೆ ಧ್ಯಾನದಲ್ಲಿ ಕುಳಿತುಕೊಳ್ಳುತ್ತಾರೆ. ಒಂದು ಗಂಟೆಯ ನಂತರ ಆ ವ್ಯಕ್ತಿಯನ್ನು ಕರೆದು ಈ ಪುಸ್ತಕದಲ್ಲಿ ಅಂಥ ಮಹತ್ವವಾದ ಯಾವುದೇ ವಿಚಾರಗಳು ಇಲ್ಲವೆಂದು ಹೇಳುತ್ತಾರೆ.

ಆ ವ್ಯಕ್ತಿಗೆ ತುಂಬಾ ಕೋಪ ಬರುತ್ತದೆ. ಪುಸ್ತಕವನ್ನು ತೆರೆಯದೆಯೇ, ಅದು ನಿಮಗೆ ಅರ್ಥವಾಗದೇ ಇರುವ ಜರ್ಮನ್ ಭಾಷೆಯಲ್ಲಿ ಇರುವ ಪುಸ್ತಕವನ್ನು ಓದದೆ ಅದೇಗೆ ಅದರಲ್ಲಿ ಯಾವುದೇ ತಿರುಳು ಇಲ್ಲವೆಂದು ಹೇಳಿದಿರಿ ಎಂದು ಕೇಳುತ್ತಾನೆ.

ಆಗ ಸ್ವಾಮಿ ವಿವೇಕಾನಂದರು ಅದಕ್ಕೆ ನನ್ನನ್ನು ವಿವೇಕಾನಂದ ಎಂದು ಕರೆಯುವುದು ಎಂದು ನಗುತ್ತಾ ಉತ್ತರಿಸುತ್ತಾರೆ. ಅವರಿಗೆ ಅಂತಹ ಗ್ರಹಿಕಾ ಸಾಮರ್ಥ್ಯ ಇದ್ದಿದ್ದರಿಂದಲೇ ವಿವೇಕಾನಂದ ಎಂದು ಹೆಸರಿಡಲಾಗಿತ್ತು. ರಾಮಕೃಷ್ಣ ಪರಮಹಂಸರು ಅವರಿಗೆ ತಮ್ಮ ಸಕಲ ಶಕ್ತಿ ಮತ್ತು ಚೈತನ್ಯವನ್ನು ದಾರೆ ಎರೆದಿದ್ದರು.