ದಕ್ಷಿಣ ಭಾರತದ ಖ್ಯಾತ ನಟಿಯ ಈ ಅವತಾರ ನೋಡಿ ದಂಗಾದ ನೆಟ್ಟಿಗರು..!

ಬೆಳ್ಳಿ ಪರದೆ ಮೇಲೆ ಮಿಂಚುವ ನಟಿಯರನ್ನು ನೋಡುವ ಪಡ್ಡೆ ಹುಡುಗರಿಗೆ ಎದೆ ಝಲ್ ಎನ್ನಿಸದೇ ಇರಲ್ಲ. ಅಷ್ಟೊಂದು ಸೌಂದರ್ಯದಿಂದ ಕಂಗೊಳಿಸುತ್ತಾರೆ ನಟಿಮಣಿಗಳು.

ಆದರೆ ