ಹೊಸ ವರ್ಷಕ್ಕೆ ಎಲ್ಲಾ ವಾಹನ ಬಳಕೆದಾರರಿಗೆ ಹಾಗೂ LPG ಬಳಕೆದಾರರಿಗೆ ಸಿಹಿ ಸುದ್ದಿ.!

ಈಗೀಗ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಹಂತ ಹಂತವಾಗಿ ಇಳಿಕೆ ಆಗುತ್ತಲಿದ್ದು, 2019 ರಿಂದ ಪೆಟ್ರೋಲ್ ಡೀಸೆಲ್ ಹಾಗೂ ಎಲ್ ಪಿಜಿಯ ಗ್ಯಾಸ್ ಬೆಲೆಯಲ್ಲಿ ಇನ್ನೂ ಸಹ ಇಳಿಕೆಯಾಗಲಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ.

ಈ ಹಿಂದೆ ಪೆಟ್ರೋಲ್ ಬೆಲೆ 87 ರೂಪಾಯಿಗಳನ್ನು ತಲುಪಿತ್ತು, ಮತ್ತು ಡೀಸೆಲ್ ಬೆಲೆ 82ರ ವರೆಗೆ ತಲುಪಿತ್ತು. ಇದರಿಂದ ಜನಸಾಮಾನ್ಯರಿಗೆ ತುಂಬಾ ಕಷ್ಟವಾಗಿ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಭಾರತ ಬಂದ್ ಕೂಡಾ ನಡೆದಿತ್ತು.

ಆನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಹಂತ ಹಂತವಾಗಿ ಇಳಿಕೆ ಮಾಡಿದ ನಂತರ ಈಗ ಪೆಟ್ರೋಲ್ ಬೆಲೆ 69 ಹಾಗು ಡೀಸೆಲ್ ಬೆಲೆ 62 ರೂಪಾಯಿ ಗಳು ಇವೆ. ಬರಲಿರುವ ಹೊಸ ವರ್ಷ 2019 ಕ್ಕೆ ಪೆಟ್ರೋಲ್ ಡೀಸೆಲ್ ಹಾಗೂ ಎಲ್ ಪಿ ಜಿ ಬೆಲೆಯಲ್ಲಿ ಇನ್ನೂ ಇಳಿಕೆಯ ಮಾಡಲಾಗುವುದು.

ಹೊಸ ವರ್ಷಕ್ಕೆ ಪೆಟ್ರೋಲ್ ಬೆಲೆ 69 ರೂಗಳಿಂದ 60 ರೂಪಾಯಿಗೆ ಹಾಗೂ ಡೀಸೆಲ್ ಬೆಲೆ 63 ರೂಪಾಯಿಗಳಿಂದ 54 ರೂಪಾಯಿಗಳಿಗೆ ಇಳಿಯುತ್ತದೆ ಎಂಬುದು ಬಹುತೇಕ ಖಚಿತವಾಗಿದೆ. ಇದಲ್ಲದೆ ಬಡವರಿಗೆ ಉಪಯೋಗವಾಗಲಿ ಎಂದು ಎಲ್ ಪಿಜಿಯ ಗ್ಯಾಸ್ ಅಲ್ಲೂ ಸಹ ಇಳಿಕೆ ಮಾಡಲಾಗುತ್ತಿದೆ.

ಈಗ ಎಲ್ ಪಿಜಿ ಒಂದು ಸಿಲೆಂಡರ್ ಬೆಲೆ 1000 ರೂಪಾಯಿಗಳು. ಮುಂದೆ ಬರಲಿರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಒಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು 800 ರೂಪಾಯಿಗಳಿಗೆ ಇಳಿಸಲಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