ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆಯ್ತು. ಈಗ WeOppose ಹೊಸ ಅಭಿಯಾನ ಶುರು ಮಾಡಿದ ಜಿಂಕೆಮರಿ ನಂದಿತಾ ಶ್ವೇತಾ.!

ಬಾಲಿವುಡ್ ಸೇರಿದಂತೆ ಸ್ಯಾಂಡಲ್ ವುಡ್ ವರೆಗೂ ಮೀಟೂ ಅಭಿಯಾನ ಸಖತ್ ಸೌಂಡ್ ಮಾಡಿತ್ತು.ಲೈಂಗಿಕ ಕಿರುಕುಳಕ್ಕೆ ಒಳಗಾದ ನಟಿಯರು MeeToo ಮೂಲಕ ಹಲವಾರು ನಾಯಕ ನಟರ ಮುಖವಾಡವನ್ನು ಕಳಚಿದ್ದರು. ಕೆಲವರು ಇದನ್ನ ತಮಗಾದ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳಲು ಬಳಸಿಕೊಂಡರೆ, ಇನ್ನೂ ಕೆಲವರು ಇದನ್ನೇ ದಾಳವಾಗಿ ಮಾಡಿಕೊಂಡರು.

ನಮ್ಮ ಕನ್ನಡ ಚಿತ್ರರಂಗದಲ್ಲೂ ಸಹ ಸಂಗೀತಾ ಭಟ್ ಮತ್ತು ಸಂಜನಾ ಕೂಡ ಮೀಟೂ ಆರೋಪ ಮಾಡಿದ್ದರು. ಆದರೆ ನಟಿ ಶ್ರುತಿ ಹರಿಹರನ್ ಬಹುಭಾಷ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ ಮೀಟೂ ಆರೋಪ ಸಾಕಾಷ್ಟು ಚರ್ಚೆಗಳನ್ನು ಹುಟ್ಟು ಹಾಕಿದ್ದಲ್ಲದೆ ಈಗ ಈ ಪ್ರಕರಣಕ್ಕೆ ಸಂಬಂದಪಟ್ಟ ಕೇಸ್ ಕೂಡ ನ್ಯಾಯಾಳದಲ್ಲಿದೆ.

ಸ್ಯಾಂಡಲ್ ವುಡ್ ನಲ್ಲಿ MeeToo ಎಬ್ಬಿಸಿದ್ದ ಬಿರುಗಾಳಿಯ ನಡುವೆ ಮತ್ತೊಬ್ಬ ನಂದಾ ಲವ್ಸ್ ನಂದಿತಾ ಚಿತ್ರದಲ್ಲಿ ನಟಿಸಿದ್ದ ನಟಿ ಶ್ವೇತಾ WeOppose ಎಂಬ ಹೊಸ ಅಭಿಯಾನವನ್ನು ಹುಟ್ಟುಹಾಕಿದ್ದಾರೆ.

ನಟ ನಟಿಯರು ನಿರಂತರ ತಮ್ಮ ಅಭಿಮಾನಿಗಳ ಜೊತೆ ಇರಲು ತಮ್ಮ ಚಿತ್ರಗಳ ಬಗ್ಗೆ, ತಮ್ಮ ಪರಿವಾರದ ಬಗ್ಗೆ, ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಬರೆದುಕೊಳ್ಳುತ್ತಾರೆ.ಇದರಿಂದ ನೇರವಾಗಿ ನಟ ನಟಿಯರ ಪ್ರತಿಯೊಂದು ವಿಷಯಗಳು ಅಭಿಮಾನಿಗಳಿಗೆ ತಲುಪುತ್ತದೆ.

ಏನಿದು WeOppose ಅಭಿಯಾನ.!

ಹೀಗೆ ನಟ ನಟಿಯರು ಹಾಕುವ ಪೋಸ್ಟ್ ಗಳಿಗೆ ಕೆಲವರು ಕೆಟ್ಟದಾಗಿ ಮತ್ತು ವೈಯುಕ್ತಿಕವಾಗಿ ಕಾಮೆಂಟ್ ಗಳನ್ನು ಮಾಡುತ್ತಾರೆ.ಅಷ್ಟೂ ಸಾಲದೆಂಬಂತೆ ಕೆಟ್ಟ ಕೆಟ್ಟ ಸಂದೇಶಗಳನ್ನು ನೇರವಾಗಿ ನಟ ನಟಿಯರಿಗೆ ಕಳುಹಿಸುತ್ತಾರೆ.ಆದರೆ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಸುಮ್ಮನೆ ಬಿಟ್ಟು ಬಿಡುತ್ತಾರೆ.ಯಾರೂ ಇದನ್ನ ವಿರೋದಿಸುವುದಿಲ್ಲ. ಆದರೆ ಇಂತಹವರಿಗೆ ಪಾಠ ಕಲಿಸಲು ನಟಿ ನಂದಿತಾ ಶ್ವೇತಾ WeOppose ಅಭಿಯಾನವನ್ನು ಹುಟ್ಟುಹಾಕಿದ್ದಾರೆ.

ಇದಕ್ಕೆ ನಿದರ್ಶನವೆಂಬಂತೆ ತನಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಅಭಿಮಾನಿಯೊಬ್ಬನ ಮೆಸೇಜ್ ನ ಸ್ಕ್ರೀನ್ ಶಾಟ್ ತೆಗೆದುಕೊಂಡು ತೆಗೆದು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿ, ಇಂತಹ ಕೆಟ್ಟ ವ್ಯಕ್ತಿಗಳನ್ನು ಸುಮ್ಮನೆ ಬಿಡಬಾರದು ಎಂದು ಬರೆದುಕೊಂಡಿದ್ದಾರೆ.ಅವರಿಗೆ ಪಾಠ ಕಲಿಸದೆ ಹಾಗೇ ಬಿಟ್ಟರೆ ಇನ್ನೂ ಇಂತಹ ಅಶ್ಲೀಲ ಸಂದೇಶಗಳು ಹೆಚ್ಚಾಗಿ ಬರುತ್ತವೆ ಎಂದು ಬರೆದುಕೊಂಡಿದ್ದಾರೆ.