ಕಾಯಿಲೆ ನೆಪ ಹೇಳಿ ಅಂಬಿ ಅಂತ್ಯಸಂಸ್ಕಾರಕ್ಕೆ ಬಾರದಿದ್ದ ರಮ್ಯಾ ಈಗ ದುಬೈನಲ್ಲಿ ಈ ವ್ಯಕ್ಯಿಯ ಜೊತೆ ಪ್ರತ್ಯಕ್ಷ!ಸಖತ್ ವೈರಲ್ ಆಯ್ತು ಈ ಫೋಟೋ…

ನಟಿ ಮತ್ತು ರಾಜಕಾರಣಿಯಾಗಿರುವ ರಮ್ಯಾ ತಮ್ಮನ್ನು ರಾಜಕ್ಕಿಯದಲ್ಲಿ ಈ ಮಟ್ಟಕ್ಕೆ ಬೆಳೆಸಿದಂತ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ರವರು ವಿಧಿವಶರಾದಾಗ ಕಾಯಿಲೆ ನೆಪ ಹೇಳಿ ಅಂಬಿ ಅಂತ್ಯ ಸಂಸ್ಕಾರದಿಂದ ದೂರು ಉಳಿದಿದ್ದರು.ಆಗ ಇವರ ವಿರುದ್ದ ಮಂಡ್ಯದ ಜನತೆ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ರಮ್ಯ ಸದ್ಯ ಸ್ಯಾಂಡಲ್ ವುಡ್ ನಿಂದು ಮಾತ್ರವಲ್ಲ ಕರ್ನಾಟಕದಿಂದಲೇ ದೂರವಿದ್ದಾರೆ. ಭಾರತ ನ್ಯಾಷನಲ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ಹೊತ್ತು ಅದರ ಅಧ್ಯಕ್ಷೆಯಾಗಿದ್ದಾರೆ. ರಾಷ್ಟೀಯ ಮಟ್ಟದಲ್ಲಿ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಇವರು ಯಾವಾಗಲೂ ಟೀಕೆಗೆ ಗುರಿ ಯಾಗುವುದು ಹೊಸತೇನಲ್ಲ.

ಕೆಲವು ತಿಂಗಳುಗಳಿಂದ ರಮ್ಯಾಗೆ ಮೂಳೆ ಕಾಯಿಲೆಯಿಂದ ಬಳಲುತ್ತಿದ್ದರು. ಕಾಲು ನಡೆಯದಂತೆ ಆಗಿತ್ತು. ಅಪರೂಪದಲ್ಲಿ ಅಪರೂಪದ ಕಾಯಿಲೆ ಇದು. ಇಂಥಹ ಕಾಯಿಲೆಗೆ ರಮ್ಯ ತುತ್ತಾಗಿದ್ದರು. ಇದೇ ಕಾರಣದಿಂದ ಅವರು ಅಂಬರೀಶ್ ಅವರ ಅಂತ್ಯ ಕ್ರಿಯೆಗೆ ಬರಲಾಗಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಇದರಿಂದ ಮಂಡ್ಯ ಜನರು, ಅಂಬಿ ಅಭಿಮಾನಿಗಳು ಸಿಟ್ಟಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾಗೆ ಟೀಕೆ ಗಳ ಸುರಿಮಳೆ ಬಂದಿದ್ದವು. ಇದಾದ ಬಳಿಕ ರಮ್ಯ ಮಂಡ್ಯದಲ್ಲಿರುವ ತಮ್ಮ ನಿವಾಸ ಕಾಲಿ ಮಾಡಿಸಿದ್ದರು.

ತಾನು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದೆ ಎಂದು ಹೇಳಿದ್ದ ರಮ್ಯಾ ಈಗ ಧಿಡೀರನೇ ದುಬೈ ನಲ್ಲಿ ಕಾಣಿಸಿಕೊಂಡಿದ್ದಾರೆ.ದುಬೈ ನಲ್ಲಿ ಸಚಿವ ಯು ಟಿ ಖಾದರ್ ಅವರ ಸಹೋದರ ಇಫ್ತಿಕಾರ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಈ ಫೋಟೋ ಈಗ ಸಖತ್ ವೈರಲ್ ಆಗಿದೆ. ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ರಮ್ಯ ದುಬೈಗೆ ಹೋಗಿದ್ದರಂತೆ.

ರಾಹುಲ್ ಗಾಂಧಿ ಅವರು ಕಾರ್ಯಕ್ರಮದ ನಿಮಿತ್ತ ದುಬೈಗೆ ಹೊಗಳಿದ್ದು ಒಂದು ದಿನದ ಮುಂಚಿತವಾಗಿಯೇ ಅವರನ್ನು ಸ್ವಾಗತಿಸಲು ರಮ್ಯಾ ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ರಾಜಕೀಯದಲ್ಲಿ ಬೆಳೆಸಿದ ಅಂಬಿ ಅವರ ಅಂತ್ಯ ಸಂಸ್ಕಾರಕ್ಕೆ ಬಾರದ ರಮ್ಯ ಹೀಗೆ ದುಬೈಗೆ ಹೋಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.