SSLC ಫಲಿತಾಂಶದಲ್ಲಿ ಹಾಸನ ರಾಜ್ಯಕ್ಕೆ ಫಸ್ಟ್ ಬರಲು ಕಾರಣರಾದ ರೋಹಿಣಿಯವರು ಪಟ್ಟ ಪ್ರಯತ್ನಗಳನ್ನ ಕೇಳಿದ್ರೆ..?

ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಅಚ್ಚರಿಗೆ ಕಾರಣವಾಗಿದ್ದು 89.33 ಫಲಿತಾಂಶದೊಂದಿಗೆ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದರಮೂಲಕ ಹೊಸ ದಾಖಲೆಗೆ ನಾಂದಿ ಹಾಡಿದೆ. ಈ ಅಚ್ಚರಿಯ ಫಲಿತಾಂಶ ಬರಲು ಮೂಲ ಕಾರಣ ಜಿಲ್ಲಾಡಳಿತದ ಸತತ ಪ್ರಯತ್ನ ಎಂದು ಹೇಳಲಾಗುತ್ತಿದೆ.

ಇಡೀ ರಾಜ್ಯದಲ್ಲಿಯೇ ಹಾಸನ ಜಿಲ್ಲೆ SSLC ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಇದಕ್ಕೆಲ್ಲಾ ಕಾರಣ ಹಾಸನದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಎಂದು ಹೇಳಲಾಗಿದೆ. ಅವರು ರೂಪಿಸಿದ ಪ್ಲಾನ್ ಗೆ ತಕ್ಕಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಶಿಕ್ಷಕರ ಕಠಿಣ ಪರಿಶ್ರಮದಿಂದಾಗಿ ಹಾಸನ ಜಿಲ್ಲೆ ಕರ್ನಾಟಕದಲ್ಲಿಯೇ ಪ್ರಥಮ ಸ್ಥಾನ ಬರಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಯವರು ಅಧಿಕಾರ ವಹಿಸಿಕೊಂಡ ಸಂಧರ್ಭದಲ್ಲಿ ಆಗ ಬಂದ SSLC ಫಲಿತಾಂಶದಲ್ಲಿ ಹಾಸನಕ್ಕೆ 31ನೇ ಸ್ಥಾನ ಸಿಕ್ಕಿತ್ತು. ಇದನ್ನು ಕಂಡು ಏನಾದರೂ ಮಾಡಿ ಹಾಸನದ ಹತ್ತನೇ ತರಗತಿಯ ಫಲಿತಾಂಶವನ್ನು ಹೆಚ್ಚಳ ಮಾಡಬೇಕೆಂಬ ಉದ್ದೇಶದಿಂದ ರೋಹಿಣಿಯವರು ಸತತ ಪ್ರಯತ್ನ ನಡೆಸಿದ್ರು.

ಇದಕ್ಕಾಗಿ ಕಳೆದ 2 ವರ್ಷಗಳಿಂದ ರೇಡಿಯೋ ಮೂಲಕ ಮಕ್ಕಳಿಗೆ ಪಾಠ ಹೇಳೋದು, ಪರೀಕ್ಷೆಗೆ ಹೇಗೆ ಓದಬೇಕು, ಯಾವ ರೀತಿ ಬರೆಯಬೇಕು ಎಂಬ ವಿಚಾರಗಳನ್ನು ಪ್ರಸಾರ ಮಾಡಲಾಯ್ತು. ಇದಲ್ಲದೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳತ್ತ ಹೆಚ್ಚು ಗಮನ ಹರಿಸಿ ಸರಿಯಾದ ನುರಿತ ಶಿಕ್ಷಕರಿಲ್ಲದೆ ಮಕ್ಕಳು ಫೇಲ್‍ ಆಗುತ್ತಿರುವ ವಿಚಾರವನ್ನು ತಿಳಿದುಕೊಂಡ್ರು.

ನಂತರ ಪ್ರೈವೇಟ್ ಶಾಲೆಗಳ ಪ್ರಾಂಶುಪಾಲರುಗಳಿಗೆ ವೈಯುಕ್ತಿಕವಾಗಿ ಪತ್ರ ಬರೆದು ಹಾಸನ ಜಿಲ್ಲೆಗೆ ಉತ್ತಮ ಫಲಿತಾಂಶ ತರಲು ಸಹಕಾರ ಬೇಕೆಂದು ಕೇಳಿಕೊಂಡ್ರು. ರೋಹಿಣಿಯವರ ಈ ಮನವಿಗೆ ಸ್ಪಂದಿಸಿದ ಖಾಸಗಿ ಶಾಲೆಯ ಶಿಕ್ಷಕರು ಹಳ್ಳಿಗಾಡಿನ ಭಾಗದ ಮಕ್ಕಳಿಗೂ ಪಾಠ ಮಾಡಿದ್ರು.

ಇದಕ್ಕಾಗಿ ತರಗತಿಗಳು ಆರಂಭವಾದ ದಿನದಿಂದಲೇ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್‍ ತೆಗೆದುಕೊಂಡರು. ಕಳೆದ ವರ್ಷದಿಂದಲೇ ಕೋಚಿಂಗ್ ಕ್ಲಾಸ್ ನೀಡಲು ಸಹ ಆರಂಭ ಮಾಡಿದ್ರು.ಅದರ ಫಲವಾಗಿಯೇ ಕಳೆದ ಬಾರಿಯ ಫಲಿತಾಂಶದಲ್ಲಿ 7ನೇ ಸ್ಥಾನ ಪಡೆದುಕೊಂಡಿದ್ದ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಎಲ್ಲಾ ಸತತ ಪ್ರಯತ್ನಗಳಿಂದ ಈಗ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದು ಇದನ್ನು ನೋಡಿ ರೋಹಿಣಿ ಸಿಂಧೂರಿ ಫುಲ್ ಖುಷಿಯಾಗಿದ್ದಾರೆ. ಇವರು ನಿರೀಕ್ಷೆ ಮಾಡಿದ್ದು ಮೂರನೇ ಸ್ಥಾನದಲ್ಲಿ ಬರಬಹುದು ಅಂತ. ಆದರೆ ಈಗ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದು, ಈ ಸಾಧನೆಯಗೆ ಜೊತೆಯಾದ ಎಲ್ಲರಿಗೂ ರೋಹಿಣಿ ಸಿಂಧೂರಿಯವರು ಧನ್ಯವಾದ ತಿಳಿಸಿದ್ದಾರೆ.