ನೀವು ಮದ್ವೆಗೆ ಹೋದಾಗ ವಾಟರ್ ಬಾಟಲ್ ನಲ್ಲಿ ನೀರು ಕುಡಿಯುತ್ತೀರಾ.?ಹಾಗಾದ್ರೆ ತಪ್ಪದೇ ಈ ಮಾಹಿತಿ ನೋಡಿ…

ಇಂದು ಒಂದು ಮದುವೆ ಊಟಕ್ಕೆ ಹೋಗಿದ್ದೆ, ಊಟಕ್ಕೆ ಶುದ್ಧ ಮಿನರಲ್ ವಾಟರ್ ಬಾಟ್ಲಿಗಳ ನೀರಿನ ವ್ಯವಸ್ಥೆ ಇತ್ತು. ನಾನು ನೀರನ್ನು ಕುಡಿದು ನನ್ನ ಕೈ ಚೀಲದಲ್ಲಿ ಹಾಕಿಕೊಂಡು ಬಂದೆ‌.

ಮದುವೆ, ಪೂಜೆ, ಉಪನಯನ, ಆರತಕ್ಷತೆ ಮಿನರಲ್ ವಾಟರ್ ಬಾಟಲಿಗಳ ಕಾರುಬಾರು, ಊಟದ ಸಮಯದಲ್ಲಿ ನೀರನ್ನು ಕೊಡುವುದು ಇದು ಅನಿವಾರ್ಯ, ಆದರೆ ಈ ಮಿನರಲ್ ವಾಟರ್ ಬಾಟಲ್ ಗಳನ್ನು ಎಲೆ ಪಕ್ಕದಲ್ಲಿ ಇಡುವುದು ಇದರ ಅವಶ್ಯಕತೆ ನನಗೆ ಅರ್ಥವಾಗುತ್ತಿಲ್ಲ. ಇದೊಂದು ಸ್ಟೇಟಸ್ ನ್ನು ತೋರ್ಪಡಿಸಲು ಇರಬಹುದು.

ಕುಡಿಯಲು ಶುದ್ಧ ನೀರನ್ನು ಒದಗಿಸುವ ಉದ್ದೇಶ ಇರಬಹುದು, ನೀರನ್ನು ಹಂಚಲು ಒಬ್ಬ ಸಹಾಯಕನ ಅಗತ್ಯವಿಲ್ಲ ಎಂದು ಇರಬಹುದು. ಸ್ಟೀಲ್ ಗ್ಲಾಸ್ ನ್ನು ತೊಳೆಯುವುದು ಅದಕ್ಕೆ ಬಾಡಿಗೆ ಇದರ ಅಗತ್ಯವಿಲ್ಲವೆಂದಿರಬಹುದು. ಹೀಗೆ ಕಾರಣಗಳು ಅನೇಕವಿರಬಹುದು ಆದರೆ ಇಲ್ಲಿ ಪ್ರಕೃತಿಯ ಮೇಲೆ ಕೆಲವು ತಪ್ಪುಗಳು ಆಗುತ್ತಿವೆ.

ಈ ಬಾಟ್ಲಿ ನೀರಿನ ಸಂಪ್ರದಾಯ ಮದುವೆ ಮುಂಜಿ ಆರತಕ್ಷತೆಯಲ್ಲಿ ಮಾತ್ರವಲ್ಲ, ದೊಡ್ಡ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಆಫೀಸ್ ಗಳಲ್ಲಿ ಅವರ ಮೀಟಿಂಗ್ ಸಮಯದಲ್ಲಿ ನೀರಿನ ಬಾಟ್ಲಿಗಳನ್ನು ಇಡುವುದು, ಅದನ್ನು ಜನರು ಸಿಪ್ ಮಾಡುವುದು ಮತ್ತು 80% ನೀರನ್ನು ಪೋಲ್ ಮಾಡುವುದು…ಇದೆ…

ಪ್ಲಾಸ್ಟಿಕ್ ಬಾಟ್ಲಿಗಳ ಬಳಕೆಯಿಂದ ಏನೆಲ್ಲಾ ಆಗುತ್ತೆ..?

* ಈ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಾಗದಿದ್ದರೆ ಅದು ಒಂದು ಮಾಲಿನ್ಯ

*ಪ್ರತಿಶತ 50% ನೀರು ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಉಳಿದಿರುತ್ತದೆ. ಅ೦ದರೆ 1000 ಜನ ಊಟ ಮಾಡುವ ಸ್ಥಳದಲ್ಲಿ ಅಂದಾಜು 250 ಲೀಟರ್ ಶುದ್ಧ ಮಿನರಲ್ ನೀರು ಮೋರಿ ಪಾಲು.

*ಇನ್ನು ಈ ನೀರಿನ ಬಾಟಲಿಗಳನ್ನು ತೆಗೆಯಲು ಒಬ್ಬ ಕೆಲಸದವನ ನೇಮಕ ಮಾಡಲೇಬೇಕು.

*ಇನ್ನು ಈ ನೀರಿನಲ್ಲಿ ಹಾಕಿದ ಮಿನರಲ್ ಗಳು, ತಯಾರಿಕಾ ವೆಚ್ಚ ಪರಿಶ್ರಮ ಎಲ್ಲ ಹಾಳು.

ನಮ್ಮದೊಂದು ನಿವೇದನೆ ಸಾರ್ವಜನಿಕರಲ್ಲಿ…

ಊಟದ ಸಮಯದಲ್ಲಿ ಬಾಟ್ಲಿ ಸಂಪ್ರದಾಯಕ್ಕೆ ಕೊನೆಹಾಡಿ, ಒಂದು ವೇಳೆ ಬಾಟ್ಲಿಯಲ್ಲಿ ನೀರು ಕೊಟ್ಟು ಅದು ಉಳಿದರೆ ನೀರನ್ನು ದಯವಿಟ್ಟು ಅಲ್ಲಿಯೆ ಬಿಡಬೇಡಿ, ಅದನ್ನು ದಯವಿಟ್ಟು ನಿಮ್ಮ ಜೊತೆ ತನ್ನಿ.ಅದನ್ನು ಉಪಯೋಗಿಸಿ, ನಿಮ್ಮ ಮನೆಯಲ್ಲಿ ಇದ್ದ ಹೂ ಗಿಡಕ್ಕೆ ಹಾಕಿ. ನೀವು ನೀರಿನ ಬಾಟಲಿಯನ್ನು ತರುವಾಗ ಯಾರಾದರು ವಿನೋದಕ್ಕೆ ನಿಮ್ಮ ಅಪಹಾಸ್ಯ ಮಾಡಬಹುದು ಹಾಗೂ ನಿಮಗೆ ಮುಜುಗರವೂ ಆಗಬಹುದು. ಆದರೆ ಅದನ್ನು ಮರೆತು ಬಿಡಿ..

ನೀರು ಮತ್ತು ಗಾಳಿ ಇದ್ದರೆ ತಾನೆ ನಮ್ಮ ನಾಳೆಗಳು..ದಯವಿಟ್ಟು ಸಾಧ್ಯವಾದಷ್ಟು ಮತ್ತು ಸಾಧ್ಯವಾದಲ್ಲಿ ನೀರನ್ನು ಉಳಿಸಲು ಪ್ರಯತ್ನಿಸಿ..ನಿಮಗೆ ಈ ಮಾಹಿತಿ ಸರಿ ಅನಿಸಿದರೆ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ.