ಬ್ರೇಕಿಂಗ್ ನ್ಯೂಸ್!ಕೇವಲ ಒಂದೇ ದಿನದಲ್ಲಿ ರಾಜೀನಾಮೆ ಕೊಡಲು ಸಿದ್ದರಾದ ಪ್ರಜ್ವಲ್ ರೇವಣ್ಣ!ಕಾರಣ ಏನ್ ಗೊತ್ತಾ?

ಮಾಜಿ ಪ್ರಧಾನಿ ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರವನ್ನು ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣನವರಿಗೆ ಬಿಟ್ಟುಕೊಟ್ಟಿದ್ದಿರು. ಬಿಜೆಪಿಯ ಎ ಮಂಜು ವಿರುದ್ಧ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಭಾರೀ ಮತಗಳ ಅಂತರದಿಂದ ಗೆದ್ದು ಈಗ ಸಂಸದರಾಗಿದ್ದಾರೆ.

ಆದರೆ ತುಮಕೂರಿನಲ್ಲಿ ಮೈತ್ರಿ ಪಕ್ಷದ ಪರವಾಗಿ ನಿಂತಿದ್ದ ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿ ಪಕ್ಷದ ಬಸವರಾಜು ವಿರುದ್ದ ಸೋಲನ್ನು ಕಂಡಿದ್ದು, ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧರಾಗಿದ್ದಾರೆ.

ತಾತ ದೇವೇಗೌಡರು ಸೋತಿರುವುದು ಅವರಿಗೆ ತುಂಬಾ ಬೇಸರವಾಗಿದ್ದು ತಾವು ರಾಜೀನಾಮೆ ಕೊಡುವ ನಿರ್ಧಾರವನ್ನು ಮಾಧ್ಯಗಳ ಮುಂದೆ ಹೇಳಿದ್ದಾರೆ. ಸೋಲಿಲ್ಲದ ಸರದಾರ, ಹಿರಿಯ ರಾಜಕಾರಣಿ ದೇವೇಗೌಡರು ಸೋಲನ್ನು ಒಪ್ಪಿಕೊಳ್ಳುಲು ಆಗುತ್ತಿಲ್ಲ. ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳಿದ್ದು ಅದರ ಬಗ್ಗೆ ಸಂಸತ್ನಲ್ಲಿ ಎದೆ ಉಬ್ಬಿಸಿ ಮಾತನಾಡಲು ದೇವೇಗೌಡರಂತಹ ವ್ಯಕ್ತಿ ಗೆಲ್ಲಲೇ ಬೇಕು.

ಹಾಗಾಗಿ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಇದರಿಂದ ಹಾಸನದ ಜನರು ಬೇಜಾರು ಮಾಡಿಕೊಳ್ಳುವುದು ಬೇ. ನಾನು ರಾಜೀನಾಮೆ ನೀಡಿದ ಮೇಲೆ, ಮತ್ತೆ ಉಪಚುನಾವಣೆ ನಡೆಯುತ್ತದೆ. ಹಾಗಾಗಿ ಹಾಸನದಲ್ಲಿ ಮತ್ತೆ ದೇವೇಗೌಡರನ್ನು ನಿಲ್ಲಿಸಿ ಭಾರೀ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಲಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