ನಮ್ಮ ಸಂಸದರಿಗೆ ಪ್ರತೀ ತಿಂಗಳು ಸಿಗುವ ಸಂಬಳ, ದಿನದ ಭತ್ಯೆಗಳು ಎಷ್ಟು?ಇತರೆ ಸೌಲಭ್ಯಗಳು ಏನೇನು ಗೊತ್ತಾ..?

ನಾವು ಆರಿಸಿ ಕಳಿಸುವ ಸಂಸದರಿಗೆ ಎಷ್ಟು ಸಂಬಳ ಸಿಗಲಿದೆ, ಏನೆಲ್ಲ ಸವಲತ್ತುಗಳು ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತದೆ. ಸಂಸದರ ಆಯ್ಕೆಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ ದಿನದಿಂದಲೇ, ಜನ ಪ್ರತಿನಿಧಿಗಳು ಸರ್ಕಾರಿ ಭತ್ಯೆ ಮತ್ತು ಸೌಲಭ್ಯಗಳಿಗೆ ಭಾಜನರಾಗಲಿದ್ದಾರೆ. ಸಂಸದರ ಸಂಬಳ ಕೂಡ ಕಾಲಕಾಲಕ್ಕೆ ಪರಿಷ್ಕರಣೆ ಆಗುತ್ತದೆ.

ಹಾಗಾದರೆ ಪ್ರಸ್ತುತ ಲೋಕಸಭಾ ಸದಸ್ಯರು ಪಡೆಯುತ್ತಿರುವ ಸಂಬಳ ಮತ್ತು ಅವರಿಗೆ ಸಿಗುವ ಸೌಲಭ್ಯಗಳು ಬಗ್ಗೆ ತಿಳಿಯೋಣ ಬನ್ನಿ…

*ನೂತನವಾಗಿ ಆಯ್ಕೆಯಾದ ಸಂಸದರಿಗೆ ಪ್ರಸ್ತುತ ತಿಂಗಳಿಗೆ 50 ಸಾವಿರ ಸಂಬಳ ನೀಡಲಾಗುತ್ತದೆ.

*ಇದರ ಜೊತೆಗೆ ಕಲಾಪದ ಸಂದರ್ಭದಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದಲ್ಲಿ ದಿನವೊಂದಕ್ಕೆ ಸಿಗುವ ದಿನ ಭತ್ಯೆ 2000 ರೂಪಾಯಿಗಳು.

*ಇನ್ನು ತಮ್ಮ ಕ್ಷೇತ್ರದಲ್ಲಿನ ಖರ್ಚು ವೆಚ್ಚಗಳಿಗಾಗಿ 45 ಸಾವಿರ ರೂಪಾಯಿಗಳನ್ನು ಕ್ಷೇತ್ರ ಭತ್ಯೆಯಾಗಿ ಕೊಡಲಾಗುತ್ತದೆ.

*ಸಂಸದರ ಆಫೀಸ್ ನಿರ್ವಹಣೆಗಾಗಿ ಪ್ರತೀ ತಿಂಗಳು ಕಚೇರಿ ಭತ್ಯೆಯಾಗಿ 45 ಸಾವಿರ ರೂಪಾಯಿಗಳನ್ನು ಕೊಡಲಾಗುತ್ತದೆ.ಇದರಲ್ಲಿ ಹದಿನೈದು ಸಾವಿರ ರೂಗಳನ್ನು ಸಭೆಗಳ, ಪೋಸ್ಟ್ ಗಳ ಖರ್ಚುಗಳಿಗಾಗಿ ಬಳಸಬಹುದಾಗಿದೆ.

*ಕಚೇರಿ ಅಥವಾ ಮನೆಯ ಕರ್ಟನ್ ಪೀಠೋಪಕರಣ, ಬಟ್ಟೆ ಸ್ವಚ್ಛತೆ ತಗಲುವ ವೆಚ್ಚವನ್ನು ನೀಡಲಾಗುತ್ತಿದ್ದು, ಇದರ ಜೊತೆಗೆ 60000ರೂ ಮೌಲ್ಯದ ಪೀಠೋಪಕರಣ ಕೊಡ್ನುಕೊಳ್ಳಬಹುದಾಗಿದೆ. 

