ಒಂದು ಕಡೆ ನನಗೆ ಕನ್ನಡ ಮಾತೋಡದು ಕಷ್ಟ ಎಂದಿದ್ದ ರಶ್ಮಿಕಾ..ಈಗ ಮತ್ತೊಬ್ಬ ಕನ್ನಡದ ಸ್ಟಾರ್ ನಟಿ ಮಾಡಿದ್ದೇನು ಗೊತ್ತಾ.?

ಕನ್ನಡದ ಖ್ಯಾತ ನಟ ದತ್ತಣ್ಣ, ನಟಿ ನಿತ್ಯಾಮೆನನ್ ಸೇರಿದಂತೆ ನಟ ಅಕ್ಷಯ್ ಕುಮಾರ ಅಭಿನಯದ ಬಹು ನಿರೀಕ್ಷಿತ ಬಾಲಿವುಡ್ ಚಿತ್ರ ʼಮಿಷನ್ ಮಂಗಳ್‌ʼ ಇದೀಗ ಬಾರೀ ಸದ್ದು ಮಾಡುತ್ತಿದೆ.

ಭಾರತದ ಮಂಗಳನ ಅಂಗಳಕ್ಕೆ ಹೋಗುವ ಕನಸಿನ ರೋಚಕ ಅನುಭವವನ್ನು ಆಧರಿಸಿರುವ ಚಿತ್ರವಾಗಿರುವ ಇದು ಆಗಸ್ಟ್ 15ರಂದು ತೆರೆಕಾಣಲಿರುವ ಈ ಚಿತ್ರದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಚಂದವಾಗಿ ತಮಿಳು ಮಾತನಾಡಿ ತಮಿಳಿಗರ ಮನಸ್ಸು ಗೆದ್ದ ರಶ್ಮಿಕ.!ಅವರು ಕನ್ನಡದ ಬಗ್ಗೆ ಕೇಳಿದ ಪ್ರಶ್ನೆಗೆ, ಆಕೆ ತಮಿಳಿನಲ್ಲಿ ಕೊಟ್ಟ ಉತ್ತರವೇನು ಗೊತ್ತಾ?

ಈ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಬಾಲಿವುಡ್ ನಟ, ಕನ್ನಡದ ಹಿರಿಯ ನಟ ದತ್ತಣ್ಣನವರನ್ನು ಪರಿಚಯಿಸಿ ಅವರ ಸಿನಿಜರ್ನಿಯ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ದತ್ತಣ್ಣ ನಾನು ಕನ್ನಡದ ನಟನಾಗಿದ್ದು ನನಗೆ ನೀವೆಲ್ಲ ಇಷ್ಟು ಪ್ರೋತ್ಸಾಹ ನೀಡಿರುವುದಕ್ಕೆ ತಮಗೆಲ್ಲ ಧನ್ಯವಾದಗಳು ಎಂದು ಹೇಳಿದ್ದರು.

ಇದೇ ಚಿತ್ರದಲ್ಲಿ ಅಭಿನಯಿಸಿರುವ ಮತ್ತೊಬ್ಬ ಕನ್ನಡದ ಸ್ಟಾರ್ ನಟಿ ನಿತ್ಯಾ ಮೆನನ್ ತೆಲಗು, ತಮಿಳು ಸೇರಿದಂತೆ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆಯಾಗಿ ಅಭಿನಯಿಸಿರುವ ನಿತ್ಯಾ ಮೆನನ್ ಇಂದಿಗೂ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕನ್ನಡ, ತೆಲಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಇಂದಿಗೂ ಸ್ಟಾರ್ ಪಟ್ಟವನ್ನು ಉಳಿಸಿಕೊಂಡಿರುವ ನಟಿ ನಿತ್ಯಾ ಮೆನನ್ ತಮ್ಮ ಕನ್ನಡ ತನವನ್ನು ಮಾತ್ರ ಬಿಟ್ಟಿಲ್ಲ.

ಹೌದು, ಮಿಷನ್ ಮಂಗಳ್ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಿರುವ ನಿತ್ಯಾ ಮೆನನ್ ಈ ಚಿತ್ರದ ಪ್ರಚಾರದ ಸಂಧರ್ಭದಲ್ಲಿ, ಕನ್ನಡದಲ್ಲಿಯೇ ಸಹಿ ಹಾಕಿ ಬಾಲಿವುಡ್ ಅಂಗಳದಲ್ಲಿ ತಮ್ಮ ಕನ್ನಡತವನ್ನು ಮೆರೆದಿದ್ದಾರೆ. ಜೊತೆಗೆ ಇದೇ ಚಿತ್ರದಲ್ಲಿ ಅಭಿನಯಿಸಿರುವ ದತ್ತಣ್ಣ ಕೂಡ ಕನ್ನಡಲ್ಲಿಯೇ ಸಹಿ ಹಾಕಿದ್ದಾರೆ. ಸ್ಟಾರ್ ನಟಿಯಾಗಿರುವ ನಿತ್ಯಾ ಮೆನನ್ ಅವರ ಈ ಕನ್ನಡತನಕ್ಕೆ ಕನ್ನಡ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲಿ ಇನ್ನೂ ಕೆಲವು ನಟಿಯರಿದ್ದಾರೆ. ಇವರಿಗೆ ಬೆಳೆಯೋಕೆ ಮಾತ್ರ ಕನ್ನಡ ಬೇಕು. ಆದರೆ ಮಾತೋಡದಕ್ಕೆ, ಕನ್ನಡದ ಬಗ್ಗೆ ಹೇಳಿಕೊಳ್ಳೋದಕ್ಕೆ ಮಾತ್ರ ಕನ್ನಡ ಬೇಡ. ಇದಕ್ಕೆ ನಿದರ್ಶನವೇ ರಶ್ಮಿಕಾ ಮಂದಣ್ಣ. ಹೌದು, ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದ, ಕೊಡಗಿನವರಾದ ರಶ್ಮಿಕಾ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿ ಈಗ ತೆಲಗು ತಮಿಳಿನಲ್ಲಿ ಈಗ ತುಂಬಾ ಬ್ಯುಜಿ ನಟಿಯಾಗಿದ್ದಾರೆ. ಕನ್ನಡ ಚಿತ್ರದ ಮೂಲಕವೇ ಬೇಗನೆ ಬಹು ಎತ್ತರಕ್ಕೆ ಬೆಳೆದ ರಶ್ಮಿಕಾ ತಮಿಳಿನ ಖಾಸಗಿ ವಾಹಿನಿಯ ಸಂದರ್ಶದಲ್ಲಿ ನನಗೆ ಕನ್ನಡ ಮಾತಾಡೋದು ಕಷ್ಟ ಎಂದು ಹೇಳಿದ್ದು ಕನ್ನಡಿಗರನ್ನ ಕೆರಳುವಂತೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಈಕೆ ತಮಿಳು ಮಾತ್ರ ಬಹಳ ಸಲೀಸಾಗಿ ಮಾತನಾಡುತ್ತಾರೆ.