ಮಹಾ ಶಿವರಾತ್ರಿಯ ದಿವಸ ಅದೊಂದು ಕೆಲಸ ಮಾಡಿದರೆ ಎಂತಹ ಕಷ್ಟವೂ ಮಾಯವಾಗುತ್ತದೆ.ನಿಮ್ಮ ಪೂರ್ವ ಜನ್ಮದ ಅನಿಷ್ಠಗಳು ತೊಲಗಿ ಜೀವನದಲ್ಲಿ ಶುಭೋದಯವಾಗುತ್ತದೆ.

ಮಹಾ ಶಿವರಾತ್ರಿಯು ಶಿವನನ್ನು ವಿಶೇಷವಾಗಿ ಆರಾಧಿಸುವ ಶುಭದಿನ. ಪರಮ ಶಿವನು ಅಂದು ತನ್ನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಆಶೀರ್ವದಿಸುತ್ತಾನೆ. ಭಕ್ತರು ಅಂದು ಪಾರ್ವತಿ ಪರಮೇಶ್ವರನನ್ನು ಭಕ್ತಿ ಭಾವಗಳಿಂದ ಶ್ರದ್ಧಾ ಪೂರ್ವಕವಾಗಿ ಆರಾಧಿಸುತ್ತಾರೆ. ಬೆಳಗ್ಗೆ ಎದ್ದು ಉಪವಾಸದಿಂದ ಇದ್ದು ದೇವಾಲಯಗಳಿಗೆ ಹೋಗುತ್ತಾರೆ, ನಂತರ ಮನೆಯಲ್ಲಿ ಶಿವನ ಪೂಜೆ ಮಾಡಿ ನೈವೇದ್ಯ ನೀಡುತ್ತಾರೆ ನಂತರ ಜಾಗರಣೆ ಹೀಗೆ ತಲತಲಾಂತರದಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.

ಶಿವ ರಾತ್ರಿಯ ದಿನ ಹೀಗೆ ಶಿವನ ಆರಾಧನೆ ಮಾಡುವುದರಿಂದ ಪೂರ್ವ ಜನ್ಮದ ಪಾಪಗಳು ಕಳೆದು ಮುಕ್ತಿ ದೊರಕುತ್ತದೆ ಎಂದು ವರ್ಷಾನು ವರ್ಷಗಳಿಂದ ನಂಬಿ ಕೊಂಡು ಬಂದಿದ್ದಾರೆ. ಮತ್ತು ನಮ್ಮ ಧರ್ಮ ಶಾಸ್ತ್ರವೂ ಇದನ್ನೇ ಹೇಳುತ್ತದೆ.

ಇಂತಹ ಶುಭ ದಿನದಂದು ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ಎಂತಹ ಕಷ್ಟವೂ ದೂರವಾಗಿ ಶುಭವಾಗುತ್ತದೆ. ಅದೇನೆಂದರೆ ಶಿವನ ಆರಾಧನೆ. ಇದರಲ್ಲಿ ಉಪವಾಸ, ಅಭಿಷೇಕ, ಜಾಗರಣೆ, ನೈವೇದ್ಯ ಎಲ್ಲವೂ ಸೇರಿವೆ.

ಶಿವರಾತ್ರಿಯಂದು ಉಪವಾಸ ಮಾಡುವುದು ನಮ್ಮ ಪದ್ಧತಿ. ಈ ದಿನ ಶಿವನ ಹೆಸರಿನಲ್ಲಿ ಉಪವಾಸ ಮಾಡುವುದು ಅತಿ ಶ್ರೇಷ್ಠ ವಾದದ್ದು ಎಂದು ನಮ್ಮ ಶಾಸ್ತ್ರ ಪುರಾಣ ಹೇಳುತ್ತದೆ. ಕೇವಲ ನೀರನ್ನು ಮಾತ್ರ ಸೇವಿಸಿ ಸೂರ್ಯ ಮುಳುಗುವವರೆಗೂ ಉಪವಾಸ ಮಾಡಬೇಕು. ಬಳಿಕ ರಾತ್ರಿಯ ಪೂಜೆ ಮುಗಿದ ಮೇಲೆ , ದೇವರಿಗೆ ಪೂಜೆ, ನೈವೇದ್ಯವನ್ನು ಸಲ್ಲಿಸಿದ ಬಳಿಕ ಉಪವಾಸ ಮುಗಿಸಬೇಕು. ಸಾಮಾನ್ಯವಾಗಿ ಜಾಗರಣೆ ಮುಗಿದ ನಂತರ ಮರುದಿನವೇ ಉಪವಾಸವನ್ನು ತೀರಿಸಲಾಗುತ್ತದೆ. ನಿಮಗೆ ಯಾವುದು ಅನುಕೂಲವೋ ಅದನ್ನೇ ನೀವು ಪಾಲಿಸಬಹುದು.

