ಅತ್ತೆಯ ಕಾಟದಿಂದ ತಪ್ಪಿಸಿಕೊಳ್ಳಲು ಈ ಅಳಿಯ ಮಾಡಿದ್ದೇನು ಗೊತ್ತಾ.?ಅತ್ತೆ ಕಾಟಕ್ಕೆ ಸಿಕ್ಕಿರೋ ಆ ನಿಮ್ಮ ದೋಸ್ತ್ ಗೆ ಟ್ಯಾಗ್ ಮಾಡಿ…

ಸಾಮಾನ್ಯವಾಗಿ ಅತ್ತೆ ಕಾಟದಿಂದ ಸೊಸೆ ಅಥ್ವಾ ಸೊಸೆ ಕಾಟದಿಂದ ಅತ್ತೆ ಹಿಂಸೆ ಅನುಭವಿಸಿರುವ ಅನೇಕ ಪ್ರಕರಣಗಳನ್ನು ನೋವು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಇಲ್ಲಿ ಅಳಿಯನೊಬ್ಬನು ತನ್ನ ಅತ್ತೆಯ ಕಾಟ ತಾಳಲಾರದೆ ಮಾಡಿದ ಕೆಲಸ ಕೇಳಿದ್ರೆ ಅಚ್ಚರಿ ಪಡುತ್ತೀರಾ..

ಹೌದು, ತನ್ನ ಅತ್ತೆಯ ಕಿರುಕುಳವನ್ನು ಸಹಿಸದ ಅಳಿಯನೊಬ್ಬ ಜೇಡವೊಂದನ್ನು ಮನೆಗೆ ತಂದು ಸಾಕುವುದರ ಮೂಲಕ ಪರಿಹಾರ ಕಂಡುಕೊಂಡಿದ್ದಾನೆ. ಈ ವಿಷಯ ಈಗ ಸಾಮಾಜಿಕ ಜಾಲತಾಣಗಲ್ಲಿ ಸಾಕಷ್ಟು ವೈರಲ್ ಆಗಿದೆ.

ತನ್ನ ಅತ್ತೆಯ ಬಗ್ಗೆ ಹೇಳಿಕೊಂಡಿರುವ ಈತ, ನನ್ನ ಪತ್ನಿಯ ತಾಯಿ ಯಾವಾಗಲೂ ಹೇಳದೇ ಕೇಳದೆಯೇ ಮನೆಗೆ ಬಂದು ಬಿಡುತ್ತಿದ್ದರು. ಆದರೆ ಇವರಿಂದ ಸಾಕಷ್ಟು ಕಿರಿಕಿರಿ ಆಗುತಿತ್ತು. ನನ್ನ ಅತ್ತೆಯ ಕಾರಣದಿಂದ ನನ್ನ ಖಾಸಗಿ ತನವೆ ಹಾಳಾಗಿತ್ತು. ನನ್ನ ಹೆಂಡತಿಯೂ ಕೂಡ ನನ್ನ ಬಗ್ಗೆ ಸರಿಯಾಗಿ ಗಮನ ಕೊಡುತ್ತಿರಲಿಲ್ಲ. ಇದರಿಂದ ನಾನು ಸಾಕಷ್ಟು ಕಿರುಕುಳ ಅನುಭವಿಸಿದ್ದೆ. ಇದಕ್ಕೆ ಪರಿಹಾರ ಕೂಡ ಹುಡುಕುತ್ತಿದ್ದೆ.

ಹೀಗೆ ಯೋಚನೆಯಲ್ಲಿದ್ದ ನನಗೆ ಒಂದು ದಿನ ನಮ್ಮ ಅತ್ತೆಯ ಕಾಟದಿಂದ ತಪ್ಪಿಸಿಕೊಳ್ಳಲು ಪರಿಹಾರವೊಂದು ಸಿಕ್ಕಿತು. ನಮ್ಮ ಅತ್ತೆಗೆ ಜೇಡದಂಥ ಪ್ರಾಣಿಗಳನ್ನು ಕಂಡರೆ ಭಯ ಅಂತ ಗೊತ್ತಾಯಿತು. ಅಂದಿನಿಂದ ಜೇಡವೊಂದನ್ನು ತಂದು ಮನೆಯಲಿ ಸಾಕತೊಡಗಿದೆ. ಜೇಡ ನಮ್ಮ ಮನೆಯಲ್ಲಿ ಬಂದಾಗಿನಿಂದ ನನಗೆ ಅತ್ತೆಯ ಕಾಟ ತಪ್ಪಿದೆ ಎಂದು ಆ ಅಳಿಯ ಹೇಳಿಕೊಂಡಿದ್ದಾನೆ.