ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಸುಮನ್ ರಂಗನಾಥನ್..ಹುಡುಗ ಯಾರು ಗೊತ್ತಾ.?

ಕನ್ನಡ ಸೇರಿದಂತೆ ತೆಲಗು, ತಮಿಳು, ಹಿಂದಿ ಹೀಗೆ ಬಹುಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ತಾರೆ ಸುಮನ್ ರಂಗನಾಥನ್ ರವರು ಸೋಮವಾರದಂದು ಸರಳವಾಗಿ ಮದುವೆ ಆಗುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು, ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿ ಮಿಂಚಿದ್ದ ಚಂದನವನದ ಚೆಲುವೆ ಸುಮನ್ ರಂಗನಾಥನ್ ರವರು ಉದ್ಯಮಿ ಸಜನ್ ಎಂಬುವರನ್ನು ಮದುವೆ ಆಗಿದ್ದಾರೆ.ಬೆಂಗಳೂರಿನಲ್ಲಿ ನೆಲಸಿರುವ ನಟಿ ಸುಮನ್ ರವರು ಮೂಲತಃ ಕೊಡಗಿನವರಾಗಿದ್ದಾರೆ.

ಮದುವೆ ಆದ ನಂತರ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿರುವ ಸುಮನ್ ರವರು 8 ತಿಂಗಳ ಹಿಂದೆ ಪತಿ ಸಜನ್ ರವರ ಪರಿಚಯವಾಗಿದ್ದು, ನಾವು ಸ್ನೇಹಿತರಾದೆವು. ನಂತರ ಸ್ನೇಹ ಪ್ರೀತಿಯಾಗಿ ಡೇಟಿಂಗ್ ಮಾಡಿದೆವು. ಈಗ ಎರಡು ಕುಟುಂಬಗಳ ಕಡೆಯಿಂದ ಒಪ್ಪಿಗೆ ಪಡೆದು ಮದುವೆಯಾಗಿದ್ದೇವೆ ಎಂದು ಸುಮನ್ ರವರು ಹೇಳಿದ್ದಾರೆ.

ನಾವು ಖಾಸಗಿಯಾಗಿ ಇರಲು ಬಯಸಿದ್ದು, ಯಾರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಹೀಗಾಗಿ ಸರಳವಾಗಿ ಮದುವೆ ಆಗಿ ಜೀವನ ಶುರುಮಾಡಬೇಕೆಂದು ನಾವು ನಮ್ಮ ಕುಟುಂಬದವರ ಜೊತೆ ನಿರ್ಧರಿಸಿ ಕುಟುಂಬಸ್ಥರು ಹಾಗೂ ಆತ್ಮೀಯರ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ನಟಿ ಸುಮನ್ ರವರು ಹೇಳಿದ್ದಾರೆ.

ನಮ್ಮ ಜೋಡಿ`ಮೇಡ್ ಫಾರ್ ಈಚ್ ಅದರ್’ ಆಗಿದ್ದು ನಮ್ಮ ಪತಿ ಸರಳ ಜೀವಿಯಾಗಿದ್ದಾರೆ. ನಮ್ಮ ಆಲೋಚನೆಗಳು ಒಂದೇ ಆಗಿದ್ದು ನಾವು ಒಂದಾಗಲು ಕಾರಣವಾಗಿದೆ ಎಂದು ಸುಮನ್ ರಂಗನಾಥನ್ ಹೇಳಿದ್ದಾರೆ.