ಮತ್ತೆ ಕಮಾಲ್ ಮಾಡಿದ ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ಹಳದಿ ಸೀರೆ ಅಧಿಕಾರಿ.!

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಎಲೆ ಮರೆ ಕಾಯಿಯಂತಿರುವವರು ತಮ್ಮ ವಿಭಿನ್ನ ಪ್ರತಿಭೆಯಿಂದ ರಾತ್ರೋ ರಾತ್ರಿ ಸ್ಟಾರ್ ಆಗಿಬಿಡುತ್ತಾರೆ.

ಇದಕ್ಕೆ ನಿದರ್ಶನ ಎಂಬಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಯಾಗಿದ್ದ ಪಿಡಬ್ಲ್ಯುಡಿ ಅಧಿಕಾರಿ ರೀನಾ ದ್ವಿವೇದಿ ಹಳದಿ ಸೀರೆ ಉಟ್ಟು, ತಮ್ಮ ಗ್ಲಾಮರ್ ನಿಂದಲೇ ಸಖತ್ ಸುದ್ದಿಯಾಗಿದ್ದರು. ಇವ್ರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈಗ ಮತ್ತೆ ಎಲ್ಲರ ಗಮನ ಸೆಳೆದಿರುವ ರೀನಾ ದ್ವಿವೇದಿ ಅವರ ವಿಡಿಯೋವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ರಾತ್ರೋ ರಾತ್ರಿ ಸ್ಟಾರ್ ಆದ ಹಳದಿ ಸೀರೆ ಅಧಿಕಾರಿ.!ಫಿದಾ ಆದ ನೆಟ್ಟಿಗರು ಆಕೆ ಯಾರೆಂದು ಹುಡುಕಾಡಿದ್ದೆ ಹುಡುಕಾಡಿದ್ದು..

ಹೌದು, ಸಮಾರಂಭವಿಂದರಲ್ಲಿ ರೀನಾ ದ್ವಿವೇದಿ ಸಪ್ನಾ ಚೌಧರಿಯ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ರೀನಾ ದ್ವಿವೇದಿ ಹಸಿರು ಸೀರೆ ಉಟ್ಟಿದ್ದು, ಡ್ಯಾನ್ಸ್ ಮಾಡಿರುವ ಈ ವಿಡಿಯೋ ಟಿಕ್ ಟಾಕ್ ಮತ್ತು ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು ಸಖತ್ ವೈರಲ್ ಆಗಿದೆ.