ಕುರುಕ್ಷೇತ್ರ ಚಿತ್ರದ ಟ್ರೈಲರ್ ನೋಡಿ ಗರಂ ಆದ ದರ್ಶನ ಅಭಿಮಾನಿಗಳು!ಹಾಗಾದ್ರೆ ಟ್ರೈಲರ್ ಇರುವುದೇನು ಗೊತ್ತಾ?

ಕನ್ನಡ ಚಿತ್ರರಂಗ ಸೇರಿದಂತೆ ಕನ್ನಡಿಗರೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದ್ದು, ಈಗ ಚಿತ್ರ ತಂಡವು ನೆನ್ನೆಯಷ್ಟೇ ಕುರುಕ್ಷೇತ್ರ ಚಿತ್ರದ ಟ್ರೈಲರ್ ರಿಲೀಸ್ ಮಾಡಿದೆ.

ಆದರೆ ದರ್ಶನ ಅಭಿನಯದ ಅತೀ ನಿರೀಕ್ಷಿತ 50ನೇ ಚಿತ್ರ ಇದಾಗಿದ್ದು ಟ್ರೈಲರ್ ನೋಡಿದ ಡಿಬಾಸ್ ಅಭಿಮಾನಿಗಳು ಸಖತ್ ಗರಂ ಆಗಿದ್ದಾರೆ. ಅಭಿಮಾನಿಗಳಲ್ಲಿ ಚಿತ್ರದ ಟ್ರೈಲರ್ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಟ್ರೈಲರ್ ನೋಡಿದ ನಂತರ ತುಂಬಾ ಕೆಟ್ಟದಾಗಿದ್ದು, ಟ್ರೈಲರ್ ಟೀಸರ್ ನಂತಿದೆ ಎಂದು ನಿರ್ಮಾಪಕ ಮುನಿರತ್ನ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿ ಬಿಟ್ಟಿದ್ದ ಎರಡು ಟೀಸರ್ ಗಳನ್ನು ಸೇರಿಸಿ ಒಂದು ಟ್ರೈಲರ್ ಮಾಡಿದ್ದೀರಾ..ಇಂತಹ ಕೆಟ್ಟ ಟ್ರೈಲರ್ ಮಾಡಲು ನೀವೇ ಬೇಕಿತ್ತಾ ಎಂದು ಕುರುಕ್ಷೇತ್ರ ಚಿತ್ರದ ನಿರ್ಮಾಪಕರಾಗಿರುವ ಮುನಿರತ್ನ ವಿರುದ್ಧ ದರ್ಶನ ಅಭಿಮಾನಿಗಳು ಗರಂ ಆಗಿದ್ದಾರೆ.

ಕನ್ನಡದಲ್ಲಿ ಕೆಜಿಎಫ್ ಚಿತ್ರ ಬಂಡ ನಂತರ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆ ನೋಡುತ್ತಿದೆ.ಇಂತಹ ಸಮಯದಲ್ಲಿ ಕುರುಕ್ಷೇತ್ರ ಚಿತ್ರದ ಒಂದೂವರೆ ನಿಮಿಷದ ಟ್ರೈಲರ್ ನಲ್ಲಿ ಕೇವಲ ಮುನಿರತ್ನರವರ ಹೆಸರು ಹಾಗೂ ಕ್ವಾಲಿಟಿ ಇಲ್ಲದ ಕೆಟ್ಟದಾದ ಟ್ರೈಲರ್ ಮಾಡಿದ್ದೀರಾ ಎಂದು ಚಿತ್ರ ತಂಡದ ವಿರುದ್ಧ ದಚ್ಚು ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.