ಕಡಿಮೆ ಬಂಡವಾಳದಲ್ಲಿ ಮೊಲ ಸಾಕಾಣಿಕೆ ಮಾಡಿ, ವರ್ಷಕ್ಕೆ 8 ಲಕ್ಷದವರೆಗೆ ಆದಾಯ ಗಳಿಸಿ.!ಇಲ್ಲಿದೆ ಸಂಪೂರ್ಣ ಮಾಹಿತಿಗೆ…

ಈಗಿನ ಕಾಲದಲ್ಲಿ ಸರ್ಕಾರಿ ಕೆಲಸವೇ ಬೇಕು ಅಂತ ಕಾಯುತ್ತಾ ಕುಳಿತರೆ ಹೊಟ್ಟೆಗೆ ಅನ್ನ ಸಿಗುವುದೂ ಸಹ ಕಷ್ಟ. ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭಗಳಿಸುವ ಹಲವಾರು ಉದ್ಯೋಗಗಳಿದ್ದರೂ ಅವುಗಳನ್ನು ಮಾಡುವುದೋ, ಬೇಡವೆಂದು ನಾವು ಹಿಂದೆ ಮುಂದೆ ನೋಡುತ್ತೇವೆ.

ಆದರೆ ಒಂದುವೇಳೆ ನೀವು ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭಗಳಿಸುವ ಆಲೋಚನೆಯಲ್ಲಿದ್ದರೆ ಮೊಲ ಸಾಕಾಣಿಕೆ ಮಾಡುವುದು ಉತ್ತಮ ಉದ್ಯೋಗವಾಗಿದ್ದು, ಕಡಿಮೆ ಬಂಡವಾಳದಲ್ಲಿ ಕೈತುಂಬಾ ಲಾಭ ತರುವ ಉದ್ಯೋಗ ಎಂದೇ ಹೇಳಬಹುದು. ಹೌದು ಸುಮಾರು 4 ಲಕ್ಷದವರೆಗೆ ಬಂಡವಾಳ ಹೂಡಿ ನೀವು ಮೊಲದ ಕೃಷಿಯನ್ನು ಶುರು ಮಾಡಬಹುದು.

ಈಗ ಮಾರುಕಟ್ಟೆಯಲ್ಲಿ ಮೊಲದ ಮಾಂಸಕ್ಕೆ ಭಾರಿ ಬೇಡಿಕೆ ಇದೆ, ಜೊತೆಗೆ ಉತ್ತಮ ಬೆಲೆ ಕೂಡ ಇದೆ. ಹಾಗಾಗಿ ಮೊಲದ ಸಾಕಾಣಿಕೆ ಮಾಡುವುದು ಒಂದು ಉತ್ತಮ ಉದ್ಯೋಗ. ಈ ಉದ್ಯೋಗದಲ್ಲಿ ನೀವು ವಾರ್ಷಿಕವಾಗಿ 8 ಲಕ್ಷದವರೆಗೆ ಗಳಿಕೆ ಮಾಡಬಹುದು. ಮೊಲದ ಮಾಂಸಕ್ಕೆ ಜೊತೆಗೆ ಅಷ್ಟೇ ಬೇಡಿಕೆ ಮೊಲದ ಕೂದಲಿಗೂ ಸಹ ಇದೆ. ಮೊಲಗಳನ್ನು ಮಾಂಸಕ್ಕಾಗಿ ಸಾಕುವುದಾದರೆ ನ್ಯೂಜಿಲ್ಯಾಂಡ್ ವೈಟ್, ರಷ್ಯನ್ ಜೇಂಟ್, ಸೋವಿಯತ್
ಚಿಂಚಲಾ, ಕ್ಯಾಲಿಫೋರ್ನಿಯಾದ ವೈಟ್, ಬ್ರಿಟಿಷ್ ಬ್ಲಾಕ್, ನ್ಯೂಜಿಲೆಂಡ್ ಬ್ಲಾಕ್ ಮುಂತಾದ ತಳಿಗಳು ಸೂಕ್ತವಾಗಿವೆ.

