ಕಾಫಿ ಕಿಂಗ್ ಸಿದ್ದಾರ್ಥ್ ಅವರ ಕಾರ್ ಡ್ರೈವರ್ ಆಗ ಹೇಳಿದ್ದು ಒಂದು..ಆದರೆ ಅಲ್ಲಿ ನಡೆದಿರೋ ಸತ್ಯಾಂಶನೇ ಬೇರೆ.!

ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಹಳ್ಳಿಯ ಕಾಫಿ ಕಿಂಗ್ ಸಿದ್ದಾರ್ಥ್ ಅವರು ಪ್ರಕರಣ ಈಗ ಅನುಮಾನಗಳಿಗೆ ಕಾರಣವಾಗಿದೆ.

ಈಗ ಸಿದ್ದಾರ್ಥ್ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಈಗಾಗಲೇ ತನಿಖೆ ಕೈಗೊಂಡಿರುವ ಪೊಲೀಸರು ಹಲವಾರು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದು, ಸಿದ್ದಾರ್ಥ್ ಅವರ ಕಾರ್ ಡ್ರೈವರ್ ಬಸವರಾಜ್ ಕೊಟ್ಟಿರುವ ಹೇಳಿಕೆಗಳೆ ಅನುಮಾನಕ್ಕೆ ಕಾರಣವಾಗಿದೆ.

ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರು ಪೊಲೀಸ್ ವಿಚಾರಣೆ ವೇಳೆ, ಸೋಮವಾರ ಸಂಜೆ 7 ಗಂಟೆ ವೇಳೆಗೆ ನಾವು ನೇತ್ರಾವತಿ ನದಿಯ ಸೇತುವೆ ಬಳಿ ತಲುಪಿದ್ದು, ಅಲ್ಲಿಂದ ಸಿದ್ದಾರ್ಥ್ ಅವರು ಮೊಬೈಲ್ ನಲ್ಲಿ ಮಾತನಾಡಿಕೊಂಡು ಕಾರಿನಿಂದ ಇಳಿದು ಹೋದರು ಎಂಬ ಹೇಳಿಕೆಯನ್ನು ನೀಡಿದ್ದರು. ಈಗ ಸಿದ್ದಾರ್ಥ್ ಅವರ ಕಾರು ಚಾಲಕನ ಹೇಳಿಕೆಯೇ ಅನುಮಾನಕ್ಕೆ ಕಾರಣವಾಗಿದೆ.

ಅದೇ ರಸ್ತೆಯಲ್ಲಿ ಬರುವ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಸಿದ್ದಾರ್ಥ್ ಅವರಿದ್ದ ಕಾರು ಸೋಮವಾರ ಸಂಜೆ 5.28ಕ್ಕೆ ಟೋಲ್ ಗೇಟ್ ನಿಂದ ಹೋಗಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸಿಕ್ಕಿದ್ದು, ಅನುಮಾನಕ್ಕೆ ಕಾರಣವಾಗಿದೆ,ಆ ಟೋಲ್ ಗೇಟ್ನಿಂದ ನೇತ್ರಾವತಿ ಸೇತುವೆ ಬಳಿ ಬರಲು ಕೇವಲ 35 ರಿಂದ 40 ನಿಮಿಷಗಳು ಮಾತ್ರ ಆಗುತ್ತೆ. ಟೋಲ್ ಗೇಟ್ ನಿಂದ ನೇತ್ರಾವತಿ ಸೇತುವೆಗೆ 25 ಕಿಲೋಮೀಟರುಗಳ ಆಗಲಿದೆ. ಇದರ ನಡುವೆ ಒಂದುವರೆ ಗಂಟೆ ಅವರು ಏನು ಮಾಡುತ್ತಿದ್ದರು ಎಂಬ ಹಲವಾರು ಪ್ರಶ್ನೆಗಳು ಎದ್ದಿವೆ.