ನಟಿ ರಾಧಿಕಾ ಕುಮಾರಸ್ವಾಮಿಗೆ ಶಾಂತಿನಗರ ಸ್ಮಶಾನದಲ್ಲಿ ಮಧ್ಯರಾತ್ರಿ ಆಗಿದ್ದೇನು ಗೊತ್ತಾ?ಈ ಶಾಕಿಂಗ್ ಸುದ್ದಿ ನೋಡಿ

ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ಅಣ್ಣ ತಂಗಿ ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿ ಈಗ ಹಲವು ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ.

ಚಂದನವನಕ್ಕೆ ಕಮ್ ಬ್ಯಾಕ್ ಮಾಡಿರುವ ಚೆಂದುಳ್ಳಿ ಚೆಲುವೆ ರಾಧಿಕಾ ಕುಮಾರಸ್ವಾಮಿ ದಮಯಂತಿ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದು ಅದು ಕನ್ನಡದ ಆರುಂಧತಿ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ಆರುಂಧತಿ ರೇಂಜ್ ನಲ್ಲಿ ಈ ದಮಯಂತಿ ಚಿತ್ರ ಮೂಡಿ ಬರಲಿದೆ ಎಂದು ಹೇಳಲಾಗಿದೆ.

ಈಗ ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಮತ್ತೊಂದು ಚಿತ್ರವಾದ ಬೈರಾದೇವಿ ಶೂಟಿಂಗ್ ನಡೆಯುತ್ತಿದ್ದು ಚಿತ್ರೀಕರಣದ ವೇಳೆ ಇದ್ದಕಿದ್ದಂತೆ ಬಿದ್ದ ಪರಿಣಾಮ ಅವರ ಸ್ಪೈನಲ್ ಕಾರ್ಡ್ ಗೆ ಏಟಾಗಿದೆ ಎಂದು ಚಿತ್ರ ತಂಡದ ಮೂಲಗಳಿಂದ ತಿಳಿದು ಬಂದಿದೆ.

ನಟಿ ರಾಧಿಕಾ ಅಭಿನಯದ ಬೈರಾದೇವಿ ಚಿತ್ರದ ಚಿತ್ರೀಕರಣ ಶಾಂತಿನಗರದ ಸ್ಮಶಾನದಲ್ಲಿ ನಡೆಯುತ್ತಿದೆ. ಚಿತ್ರೀಕರಣದ ವೇಳೆ ಸ್ಮಶನಾದ ಗೋರಿಯ ಮೇಲಿನಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲಿನ ಕೆಲಸಗಾರರು ಹೇಳುವ ಪ್ರಕಾರ ಈ ಸ್ಮಶಾನದ ಹೊರಗಡೆಯ ರಸ್ತೆಯಲ್ಲಿ ರಾತ್ರಿಯ ಸಮಯದಲ್ಲಿ ಜನ ಓಡಾಡೋದಕ್ಕೆ ಗಾಡಿ ಓಡಿಸೋದಕ್ಕೆ ಕೂಡ ಭಯ ಪಡುತ್ತಾರಂತೆ.

ಆದರೆ ಬೈರಾದೇವಿ ಚಿತ್ರದ ಸಿನಿಮಾ ತಂಡ ಸುಮಾರು ಮಧ್ಯೆರಾತ್ರಿಯ ಸಮಯದಲ್ಲಿ ನಟಿ ರಾಧಿಕಾ ಅವರಿಗೆ ಮಾತೆ ಕಾಳಿಕಾ ದೇವಿಯ ಭಯಂಕರ ವೇಷ ಹಾಕಿಸಿದ್ದು, ಸ್ಮಶಾನದಲ್ಲಿರುವ ಹುಣಸೇ ಮರದ ಕೆಳಗಡೆ ಚಿತ್ರೀಕರಣ ಮಾಡುವ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಸ್ಮಶಾನದಲ್ಲಿರುವ ಕೆಲಸಗಾರರು ಹೇಳುವ ಪ್ರಕಾರ ಈ ಸ್ಮಶಾನದ ದ್ವಾರ ಬಾಗಿಲಿನಲ್ಲೇ ಕಾಳಿಕಾ ದೇವಿಯ ಮಂದಿರವಿದೆ. ಆದರೆ ಬೈರಾದೇವಿಯ ಚಿತ್ರ ತಂಡದವರು ಇಲ್ಲಿ ಕಾಳಿಕಾ ದೇವಿಯ ಮೂಲ ವಿಗ್ರಹವಿದ್ದರೂ ಮತ್ತೊಂದು ಕಾಳಿಕಾ ದೇವಿಯ ಸೆಟ್ ಹಾಕಿದ್ದಾರೆ.

ಅಷ್ಟೇ ಅಲ್ಲದೆ ಸ್ಮಶಾನದಲ್ಲಿರುವ ಗೋರಿಯ ಪಕ್ಕದಲ್ಲೇ ಮೆಣಸು ಮತ್ತು ಉಪ್ಪು ಹಾಕಿ ಮಂತ್ರಗಳನ್ನು ಹೇಳಿದ್ದಾರೆ. ಇಷ್ಟೇ ಮಾತ್ರವಲ್ಲದೇ ಈ ಸ್ಮಶಾನದಲ್ಲಿ ಯಾವುದೇ ಕೆಲಸ ಶುರು ಮಾಡಿದರೂ ಮೊದಲು ಇಲ್ಲಿರುವ ಕಾಳಿಕಾ ದೇವಿಗೆ ಪೂಜೆ ಮಾಡಬೇಕು. ಇದನ್ನೂ ಕೂಡ ಈ ಚಿತ್ರ ತಂಡದವರು ಮಾಡಿಲ್ಲ. ಈ ಎಲ್ಲಾ ಕಾರಣಗಳಿಂದ ನಟಿ ರಾಧಿಕಾ ಕುಮಾರಸ್ವಾಮಿಯವರಿಗೆ ಈ ರೀತಿಯ ಅನಾಹುತ ಸಂಭವಿಸಿರಬಹುದು ಎಂದು ಅಲ್ಲಿನ ಕೆಲಸಗಾರರು ಹೇಳುತ್ತಾರೆ.

ಸಾಮಾನ್ಯವಾಗಿ ಎಲ್ಲರೂ ಹೇಳುವ ಪ್ರಕಾರ ಸ್ಮಶಾನದಲ್ಲಿ ಅತೀ ಮಾನುಷ ಶಕ್ತಿಗಳು ಇರಬಹುದು. ಅದರಿಂದ ರಾಧಿಕಾರವರಿಗೆ ಈ ರೀತಿಯ ಅನಾಹುತ ಸಂಭವಿಸಿರಬಹುದು ಎಂದು ಸ್ಮಶಾನದಲ್ಲಿ ಕೆಲಸ ಮಾಡುವವರು ಹೇಳುತಾರೆ. ಗೋರಿಯ ಮೇಲಿನಿಂದ ಬಿದ್ದ ಪರಿಣಾಮ ರಾಧಿಕಾ ಕುಮಾರ ಸ್ವಾಮಿಯವರು ಈಗ ಒಂದೂ ವರೆ ತಿಂಗಳು ಬೆಡ್ ರೆಸ್ಟ್ ನಲ್ಲಿ ಇದ್ದಾರೆ.