ಸುಭಾಷ್ ಚಂದ್ರ ಬೋಸ್ ಕುರಿತ ಅತಿ ದೊಡ್ಡ ರಹಸ್ಯ ಬಹಿರಂಗ!ಯಾರಿದು ಗುಮ್ನಾಮಿ ಬಾಬಾ?ಈ ಬಿಗ್ ನ್ಯೂಸ್ ನೋಡಿ…

ಸುಭಾಷ್ ಚಂದ್ರ ಬೋಸ್ ಅನ್ನೋ ಆ ಒಂದು ಹೆಸರು ಭಾರತೀಯರಿಗೆ ಮೈ ಮನ ರೋಮಾಂಚನಗೊಳ್ಳುವಂತೆ ಮಾಡುತ್ತೆ. ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಅಪ್ರತಿಮ ಮಹಾನ್ ರಾಷ್ಟ್ರನಾಯಕನ ಜೀವನದ ಘಟನೆಗಳೇ ಭಾರತೀಯರಿಗೆ ಸ್ಪರ್ತಿದಾಯಕವಾಗಿದೆ.

ಆದರೆ ಈ ಮಹಾನ್ ದೇಶ ಭಕ್ತನ ಸಾವಿನ ಸುತ್ತ ಹಲವಾರು ಸುದ್ದಿಗಳು ಓಡಾಡುತ್ತಿವೆ. ಧೀಮಂತ ರಾಷ್ಟ್ರ ನಾಯಕರಾದ ನೇತಾಜಿಯವರು 1945 ಆಗಸ್ಟ್ 18 ರಂದು ದಕ್ಷಿಣ ವಿಯೆಟ್ನಾಂ ನ ಸೈಗಾನ್ ನಿಂದ ಟೋಕಿಯೋದತ್ತ ವಿಮಾನದಲ್ಲಿ ಪ್ರಯಾಣಿಸುತ್ತಿರಬೇಕಾದರೆ ಅವರಿದ್ದ ವಿಮಾನ ಸ್ಪೋಟಗೊಂಡ ಪರಿಣಾಮ ಸಾವನ್ನಪ್ಪಿದರೆನ್ನಲಾಗುತ್ತದೆ. ಆದರೆ ಸುಭಾಷ್ ಚಂದ್ರ ಬೋಸ್ ರವರ ಸಾವಿನ ಕುರಿತಂತೆ ಇಂದಿಗೂ ಖಚಿತವಾದ ಆಧಾರಗಳು ಲಭ್ಯವಿಲ್ಲ. ಹಾಗಾಗಿ ನೇತಾಜಿಯವರ ಸಾವಿನ ವಿಷಯ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಈಗ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಕುರಿತ ಅತಿ ದೊಡ್ಡ ರಹಸ್ಯವೊಂದು ಬಹಿರಂಗವಾಗಿದ್ದು, ಸ್ವಾತಂತ್ರ್ಯ ಬಂದ ನಂತರವೂ ಸಹ ನೇತಾಜಿಯವರು ಹಲವು ದಶಕಗಳ ಕಾಲ ಭಾರತದಲ್ಲಿ ನೆಲೆಸಿದ್ದರು ಎಂಬುದಕ್ಕೆ ಪುರಾವೆಗಳು ದೊರೆತಿವೆ.

ಸ್ವಾತಂತ್ರ್ಯ ನಂತರ ಉತ್ತರಪ್ರದೇಶದ ಫೈಜಾಬಾದ್ ನಲ್ಲಿ ಗುಮ್ನಾಮಿ ಬಾಬಾ ಎಂಬ ಹೆಸರಿನಲ್ಲಿ ಸುಭಾಷ್ ಚಂದ್ರ ಬೋಸ್ ಅವರು ನೆಲೆಸಿದ್ದರೆಂದು ಹೇಳಲಾಗಿದೆ. ಪಬಿತ್ರ ಮೋಹನ್ ರಾಯ್ ಎಂಬವರೊಂದಿಗೆ ಗುಮ್ನಾಮಿ ಬಾಬಾ 1962 ರಿಂದ 1985ರ ವರೆಗೆ ನಡೆಸಿರುವ ಪತ್ರ ವ್ಯವಹಾರದ ಮೂಲಕ ಇದು ಬೆಳಕಿಗೆ ಬಂದಿದೆ.

ಮಹಾನ್ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಕುರಿತಂತೆ ಚಂದ್ರಚೂಡ್ ಘೋಷ್ ಮತ್ತು ಅನುಜ್ ಧಾರ್ ಎಂಬವರು ಒಂದು ಪುಸ್ತಕ ಬರೆದಿದ್ದರು.ಗುಮ್ನಾಮಿ ಬಾಬಾ ಅವರು ನಡೆಸಿದ್ದ ಪತ್ರ ವ್ಯವಹಾರವನ್ನು ಈ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿತ್ತು.ಅಲ್ಲದೆ ಇವುಗಳನ್ನು ಅಮೆರಿಕಾದ ಬ್ಯೂರೋ ಆಫ್ ಡಾಕ್ಯುಮೆಂಟ್ ಎಕ್ಸಾಮಿನರ್ಸ್ ಎಂಬ ಸರ್ಟಿಫಿಕೇಟ್ ಪಡೆದಿರುವ ಕಾರ್ಲ್ ಬೆಗೆಟ್ ಅವರಿಗೆ ಕಳುಹಿಸಿಕೊಡಲಾಗಿತ್ತು.

ಮೊದಲಿಗೆ ಈ ಪತ್ರಗಳು ಯಾರು ಬರೆದಿದ್ದಾರೆ ಎಂಬ ಮಾಹಿತಿಯನ್ನು ಕಾರ್ಲ್ ಬೆಗೆಟ್ ಅವರಿಗೆ ಹೇಳಿರಲಿಲ್ಲ. ಸುಭಾಷ್ ಚಂದ್ರ ಬೋಸ್ ಹಾಗೂ ಗುಮ್ನಾಮಿ ಬಾಬಾ ಅವರ ಹಸ್ತಾಕ್ಷರ ಪರಿಶೀಲಿಸಿದ ಅವರು, ಇವುಗಳು ಒಬ್ಬರದ್ದೇ ಹಸ್ತಾಕ್ಷರ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ಹೇಳಲಾಗಿದೆ.ಈ ಕಾರಣದಿಂದಲೇ ಸ್ವಾತಂತ್ರ್ಯ ನಂತರ ಸಹ ಸುಭಾಷ್ ಚಂದ್ರ ಬೋಸ್ ರವರು ಬದುಕಿದ್ದರು ಎಂಬುದು ಖಚಿತವಾದಂತಾಗಿದೆ.