ಆಲೂಗಡ್ಡೆಯನ್ನು ಹೀಗೆ ಸೇವಿಸಿದ್ದೇ ಆದ್ರೆ ಹೊಟ್ಟೆಯ ಭಾಗದಲ್ಲಿನ ಬೊಜ್ಜು ಕೆಲವೇ ದಿನಗಳಲ್ಲಿ ಕರಗುತ್ತದೆ!ಮತ್ತೆ ಇನ್ನೇಕೆ ತಡ ಈಗಿನಿಂದಲೇ ಶುರುಹಚ್ಕೊಳ್ಳಿ

ಕೆಲವರು ಹೊಟ್ಟೆಯ ಬೊಜ್ಜುನಿಂದಾಗಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ ಮತ್ತು ಕೆಲವೊಮ್ಮೆ ಮುಜುಗರಕ್ಕೆ ಒಳಗಾಗುತ್ತಾರೆ. ಹೊಟ್ಟೆಯ ಬೊಜ್ಜಿಗೆ ಕಾರಣ ಕೇವಲ ಅತಿಯಾಗಿ ತಿನ್ನುವುದು ಅಲ್ಲ. ಹಾರ್ಮೋನುಗಳ ಏರುಪೇರು, ವಂಶಪಾರಂಪರ್ಯ, ಆರೋಗ್ಯ ಸಮಸ್ಯೆಗಳು ಹೊಟ್ಟೆಯ ಭಾಗದಲ್ಲಿ ಬೊಜ್ಜು ಬೆಳೆಯಲು ಕಾರಣವಾಗಿರುತ್ತದೆ. ಅಲ್ಲದೆ ನಾವು ಪಾಲಿಸುವ ಆಹಾರ ಪದ್ಧತಿ, ಜೀವನ ಶೈಲಿಯೂ ಕೂಡ ಇದಕ್ಕೆ ಕಾರಣ.

ಹೊಟ್ಟೆಯ ಬೊಜ್ಜು ಕೇವಲ ನಮ್ಮ ಸೌಂದರ್ಯವನ್ನು ಮಾತ್ರ ಹಾಳು ಮಾಡುವುದಲ್ಲದೆ ನಮ್ಮ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಆದರೆ ಇಲ್ಲಿ ನಾವು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸುವ ವಿಧಾನ ವನ್ನು ಹೇಳುತ್ತಿದ್ದೇವೆ…

ಆಲೂಗಡ್ಡೆ ಎಂದ ಕೂಡಲೇ ಎಲ್ಲರಿಗೂ ಕೊಬ್ಬನ್ನು ಹೆಚ್ಚಿಸುವ ಆಹಾರ ಪದಾರ್ಥ ಎಂಬುದು ತಲೆಗೆ ಬರುತ್ತದೆ. ಆದರೆ ಆಲೂಗೆಡ್ಡೆಯನ್ನು ಆರೋಗ್ಯಕರವಾಗಿ ಉಪಯೋಗಿಸಿದಾಗ ಹೊಟ್ಟೆಯಲ್ಲಿನ ಬೊಜ್ಜು ಖಂಡಿತವಾಗಿ ಕರಗುತ್ತದೆ.

*ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಮೊಸರನ್ನು ಬೆರೆಸಿ ದಿನವೂ ಊಟದ ನಂತರ ಎರಡು ಸ್ಪೂನ್ ಸೇವಿಸಿ. ಇದನ್ನು ಸೇವಿಸಿದ ನಂತರ ಯಾವುದೇ ಆಹಾರ ಪದಾರ್ಥವನ್ನು ನೀವು ಸೇವಿಸಬಾರದು. ಹೀಗೆ ಕೆಲವು ದಿನಗಳು ಮಾಡುತ್ತಾ ಹೋದಲ್ಲಿ ಹೊಟ್ಟೆಯಲ್ಲಿನ ಬೊಜ್ಜು ಕರಗುವುದು ನೀವು ಗಮನಿಸಬಹುದು.

ಹಾಲು ಗಡ್ಡೆ ಜ್ಯೂಸ್   ಹಸಿ ಆಲೂಗೆಡ್ಡೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಉಪ್ಪು ನೀರಿನಲ್ಲಿ ಬೇಕಾದರೂ ತೊಳೆಯಬಹುದು. ನಂತರ ಇನ್ನೊಮ್ಮೆ ಒಳ್ಳೆಯ ನೀರಿನಲ್ಲಿ ತೊಳೆದು ಸಣ್ಣದಾಗಿ ಹಚ್ಚಿಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರಿನಲ್ಲಿ ನೀರಿನೊಂದಿಗೆ ರುಬ್ಬಿಕೊಂಡು ಜ್ಯೂಸ್ ತಯಾರಿಸಿ ಪ್ರತಿದಿನ ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ.

*ಚೆನ್ನಾಗಿ ತೊಳೆದು ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಹಾಗೆಯೇ ಸೇವಿಸುವುದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ.ಆದರೆ ಇದರೊಂದಿಗೆ ಬೇರೆ ಯಾವುದೇ ಆಹಾರ ಪದಾರ್ಥ ಸಹ ಸೇರಿಸಿಕೊಂಡು ತಿನ್ನಬಾರದು.

ಈ ಮೇಲಿನ ವಿಧಾನಗಳಲ್ಲಿ ಯಾವುದೇ ಒಂದನ್ನು ನೀವು ಪಾಲಿಸುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹದಾಗಿದೆ.