ನಟ ವಿಜಯ್ ಗೆ ಬಾಬಿ ಎಂದು ಕರೆದು ಸರ್ಪ್ರೈಸ್ ಗಿಫ್ಟ್ ನೀಡಿದ ರಷ್ಮಿಕಾ ಮಂದಣ್ಣ..ಆ ಗಿಫ್ಟ್ ಏನು ಗೊತ್ತಾ.?

ಕನ್ನಡದ ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗಿನಲ್ಲಿ ಬ್ಯುಸಿ ನಟಿಯಾಗಿದ್ದಾಳೆ. ಅದರಲ್ಲೂ ತೆಲಗು ನಟ ವಿಜಯ್ ದೇವರಕೊಂಡ ಜೊತೆ ಒಂದಾದ ನಂತರ ಒಂದು ಚಿತ್ರ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ನಟ ವಿಜಯ್ ದೇವರಕೊಂಡ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ನಟಿ ರಶ್ಮಿಕಾ ವಿಜಯ್ ಗೆ ಡಿಯರ್ ಬಾಬಿ ಎಂದು ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸುವುದರ ಜೊತೆಗೆ ಬರ್ತ್ ಡೇ ಸರ್ಪ್ರೈಸ್ ಗಿಫ್ಟ್ ಕೂಡಾ ಕೊಟ್ಟಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಡಿಯರ್ ಕಾಮ್ರೇಡ್ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಈ ಚಿತ್ರತಂಡ ಶೂಟಿಂಗ್ ಸೆಟ್‍ನಲ್ಲಿ ಅದ್ಧೂರಿಯಾಗಿ ವಿಜಯ್ ದೇವರಕೊಂಡ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.ಇವರ ಜೊತೆಗೆ ರಷ್ಮಿಕಾ ಕೂಡ ಭಾಗಿಯಾಗಿದ್ದು, ಕೇಕ್ ಕತ್ತರಿಸಿ ವಿಜಯ್ ಗೆ ಶುಭಾಶಯಗಳನ್ನ ತಿಳಿಸಿದ್ದಾರೆ. ಜೊತೆಗೆ ರಷ್ಮಿಕಾ ತಾವೇ ಸ್ವತಹ ನಟ ವಿಜಯ್ ದೇವರಕೊಂದೇವರಕೊಂಡಗೆ ಕೇಕ್ ತಿನ್ನಿಸಿ ಸಂಭ್ರಮಪಟ್ಟಿದ್ದಾರೆ.

ರಷ್ಮಿಕಾ ಕೊಟ್ಟ ಗಿಫ್ಟ್ …ಈ ವಿಡಿಯೋ ನೋಡಿ..

ವಿಜಯ್ ಅವರ ಬರ್ತ್ ಡೇ ಸರ್ಪ್ರೈಸ್ ಗಿಫ್ಟ್ ಆಗಿ ರಷ್ಮಿಕಾರವರು ಉಡುಗೊರೆ ನೀಡಿದ್ದು, ವಿಜಯ್ ಅವರು ಶೂಟಿಂಗ್ ಸೆಟ್‍ನಲ್ಲಿಯೇ ರಷ್ಮಿಕಾ ಕೊಟ್ಟ ಗಿಫ್ಟ್ ಓಪನ್ ಮಾಡಿದ್ದಾರೆ. ಬ್ರಾಸ್ಲೆಟ್ ಒಂದನ್ನ ಗಿಫ್ಟ್ ಆಗಿ ರಶ್ಮಿಕಾ ನೀಡಿದ್ದು ಅದನ್ನ ವಿಜಯ್ ಅವರು ಮೊದಲು ರಷ್ಮಿಕಾ ಅವರ ಕೈಗೆ ಹಾಕಿ ತದನಂತರ ತಮ್ಮ ಕೈಗೆ ಹಾಕಿಕೊಂಡಿದ್ದಾರೆ.