ಈ ತಳಿಗಳು 12ರಿಂದ 14 ವಾರಗಳಲ್ಲಿ ಸುಮಾರು ಎರಡು ಕೆಜಿ ದೇಹದ ತೂಕವನ್ನು ಹೊಂದುತ್ತವೆ. ಕಡಿಮೆ ಕೊಲೆಸ್ಟ್ರಾಲ್ ಜೊತೆಗೆ ಉತ್ತಮ ಗುಣಮಟ್ಟದ ರುಚಿಕರ ಹಾಗೂ ಪೌಷ್ಟಿಕಾಂಶವುಳ್ಳ ತಳಿಗಳಾಗಿವೆ. ಸ್ಥಳೀಯವಾಗಿ ದೊರಕುವ ಸಾಮಗ್ರಿಗಳನ್ನೇ ಬಳಸಿ ಮೂಲಗಳ ಸಾಕಾಣಿಕೆಗಾಗಿ ಮನೆ ಕಟ್ಟಬಹುದು. ಒಂದು ಯೂನಿಟ್ನಲ್ಲಿ ೭ ಹೆಣ್ಣು ಹಾಗೂ ೩ ಗಂಡು ಮೊಲಗಳನ್ನು ಹಾಕಬೇಕು. ಮೊಲ ಸಾಕಾಣಿಕೆ ಆರಂಭದ ಹಂತದಲ್ಲಿ 10 ಯುನಿಟ್ ಗಳನ್ನು ನೀವು ಮಾಡಿಕೊಂಡರೆ ಸುಮಾರು ನಾಲ್ಕು ಲಕ್ಷದವರೆಗೆ ಖರ್ಚು ಬರುತ್ತದೆ.

ಶೆಡ್ ಗಾಗಿ ಒಂದುವರೆ ಲಕ್ಷದವರೆಗೂ ಹಾಗೂ ಪಂಜರ, ಮೊಲಗಳ ಆಹಾರಕ್ಕಾಗಿ ಎರಡು ಲಕ್ಷದವರೆಗೆ ಖರ್ಚು ಬರುತ್ತದೆ. ಗಂಡು ಮತ್ತು ಹೆಣ್ಣು ಮೊಲಗಳು ಆರು ತಿಂಗಳ ನಂತರ ಸಂತಾನೋತ್ಪತ್ತಿಗೆ ಸಿದ್ಧವಾಗುತ್ತವೆ. ಮೊಲ ಒಮ್ಮೆ ಆರರಿಂದ ಏಳು ಮರಿಗಳಿಗೆ ಜನ್ಮ ನೀಡುತ್ತದೆ. ಕ್ರಿಮಿನಾಶಕ ಸಿಂಪಡಿಸಿ ಆಗಿಂದಾಗ್ಗೆ ನೆಲವನ್ನು ಸ್ವಚ್ಛಗೊಳಿಸುತ್ತಿರಬೇಕು. ತಂಪಾದ ಉಷ್ಣಾಂಶದಲ್ಲಿ ಉಣ್ಣೆಯ ತಳಿಗಳು ಚೆನ್ನಾಗಿ ಇಳುವರಿ ಕೊಡುತ್ತವೆ.

ನಾಲ್ಕರಿಂದ ಐದು ಕೆಜಿ ತೂಕ ಇರುವ ಮೂಲಗಳು ಪ್ರತಿದಿನ ಒಂದು ಕೆಜಿ ಎಷ್ಟು ಆಹಾರ ಪದಾರ್ಥಗಳನ್ನು ಕೊಡಬೇಕಾಗುತ್ತದೆ. ಜೊತೆಗೆ ಪ್ರತಿ ಮೊಲಕ್ಕೆ ದಿನಾಲೂ ಸುಮಾರು 60 ರಿಂದ 120 ಮಿಲಿ ಲೀಟರ್ ನೀರು ಬೇಕಾಗುತ್ತದೆ. ಇನ್ನು ಮೊಲಗಳಿಗೆ ಗರಿಕೆ ಹುಲ್ಲು ಉಪಯೋಗಿಸದೆ ಬಿಟ್ಟ ತರಕಾರಿ ನುಗ್ಗೆಸೊಪ್ಪು, ಕುದುರೆಮೆಂತೆ ಗಜ್ಜರೆ ತಪ್ಪಲು ಮುಂತಾದವು ಸೂಕ್ತವಾದ ಆಹಾರಗಳಾಗಿವೆ. ಇನ್ನೂ ಕಡಿಮೆ ಬಂಡವಾಳ ಹೂಡಲು ನೀವು ತಯಾರಾಗಿದ್ದರೆ ಇಂದೇ ಮೊಲಗಳ ಸಾಕಾಣಿಕಾ ಉದ್ಯೋಗ ಶುರುಮಾಡಿ.