ಸಂಸದರಿಗೆ ಸಿಗುವ ವಸತಿ ಸೌಲಭ್ಯ…

*ಆಯ್ಕೆಯಾದ ಸಂಸದರು ತಾತ್ಕಾಲಿಕವಾಗಿ ಉಳಿದುಕೊಳ್ಳಲು, ಆಯಾ ರಾಜ್ಯದ ಸರ್ಕಾರಗಳು ಹೋಟೆಲ್ ಅಥ್ವಾ ಗೆಸ್ಟ್ ಹೌಸ್ ಗಳನ್ನು ನೀಡಬೇಕು. ಸರ್ಕಾರದಿಂದ ಶಾಶ್ವತ ನೆಲೆ ಕಲ್ಪಿಸುವವರೆಗೂ ಸಂಸದರೂ ಹೋಟೆಲ್ ಗೆಸ್ಟ್ ಹೌಸ್ ಗಳಲ್ಲಿ ಉಳಿದುಕೊಳ್ಳಬಹುದು. ಸಂಸದರ ಅವಧಿ ಪೂರ್ಣ ಆಗುವವರೆಗೂ ಉಚಿತವಾಗಿ ಮನೆ ಸಿಡಲಿದ್ದು, ಒಂದು ವೇಳೆ ಸಂಸದರು ಉಚ್ಚಾಟನೆ ಆದಲ್ಲಿ, ಅಥ್ವಾ ರಾಜೀನಾಮೆ ನೀಡಿದಲ್ಲಿ, ಅನಂತರ ಆ ಮನೆಯಲ್ಲಿ ಒಂದು ತಿಂಗಳು ಮಾತ್ರ ಉಳಿದುಕೊಳ್ಳಬಹುದಾಗಿದೆ. ಸಂಸದರು ಒಂದು ವೇಳೆ ಅಕಾಲಿಕವಾಗಿ ಮರಣ ಹೊಂದಿದಲ್ಲಿ, ಅವರ ಕುಟುಂಬದ ಸದಸ್ಯರು ಅದೇ ಮನೆಯಲ್ಲಿ ಆರು ತಿಂಗಳ ಕಾಲ ಉಚಿತವಾಗಿ ತಿಳಿದುಕೊಳ್ಳಬಹುದಾಗಿದೆ.

ಸಂಸದರಿಗೆ ಸಿಗುವ ಪ್ರವಾಸದ ಭತ್ಯೆಗಳು…

*ಯಾವುದೇ ಸಂಸದರು ಸಂಸತ್ ಕಲಾಪಗಳು ಅಥ್ವಾ ಯಾವುದೇ ಕಾರ್ಯಕ್ರಮಗಳಿಗೆ ಹೋಗಲು ರೈಲು ಪ್ರಯಾಣ ಮತ್ತು ವಿಮಾನ ಪ್ರಯಾಣದಲ್ಲಿ ಸಂಪೂರ್ಣ ರಿಯಾಯತಿ ನೀಡಾಲಾಗಿದೆ. ಸಂಸದರು ರೈಲಿನಲ್ಲಿ ಪ್ರಯಾಣ ಮಾಡಲು ಅವರಿಗೆ ಫುಚಿತ ರೈಲ್ವೆ ಪಾಸ್ ನೀಡಲಾಗಿದ್ದು, ಈ ಪಾಸ್ ನ್ನು ಬೇರೆಯವರಿಗೆ ವರ್ಗಾಯಿಸುವ ಹಾಗಿಲ್ಲ. ಯಾವುದೇ ಸಮಯದಲ್ಲಿ ಬೇಕಾದ್ರೂ, ಯಾವುದೇ ರೈಲಿನಲ್ಲಿ ಎಸಿ ದರ್ಜೆಯ ಪ್ರಯಾಣ ಉಚಿತ.

ಎಷ್ಟು ಬಾರಿಯಾದರೂ ಸಂಚರಿಸಬಹುದು.ಜತೆಗೆ ಒಬ್ಬ ಸಂಸದನಿಗೆ ಒಂದು ಫಸ್ಟ್ ಕ್ಲಾಸ್ ಮತ್ತು ಒಂದು ಸೆಕೆಂಡ್ ಕ್ಲಾಸ್ ಬೋಗಿಯ ಪ್ರಯಾಣದ ಟಿಕೆಟ್ ದರ ಕೂಡ ಲಭ್ಯವಿದೆ. ಸಂಸದರ ಜೊತೆಗೆ ಅವರ ಪತಿ ಅಥವಾ ಪತ್ನಿ ಕೂಡ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

*ಇನ್ನು ಸಂಸದರು ಉಚಿತ ವಿಮಾನ ಪ್ರಯಾಣ ಮಾಡಬಹುದಾಗಿದ್ದು ಒಂದು ವರ್ಷಕ್ಕೆ 34 ಬಾರೀ ಸಿಂಗಲ್ ಟಿಕೆಟ್ ಮೂಲಕ ಪ್ರಯಾಣ ಮಾಡಬಹುದು. ಸಂಸದರು ತಮ್ಮ ಪತಿ ಅಥವಾ ಪತ್ನಿ ಜೊತೆಗೆ ವರ್ಷದಲ್ಲಿ 8 ಬಾರಿ ವಿಮಾನ ಪ್ರಯಾಣ ಮಾಡಬಹುದು. ಒಂದು ವೇಳೆ ವರ್ಷದಲ್ಲಿ ಈ ಗರಿಷ್ಟ ಮಿತಿ ಬಳಸಲು ಆಗದಿದ್ದಲ್ಲಿ ಉಳಿದ ಟಿಕೆಟ್ ಮುಂದಿನ ವರ್ಷಕ್ಕೆ ವರ್ಗಾವಣೆ ಆಗಲಿದೆ.

