ಹಳ್ಳಿ ಹುಡುಗ ಹನುಮಂತನಿಗೆ ಹಂಸಲೇಖ, ವಿಜಯ್ ಪ್ರಕಾಶರಿಂದ ಸಿಕ್ತು ಭರ್ಜರಿ ಗಿಪ್ಟ್!ಏನ್ ಗೊತ್ತಾ…

ಈಗಂತೂ ಕನ್ನಡದ ಯಾವುದೇ ಚಾನೆಲ್ಗಳನ್ನು ನೋಡಿದರೂ ರಿಯಾಲಿಟಿ ಶೋಗಳದ್ದೇ ದರ್ಬಾರ್. ಅದರಲ್ಲೂ ಕನ್ನಡಿಗರಿಗೆ ಹಲವಾರು ರಿಯಾಲಿಟಿ ಶೋಗಳನ್ನು ನೀಡಿ ಮನರಂಜನೆ ಕೊಟ್ಟಿರುವ, ಕನ್ನಡಿಗರ ಜನ ಮೆಚ್ಚಿನ ಖಾಸಗಿ ವಾಹಿನಿ ಆಗಿರುವ ಜೀ ಕನ್ನಡದಲ್ಲಿ ಈಗಾಗಲೇ ಸರಿಗಮಪ ಸೀಸನ್ 15 ಶುರುವಾಗಿದ್ದು, ಕರ್ನಾಟಕದ 30 ಜಿಲ್ಲೆಗಳಿಂದ ಪ್ರತಿಭಾವಂತ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ.

ಸರಿಗಮಪ ಸೀಸನ್ ಹದಿನೈದರ ತೀರ್ಪುಗಾರರಾಗಿ, ತನ್ನ ವಿಶಿಷ್ಟ ಶೈಲಿ ಇಂದ ಹಾಡಿ ಜನರ ಗಮನ ಸೆಳೆದಿರುವ ವಿಜಯ ಪ್ರಕಾಶ್, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಮ್ಯೂಸಿಕ್  ಮಾಂತ್ರಿಕ ಅರ್ಜುನ್ ಜನ್ಯ ಮತ್ತು ಇವರ ಜೊತೆಗೆ ಮಹಾ ಗುರುಗಳಾದ ನಾದ ಬ್ರಹ್ಮ  ಹಂಸಲೇಖರವರು ತೀರ್ಪುಗಾರರಾಗಿದ್ದಾರೆ.

ತನ್ನ ಉಟ್ಟು ಬಟ್ಟೆಯಿಂದಲೇ ಕರ್ನಾಟಕದ ಒಂದು ಕುಗ್ರಾಮದಿಂದ ಬಂದು ಮೊದಲ ಜಾನಪದ ಹಾಡಿನಲ್ಲಿ ಕರ್ನಾಟಕದ ಎಲ್ಲ ಜನರ ಮನಸ್ಸನ್ನು ಸೆಳೆದಿರುವ ಉತ್ತರ ಕರ್ನಾಟಕದ ಪ್ರತಿಭಾವಂತ ಗಾಯಕ ಹನುಮಂತ ಎಲ್ಲರ ಗಮನಸೆಳೆದಿದ್ದಾರೆ ಇವನ ಹಾಡಿಗೆ ಮನಸೋತಿದ್ದ ನಾದ ಬ್ರಹ್ಮ ಹಂಸಲೇಖ ಅವರು ಹನುಮಂತನಿಗೆ ತಮ್ಮ ಹೆಗಲ ಮೇಲಿದ್ದ ಟವೆಲನ್ನು ಕೊಟ್ಟು ಅವನ ಮೇಲೆ ಅವಳನ್ನು ಹಾಕಿಕೊಂಡಿದ್ದರು.

ಮೊನ್ನೆ ಶನಿವಾರದಂದು ನಡೆದ ಸರೆಗಮಪ ಕಾರ್ಯಕ್ರಮದಲ್ಲಿ ಮತ್ತೊಂದು ಜನಪದ ಹಾಡನ್ನು ಹಾಡಿ ಮತ್ತೊಮ್ಮೆ ತೀರ್ಪುಗಾರರ ಜೊತೆ ಜನರ ಮನಸ್ಸನ್ನು ಸಹ ಗೆದ್ದಿದ್ದಾನೆ.ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಲಿ ಕಾಣೋ ಎಂಬ ಜನಪದ ಹಾಡನ್ನ ಹಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಕುರಿ ಗಾಹಿ ಹನುಮಂತ.

