ನಟ ನಿರ್ದೇಶಕ ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಪತ್ನಿ ಹಾಗೂ ಪುಟ್ಟ ಮಗನಿಂದ ಸಿಕ್ತು ವಿಶೇಷ ಉಡುಗೊರೆ.!

ಸ್ಯಾಂಡಲ್ವುಡ್ ನಲ್ಲಿ ಒಂದು ಹೊಸ ಮೈಲುಗಲ್ಲನ್ನೇ ಹುಟ್ಟು ಹಾಕಿದ್ದ ನಟ ಹಾಗೂ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಮಾರ್ಚ್ ತಿಂಗಳಿನಲ್ಲಿ ತಂದೆಯಾಗಿದ್ದರು. ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರಿಷಬ್ ಶೆಟ್ಟಿಯವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಒಂದು ಪಾತ್ರವನ್ನು ನೀಡಿದ್ದು, ಆ ಪಾತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎರಡು ಟ್ವೀಟ್ ಗಳನ್ನು ಮಾಡಿರುವ ರಿಷಬ್ ಶೆಟ್ಟಿ ಒಂದು ಟ್ವೀಟ್ ನಲ್ಲಿ ತನ್ನ ಪತ್ನಿ ಹಾಗೂ ಮಗನ ಜೊತೆ ಇರುವ ಫೋಟೋ ಹಾಗೂ ಮತ್ತೊಂದು ಟ್ವೀಟ್ ನಲ್ಲಿ ತಮ್ಮ ಮಗನ ಹೆಜ್ಜೆ ಗುರುತು ಇರುವ ಪತ್ರ ಹಂಚಿಕೊಂಡಿದ್ದಾರೆ.ಆದರೆ ರಿಷಬ್ ಶೆಟ್ಟಿ ತಮ್ಮ ಮಗನ ಫೋಟೋ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರೂ, ತಮ್ಮ ಮಗನ ಫೋಟೋ ಮಾತ್ರ ರಿವೀಲ್ ಮಾಡಿಲ್ಲ.

ರಿಷಬ್ ಶೆಟ್ಟಿ ಟ್ವೀಟ್ ನಲ್ಲಿ ಏನಿದೆ ಗೊತ್ತಾ.?

ಹುಟ್ಟುಹಬ್ಬದ ಸಂಭ್ರಮಕ್ಕೆ ‘ಚೆರ್ರಿ ಆನ್ ದಿ ಕೇಕ್’ ಎಂಬಂತೆ, ಮಗನಿಗೆ ಮೂರು ತಿಂಗಳು ತುಂಬಿದ ಸಂತಸವು ಜೊತೆಯಾಗಿದೆ. ಈ ಹುಟ್ಟುಹಬ್ಬಕ್ಕೆ ತುಟಿಯರಳಿಸಿ ನಗುವ, ಈ ಮುದ್ದು ಕಂದನನ್ನು ಉಡುಗೊರೆಯಾಗಿ ಕೊಟ್ಟ ಪ್ರಗತಿ, ಅವನ ಪಾದಗಳ ಗುರುತಿನ ಜೊತೆಗೆ, ಅವನೇ ಸಹಿ ಮಾಡಿದ ಈ ಮುದ್ದಾದ ಪತ್ರವನ್ನೂ ನೀಡಿದ್ದಾಳೆ ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ಇದಕ್ಕಿಂತ ಹೆಚ್ಚಿನ ಖುಷಿಯನ್ನು ಜಗತ್ತಿನ ಮತ್ಯಾವ ಉಡುಗೊರೆಗಳೂ ನೀಡಲು ಸಾಧ್ಯವಿಲ್ಲ. ಮುಂದೆ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮನೆಯ ತುಂಬಾ ಓಡಾಡುವ ಕ್ಷಣಗಳಿಗಾಗಿ ಕಾತರದಿಂದ ಕಾಯುತ್ತಾ, ಈ ದಿನದ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.