*ಸಂಸದನೊಬ್ಬ ರಸ್ತೆ ಮೂಲಕ ಎಷ್ಟೆಲ್ಲಾ ಸಂಚರಿಸುತ್ತಾನೋ ಅಷ್ಟೂ ಪ್ರಯಾಣಕ್ಕೆ ಪ್ರತಿ ಕಿಲೋ ಮೀಟರ್ಗೆ 16 ರೂಪಾಯಿ ಭತ್ಯೆ ಸಿಗಲಿದೆ.

ಸಂಸದರಿಗೆ ಸಿಗುವ ದೂರವಾಣಿ ಸೌಲಭ್ಯಗಳು…

*ಸಂಸದರಾಗಿ ಆಯ್ಕೆಯಾದವರಿಗೆ ಮೂರೂ ಟೆಲಿಫೋನ್ ನಂಬರ್ ಗಳನ್ನು ನೀಡಲಾಗುತ್ತದೆ. ಮೂರು ಟೆಲಿಫೋನ್ ಸಂಪರ್ಕಗಳನ್ನು ಪ್ರತಿ ಸಂಸದ ಹೊಂದಬಹುದು. ಒಂದು ದೆಹಲಿಯ ಕಚೇರಿ, ಇನ್ನೊಂದು ತಮ್ಮ ಕ್ಷೇತ್ರದ ಕಚೇರಿ, ಮತ್ತೊಂದು ಸಂಸದ ಇಚ್ಛಿಸಿದ ಯಾವುದೇ ಸ್ಥಳದಲ್ಲಿ. ಇರಬೇಕು, ಮೂರನೇ ಸಂಖ್ಯೆಯನ್ನು ಎಲ್ಲಿ ಹಾಕಬೇಕು ಎನ್ನುವುದನ್ನು ಸಂಸದರ ಇಷ್ಟಕ್ಕೆ ಬಿಡಲಾಗಿದೆ.

*ಇನ್ನೂ ಮೂರೂ ಫೋನ್ ನಂಬರ್ ಗಳಿಂದ ವರ್ಷಕ್ಕೆ 50000 ಉಚಿತ ಲೋಕಲ್ ಕಾಲ್ ಗಳನ್ನು ಮಾಡಬಹುದು.

*ಪ್ರತೀ ಸಂಸದನಿಗೆ MTNL ಮೊಬೈಲ್ ಸಂಪರ್ಕ ನೀಡಲಾಗಿದ್ದು, ಇದರ ಜೊತೆಗೆ BSNL ಸೇರಿದಂತೆ ಪ್ರೈವೇಟ್ ಕಂಪನಿಗಳ ಮೊಬೈಲ್ ಸಂಪರ್ಕ ಪಡೆಯಬಹುದಾಗಿದೆ. ಇದರಿಂದ ವರ್ಷಕ್ಕೆ 150000 ಕರೆಗಳನ್ನು ಮಾಡಬಹುದಾಗಿದೆ.

ಸಂಸದರಿಗೆ ಸಿಗುವ ಇನ್ನಿತರ ಸೌಲಭ್ಯಗಳು…

*ಇನ್ನು ಸಂಸದರಿಗೆ ವೈದ್ಯಕೀಯ ಭತ್ಯೆಯಾಗಿ ಪ್ರಸ್ತುತ ನಾಗರಿಕ ಸೇವೆಯಲ್ಲಿರುವ ಕ್ಲಾಸ್ -1 ಅಧಿಕಾರಿಗಳಿಗೆ ಸಿಗುವ ಎಲ್ಲ ವೈದ್ಯಕೀಯ ಭತ್ಯೆಗಳು ಸಂಸದರಿಗೆ ಸಿಗುತ್ತದೆ.

*ಸಂಸದರು ವರ್ಷಕ್ಕೆ ೫೦ಸಾವಿರ ಯುನಿಟ್ ವಿದ್ಯುತ್ ನ್ನು ಉಚಿತವಾಗಿ ಬಳಸಬಹುದಾಗಿದೆ.

*ಈ ಎಲ್ಲಾ ಸೌಲಭ್ಯಗಳ ಜೊತೆಗೆ ಸಂಸದರು ಕಂಪ್ಯೂಟರ್, ಡೆಸ್ಕ್ ಟಾಪ್, ಲ್ಯಾಪ್‍ಟಾಪ್, ಪ್ರಿಂಟರ್, ಸ್ಕ್ಯಾನರ್ ಖರೀದಿ ಮಾಡಲು ಒಂದು ಲಕ್ಷದ ಐವತ್ತು ಸಾವಿರ ನೀಡಲಾಗುತ್ತದೆ.

*ಸಂಬಳ ಸೇರಿದಂತೆ ಸಂಸದರಿಗೆ ಸಿಗುವ ಎಲ್ಲಾ ಭತ್ಯೆಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ವಿನಾಯಿತಿ ನೀಡಲಾಗಿದೆ.