ತುಂಬಾ ಭಾವಪೂರ್ಣವಾಗಿ ಹಾಡಿದ ಹಾಡಿಗೆ ಮನಸೋತ ಮನಸೋತ ಗಾಯಕ ವಿಜಯ್ ಪ್ರಕಾಶ್ ಅವರು ಮುಂದಿನವಾರ ಹೆಡ್ ಫೋನ್ ಕೊಡಿಸುವುದಾಗಿ ಹೇಳಿದ್ದಾರೆ.ಇದರ ಜೊತೆ ಅವರ ಊರಿನಿಂದಲೇ ಅವನಿಗಿಷ್ಟವಾದ ರೊಟ್ಟಿ, ಬದನೆಕಾಯಿ ಪಲ್ಲೆ, ಕೆಂಪು ಚಟ್ನಿ ತರಿಸಿ ಕೊಡುವುದಾಗಿ ಹನುಮಂತನಿಗೆ  ಹೇಳಿದ್ದಾರೆ.ಜೊತೆಗೆ ಹನುಮಂತನ ತಂದೆ ತಾಯಿಗಳನ್ನು ಬೆಂಗಳೂರಿಗೆ ಕರೆಸಬೇಕಾಗಿ ಜೀ ವಾಹಿನಿ ತಂಡಕ್ಕೆ ಕೇಳಿ ಕೊಂಡಿದ್ದಾರೆ.

ನಂತರ ನಾದಬ್ರಹ್ಮ ಹಂಸಲೇಖ ರವರು ಮಾತನಾಡಿ ಇವನ ಜನಪದ ಹಾಡಿಗೆ ತುಂಬಾ ಮೆಚ್ಚಿಕೊಂಡು ನೀನು ಜಾನಪದ ಲೋಕದ ಒಂದು ಕನಸು. ಇನ್ನು ಯಾವುದೇ ಕಾರಣಕ್ಕೂ ಆಡುವುದನ್ನು ಬಿಡು ಬಿಡಬೇಡ ಎಂದು ಹೇಳಿದ್ದಾರೆ. ಗಾಯಕ ಹನುಮಂತ ಮಾತನಾಡಿ ಕುರಿಗಳನ್ನು ಮೇಯಿಸುವ ದರ ಜೊತೆಗೆ ಹಾಡನ್ನು ಸಹ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿದ ನಾದಬ್ರಹ್ಮ ಹಂಸಲೇಖ ಅವರು ನನಗೆ 12 ಎಕರೆ ತೋಟವಿದ್ದು ನಿನಗೆ 300 ಕುರಿಗಳನ್ನು ತರಿಸಿಕೊಡುತ್ತೇನೆ. ಹಗಲಿನಲ್ಲಿ ತೋಟದಲ್ಲಿ ಕುರಿಗಳನ್ನು ಮೇಯಿಸು. ಸಂಜೆ ವೇಳೆ ನಮ್ಮ ಸಂಗೀತ ಕಾಲೇಜಿನಲ್ಲಿ ಐದು ವರ್ಷಗಳ ಕಾಲ ಸಂಗೀತವನ್ನು ಸಹ ಕಲಿ.ಇದಕ್ಕಾಗಿ ಬೆಂಗಳೂರಿಗೆ ಬರುತ್ತಿಯಾ…5 ವರ್ಷಗಳ ನೀನು ಇಲ್ಲೇ ಸಂಗೀತ ಕಲಿಯಬೇಕಾಗುತ್ತೆ ಆಗುತ್ತಾ ಎನ್ನಲು ಎಡಕ್ಕೆ ಹನುಮಂತ ಕೂಡ ಒಪ್ಪಿದ್ದಾರೆ.

ಸರೆಗಮಪ ಸೀಸನ್ 15ರ ಶುರುವಿನಲ್ಲೇ ಹನುಮಂತನಿಗೆ ಸಿಕ್ಕ ಭರ್ಜರಿ ಗಿಫ್ಟ್ ಇದಾಗಿದೆ.ಉತ್ತರ ಕರ್ನಾಟಕದ ಕುಗ್ರಾಮದಿಂದ ಬಂದಿರುವ ಹನುಮಂತ ಕುರಿಗಳನ್ನು ಮೇಯಿಸಿಕೊಂಡು ಹಾಡು ಕಲಿತಿದ್ದು ಈ ಕಾರ್ಯಕ್ರಮದಿಂದ ಇವನಿಗೆ ಅತಿ ಹೆಚ್ಚು ಅವಕಾಶಗಳು ಸಿಕ್ಕಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸೋಣ…