ನಿಮ್ಮ ಕೈನಲ್ಲಿ M ಗುರುತು ಇದೆಯೇ?ಈ ಗುರುತು ಇರುವವರು ಜೀವನದಲ್ಲಿ ಯಾವ ರೀತಿ ಇರ್ತಾರೆ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಖಾರ ನಮ್ಮ ಹಸ್ತ ಅಂದರೆ ಕೈಗಳಲ್ಲಿರುವ ರೇಖೆಗಳು ನಮ್ಮ ಮುಂದಿನ ಭವಿಷ್ಯದ ಬಗ್ಗೆ ತಿಳಿಸುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಸ್ತದಲ್ಲಿರುವ ಪ್ರತೀರೆಖೆಗಳಿಗೂ ಅದರದ್ದೇ ಆದ ವಿಶೇಷ ಮಹತ್ವವಿದ್ದು ನಮ್ಮ ಜೀವನಕ್ಕೆ ಸಂಬಂಧಿಸಿದ ಹಾಗೆ ಸಂಖೇತಗಳನ್ನೂ ನೀಡುತ್ತೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಕೆಲವೊಂದು ರೇಖೆಗಳು ನಮ್ಮ ಜೀವನದಲ್ಲಿ ನಡೆಯುವ ಶುಭ ಸಂಕೇತಗಳನ್ನು ನೀಡುತ್ತವಂತೆ. ಅದರಲ್ಲಿ ನಿಮ್ಮ ಹಸ್ತದಲ್ಲಿ ಕಾಣುವ ಎಮ್ ಆಕಾರದ ಗುರುತಿನ ರೇಖೆಗಳಿದ್ದರೆ ಶುಭದ ಸಂಖೇತ ಎಂದು ಹೇಳಲಾಗಿದೆ.

ನಿಮ್ಮ ಹಸ್ತದ ಮೇಲೆ ಎಮ್ (M) ಗುರುತಿದ್ದರೆ ಅಂತಹ ವ್ಯಕ್ತಿಗಳು ತುಂಬಾ ಭಾಗ್ಯಶಾಲಿಗಳಾಗಿತ್ತಾರಂತೆ ಜೊತೆಗೂ ಇವರು ತಮ್ಮ ಇಡೀ ಜೀವನವನ್ನು ತುಂಬಾ ಸಿರಿವಂತಿಕೆಯಿಂದಲೇ ಕಳೆಯಲಿದ್ದು, ಅದೃಷ್ಟ ಇಂತಹ ವ್ಯಕ್ತಿಗಳನ್ನು ಹುಡುಕಿಕೊಂಡು ಬರುತ್ತದೆ ಎಂದು ಹಸ್ತ ರೇಖಾ ಶಾಸ್ತ್ರದಲ್ಲಿ ಹೇಳಲಾಗಿದೆ.

ತನ್ನ ಹಸ್ತದಲ್ಲಿ ಎಮ್ (M) ರೇಖೆ ಹೊಂದಿರುವ ವ್ಯಕ್ತಿಗಳು ಎಷ್ಟೇ ಕಷ್ಟದ ಕೆಲಸವಿದ್ದರೂ ಸುಲಭವಾಗಿ ಮಾಡುತ್ತಾರೆ. ಇಂತಹ ವ್ಯಕ್ತಿಗಳು ರಾಜಕೀಯದಲ್ಲಿ ತುಂಬಾ ಚೆನ್ನಾಗಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.

ಎಮ್ ಆಕೃತಿಯ ರೇಖೆಗಳನ್ನು ಹೊಂದಿರುವವರು ಮ್ಯಾನೇಜ್ಮೆಂಟ್, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಹೆಚ್ಚು ಯಶಸ್ಸು ಗಳಿಸುತ್ತಾರಂತೆ. ಇವರು ತುಂಬಾ ಬುದ್ದಿವಂತರಾಗಿದ್ದು ತಮ್ಮ ಕೌಶಲ್ಯ ಮತ್ತು ಜಾಣ್ಮೆಯಿಂದ ಬೇರೆಯವರ ಕೈನಲ್ಲಿ ಕೆಲಸ ಮಾಡಿಸುತ್ತಾರೆ. ಇವರು ತಮ್ಮ ಹೆಚ್ಚು ಸಮಯವನ್ನು ತಮ್ಮ ಕುಟುಂಬದ ಜೊತೆಗೆ ಕಾಲ ಕಳೆಯಲಿದ್ದು ಅವರಲ್ಲಿ ಹೆಚ್ಚಿನ ಪ್ರೀತಿ ಸಂಪಾದಿಸುತ್ತಾರೆ ಎಂದು ಶಾಸ್ತ್ರಗಲ್ಲಿ ಉಲ್ಲೇಖಿಸಲಾಗಿದೆ.

Leave a Reply