ಅಂಗಲಾಚಿ ಕಣ್ಣೀರಿಡುತ್ತಾ ಕಾಸಿಗಾಗಿ ಬೇಡುತ್ತಿದ್ದರೂ, ಬಿಡಿಗಾಸೂ ಕೊಡದೆ ಹೋದ ಕನ್ನಡದಲ್ಲಿ ನಟಿಸಿದ್ದ ಈ ಫೇಮಸ್ ನಟಿ!ವೈರಲ್ ಆಗಿದೆ ಈ ವಿಡಿಯೋ…

ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಸುದ್ದಿ ಮೇಲೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ತುಂಡುಡುಗೆ ತೊಟ್ಟು, ತಮ್ಮ ವಿಚಿತ್ರ ಡ್ರೆಸ್ ನಿಂದಲೇ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಮತ್ತೊಂದು ಕಾರಣಕ್ಕೆ ಈ ನಟಿ ಸುದ್ದಿಯಾಗಿದ್ದು, ತಮ್ಮ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದ ನಟಿ ರಕುಲ್ ಪ್ರೀತ್ ಸಿಂಗ್ ರೆಸ್ಟೋರೆಂಟ್ ನಿಂದ ಹೊರ ಬಂದು ತಮ್ಮ ಕಾರಿನ ಕಡೆಗೆ ಹೊರಟಿದ್ದರು.ಆಗ ಅದೇ ಸಮಯದಲ್ಲಿ ಅಲ್ಲಿಗೆ ಬಂದ ಸ್ಥಳೀಯ ಬಡಮಕ್ಕಳು ಹಣಕ್ಕಾಗಿ ಅವರನ್ನು ಬೆಂಬಿಡದೆ ಹಿಂಬಾಲಿಸಿ ಬೇಡಿಕೊಂಡರು.

ಆದರೂ ಕಿಂಚಿತ್ತೂ ಕರುಣೆ ತೋರದ ನಟಿ ರಕುಲ್ ಪ್ರೀತ್ ಸಿಂಗ್ ಬಡ ಮಕ್ಕಳ ಈ ವರ್ತನೆಗೆ ಕಿರಿಕಿರಿ ಆದಂತಾಗಿ ಕಾರಿಗೆ ಹತ್ತಲು ಮುಂದಾಗಿದ್ದಾರೆ. ಆಗ ಆ ಕಾರಿನ ಚಾಲಕ ಬಂದು ಹಣಕ್ಕಾಗಿ ಬೇಡಿಕೊಳ್ಳುತ್ತಿದ್ದ ಬಡ ಮಕ್ಕಳನ್ನು ದೂರ ತಳ್ಳಿದ್ದು, ನಂತರವಷ್ಟೇ ರಕುಲ್ ಪ್ರೀತ್ ಸಿಂಗ್ ಕಾರು ಹತ್ತಿ ಹೋಗಿದ್ದಾರೆ.

View this post on Instagram

The solid salad surprise 🙀 #rakulpreetsingh

A post shared by Viral Bhayani (@viralbhayani) on

ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಡಮಕ್ಕಳ ಬಗ್ಗೆ ಕಿಂಚಿತ್ತೂ ಕರುಣೆ ತೋರದ ನಟಿ ರಕುಲ್ ಪ್ರೀತ್ ಸಿಂಗ್ ಅವರ ವರ್ತನೆ ಬಗ್ಗೆ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪರಿಪರಿಯಾಗಿ ಹಣಕ್ಕಾಗಿ ಬೇಡಿಕೊಳ್ಳುತ್ತಿದ್ದ ನಟಿ ಮಕ್ಕಳಿಗೆ ಬಿಡಿ ಕಾಸು ಕೊಡದ ನೀವೆಂತ ನಟಿ, ನಿಮ್ಮ ವರ್ತನೆ ಎಷ್ಟು ಸರಿ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸಿನಿಮಾಗಳಲ್ಲಿ ದೊಡ್ಡ ಸಂದೇಶ ಸಾರುವಂತೆ ನಟಿಸುವ ನಟಿಯರು ಹೀಗೆ ಮಾಡುವುದು ಎಷ್ಟು ಸರಿ ಅಲ್ಲವಾ…