ಅಭಿಷೇಕ ಪರಮಶಿವನನ್ನು ಅಭಿಷೇಕ ಪ್ರಿಯ ಎಂದೇ ಕರೆಯಲಾಗುತ್ತದೆ. ಹೇಗೆ ಮಹಾವಿಷ್ಣುವಿಗೆ ಅಲಂಕಾರ ಅತಿ ಪ್ರಿಯವಾದದ್ದೋ ಹಾಗೆ ಶಿವನಿಗೆ ಅಭಿಷೇಕ ಪ್ರಿಯವಾದದ್ದು. ಮಹಾ ಶಿವರಾತ್ರಿಯ ದಿವಸ ಶಿವನಿಗೆ ಹಾಲು, ಮೊಸರು, ಸಕ್ಕರೆ, ಜೇನು ತುಪ್ಪ, ಬೆಣ್ಣೆ, ಪವಿತ್ರ ಜಲ ಮೊದಲಾದವುಗಳಿಂದ ಅಭಿಷೇಕ ಮಾಡಬೇಕು. ಹಾಲಿನ ಅಭಿಷೇಕ ಆರೋಗ್ಯವನ್ನು, ತುಪ್ಪ ಸಿರಿವಂತಿಕೆಯನ್ನು, ಸಕ್ಕರೆ ಸಮೃದ್ಧಿಯನ್ನು, ಹೀಗೆ ಪ್ರತಿಯೊಂದು ಪದಾರ್ಥಗಳ ಅಭಿಷೇಕವೂ ಒಂದೊಂದು ಫಲವನ್ನು ನೀಡುತ್ತದೆ.

ನಿಮಗೆ ಇದಾವ ಅಭಿಷೇಕ ಮಾಡುವ ಶಕ್ತಿ ಇಲ್ಲವಾದರೆ ಕೇವಲ ಪವಿತ್ರವಾದ ನೀರಿನಿಂದ ಅಭಿಷೇಕ ಮಾಡಿದರೂ ಸರಿಯೇ. ಲಿಂಗ ರೂಪಿ ಶಿವನಿಗೆ ಶಿವರಾತ್ರಿಯಂದು ಅಭಿಷೇಕ ಮಾಡುವುದು ಅತಿ ಶ್ರೇಷ್ಠ ವಾದದ್ದು.

ಪೂಜೆ ಶಿವನನ್ನು ಧತುರ, ಬಿಲ್ವಪತ್ರೆ, ರುದ್ರಾಕ್ಷಿ , ವಿಭೂತಿ ಮೊದಲಾದವುಗಳಿಂದ ಪೂಜಿಸಲಾಗುತ್ತದೆ. ಶಿವರಾತ್ರಿಯಂದು ಕೇವಲ ಬಿಲ್ವ ಪತ್ರೆಯಿಂದ ಶಿವನನ್ನು ಪೂಜಿಸಿದರೆ ಆತನ ಕೃಪೆ ಗೆ ಪಾತ್ರವಾಗುವುದು ಖಂಡಿತ. ಶಿವರಾತ್ರಿಯಂದು ಶ್ವೇತ ಪುಷ್ಪಗಳಿಂದ ಶಿವ ಪಾರ್ವತಿಯರನ್ನು ಪೂಜಿಸಿ, ಶಿವಲಿಂಗಕ್ಕೆ ಬಿಲ್ವ ಪತ್ರೆ ಮೊದಲಾದ ತರ ತರ ಹೂವು, ಪತ್ರೆ ಗಳಿಂದ ಆರಾಧಿಸುವುದು ಅತ್ಯಂತ ಶುಭದಾಯಕ.

ಜಾಗರಣೆ ಶಿವರಾತ್ರಿ ಜಾಗರಣೆ ಮಾಡಲು ಕೆಲವು ವಿಧಾನಗಳಿವೆ. ಭಜನೆ, ಪೂಜೆ ಹೀಗೆ ಹಲವು. ರಾತ್ರಿ ಇಡೀ ಶಿವನನ್ನು ಭಕ್ತಿಯಿಂದ ನೆನೆದು ಜಾಗರಣೆ ಮಾಡುವುದರಿಂದ ಅವಶ್ಯಕವಾಗಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಶಿವರಾತ್ರಿಯ ದಿವಸ ಹೀಗೆ ಉಪವಾಸ, ಪೂಜೆ ಜಪ ತಪಗಳಿಂದ ಶಿವನನ್ನು ಆರಾಧಿಸುವುದರಿಂದ ಪೂರ್ವ ಜನ್ಮದ ಪಾಪಗಳು ದೂರವಾಗಿ ಶಿವನ ಅನುಗ್ರಹ ದೊರೆತು ಮುಕ್ತಿ ದೊರೆಯುತ್ತದೆ. ಮತ್ತು ಎಂತಹ ಕಷ್ಟಗಳೂ ಬೇಗನೆ ದೂರವಾಗುತ್ತದೆ.