ನಿಮ್ಮ ಹೆಸರು B ಅಕ್ಷರದಿಂದ ಶುರುವಾಗುತ್ತದೆಯೇ?ಹಾಗಿದ್ರೆ ನಿಮ್ಮ ಗುಣ ಸ್ವಭಾವ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?

ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಹೆಸರಿನ ಮೊದಲ ಅಕ್ಷರ ನಮ್ಮ ಗುಣ ಸ್ವಭಾವಗಳನ್ನು ಹೇಳುತ್ತದೆ. ನಮ್ಮ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ನಾವು ಎಂಥವರು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಹಾಗಾದರೆ ಬನ್ನಿ ಬಿ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ಗುಣ ಸ್ವಭಾವ ಎಂತಹದು ಎಂದು ತಿಳಿಯೋಣ…

ಬಿ ಅಕ್ಷರವು ಸಂಖ್ಯೆ ಎರಡನ್ನು ಪ್ರತಿನಿಧಿಸುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಬಿ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ಸ್ವಲ್ಪ ದ್ವಂದ್ವ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಇವರು ಯೋಚನೆ ಮಾಡುವುದೇ ಬೇರೆ ಕೆಲಸ ಮಾಡುವುದೇ ಬೇರೆಯಾಗಿರುತ್ತದೆ.

ಇವರು ಯಾವಾಗಲೂ ಗೊಂದಲಕ್ಕೀಡಾಗುತ್ತಾರೆ. ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬಗೊಂದಲದಲ್ಲಿ ಇರುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲು ಸಹ ಇದೇ ಗೊಂದಲ ಮುಂದುವರೆಯುತ್ತದೆ. ಇವರಿಗೆ ಒಮ್ಮೆ ಸರಿ ಅನಿಸಿದ್ದು ಇನ್ನೊಂದು ಕ್ಷಣಕ್ಕೆ ಸರಿ ಎನಿಸುವುದಿಲ್ಲ. ಹೀಗೆ ಇವರು ಗೊಂದಲಕಾರಿ ನಿಲುವನ್ನು ಹೊಂದಿರುತ್ತಾರೆ.

ಇವರು ತುಂಬಾ ಭಾವನಾಜೀವಿಗಳಾಗಿರುತ್ತಾರೆ. ತಾವು ನಂಬಿದವರನ್ನು ತುಂಬಾ ಪ್ರೀತಿಸುತ್ತಾರೆ. ಅವರ ಬಗ್ಗೆ ತುಂಬಾ ಕಾಳಜಿಯನ್ನು ಹೊಂದಿರುತ್ತಾರೆ. ಇವರು ಅವರ ಕುಟುಂಬದವರಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಯಾವುದೇ ಕಾರಣಕ್ಕೂ ಕುಟುಂಬಕ್ಕೆ ಮೋಸ ಮಾಡುವವರಲ್ಲ. ಎಲ್ಲದಕ್ಕಿಂತ ಮೊದಲ ಆದ್ಯತೆಯನ್ನು ತಮ್ಮನ್ನು ನಂಬಿದವರಿಗೆ ಹಾಗೂ ತಮ್ಮ ಕುಟುಂಬದವರೆಗೆ ಕೊಡುತ್ತಾರೆ.

ಇವರು ಸಹಾಯಕಾರಿ ಮನೋಭಾವವನ್ನು ಹೊಂದಿರುತ್ತಾರೆ. ಮನೆಯಲ್ಲಿ ಆಗಲಿ ತಮ್ಮ ಕೆಲಸದ ಸ್ಥಳದಲ್ಲಿ ಆಗಲಿ ತಮ್ಮ ಸುತ್ತಮುತ್ತಲಿನವರಿಗೆ ಸಹಾಯವನ್ನು ಮಾಡುತ್ತಾರೆ. ಇನ್ನು ಕೆಲಸದ ವಿಷಯಕ್ಕೆ ಬಂದರೆ ಇವರು ತುಂಬಾ ಪರಿಶ್ರಮ ಜೀವಗಳು. ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅದಕ್ಕೆ ತಕ್ಕನಾದ ಪ್ರತಿಫಲವು ಇವರಿಗೆ ದೊರೆಯುತ್ತದೆ. ಕೆಲಸ ಎಷ್ಟೇ ಕಠಿಣವಾದರೂ ಸಹ ಅದನ್ನು ಅರ್ಧಕ್ಕೆ ಬಿಡದೆ ಮುಂದುವರೆಸುತ್ತಾರೆ.

ಇನ್ನು ಇವರು ಹಲವು ವಿಚಾರಗಳಲ್ಲಿ ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ವ್ಯವಹಾರಗಳಲ್ಲಿ, ಯಾವುದೇ ಸಮಸ್ಯೆ ಬಂದಾಗ ಇಬ್ಬರ ವ್ಯಕ್ತಿಗಳ ನಡುವೆ ಮಧ್ಯವರ್ತಿಯ ಕೆಲಸವನ್ನು ನಿಭಾಯಿಸುತ್ತಾರೆ.

ಇವರು ಇತರರ ಭಾವನೆಗಳನ್ನು ಸಲೀಸಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅವರಿಗೆ ಬೇಕಾದ ಸಹಕಾರವನ್ನು ಮಾಡುತ್ತಾರೆ. ಇವರು ತುಂಬಾ ಧೈರ್ಯಶಾಲಿಗಳಾಗಿದ್ದು ಇವರು ಹೆದರಿಕೆ ಬೆದರಿಕೆಗೆ ಯಾವುದೇ ಕಾರಣಕ್ಕೂ ಜಗ್ಗುವವರಲ್ಲ.

ಇವರು ಒಳ್ಳೆಯವರಿಗೆ ಹೇಗೆ ಸಹಾಯ ಮಾಡುತ್ತಾರೆ ಹಾಗೆ ಕೆಟ್ಟವರಿಗೆ ತಕ್ಕ ಪಾಠ ಕಲಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಇವರು ಕೆಟ್ಟ ವ್ಯಕ್ತಿಗಳ ಜೊತೆ ಹೋರಾಡಿ ಗೆಲ್ಲುವ ಶಕ್ತಿಯನ್ನು ಹೊಂದಿರುತ್ತಾರೆ. ತಮ್ಮನ್ನು ಕಾಡುವ ವ್ಯಕ್ತಿಗಳಿಗೆ ಖಂಡಿತವಾಗಿ ಇವರು ತಕ್ಕ ಪಾಠವನ್ನೇ ಕಲಿಸುತ್ತಾರೆ.

ಮೊದಲೇ ಹೇಳಿದಂತೆ ಇವರು ಭಾವನಾಜೀವಿಗಳಾಗಿರುತ್ತಾರೆ. ತಮ್ಮ ಮನೆಯವರ ಬಗ್ಗೆ ಅಪಾರ ಪ್ರೀತಿ ಕಾಳಜಿಯನ್ನು ಹೊಂದಿರುತ್ತಾರೆ. ಆದ್ದರಿಂದ ಇವರಿಗೆ ಅವರಿಂದ ಸ್ವಲ್ಪ ನೋವಾದರೂ ಕುಗ್ಗಿ ಹೋಗುತ್ತಾರೆ. ಆದರಿಂದ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಉತ್ತಮ. ಇವರು ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಇವರ ವೈವಾಹಿಕ ಜೀವನ ಚೆನ್ನಾಗಿ ಇರುತ್ತದೆ.