ಕಡೆಗೂ ಸ್ಯಾಂಡಲ್ವುಡ್ ಪದ್ಮಾವತಿಗೆ ಕೂಡಿಬಂತು ಕಂಕಣ ಭಾಗ್ಯ..ಹುಡುಗ ಯಾರು ಗೊತ್ತಾ?

ಸದಾ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಅವರನ್ನು ಟೀಕಿಸುತ್ತಿದ್ದ, ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯೂ ಆಗಿದ್ದ ಮಾಜಿ ಸಂಸದೆ ಹಾಗೂ ಮೋಹಕ ತಾರೆ ನಟಿ ರಮ್ಯಾ ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ, ಸ್ಯಾಂಡಲ್ವುಡ್ ಪದ್ಮಾವತಿ ರಮ್ಯಾ ಈಗ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹೌದು, ಲೋಕಸಭಾ ಚುನಾವಣೆಯ ನಂತರ ರಾಜಕೀಯದಿಂದಲೂ ದೂರ ಉಳಿದಿರುವ ರಮ್ಯಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ರಾಜಕಾರಣಿ ಹಾಗೂ ನಟಿ ರಮ್ಯಾ ತನ್ನ ಬಹುಕಾಲದ ಗೆಳೆಯನೂ ಆಗಿರುವ ಪೋರ್ಚುಗಲ್ ಮೂಲದ ರಾಫೆಲ್ ಎಂಬವುವರೊಂದಿಗೆ ಸಪ್ತಪದಿ ತುಳಿಯಲಿದ್ದು, ಇವರ ಮದುವೆ ದುಬೈನಲ್ಲಿ ನೆರವೇರಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಮದುವೆಯ ಸಿದ್ದತೆಗಳು ದುಬೈನಲ್ಲಿ ನಡೆಯುತ್ತಿದ್ದು, ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿರುವ ರಮ್ಯಾ ಮತ್ತು ರಾಫೆಲ್ ಇಷ್ಟರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.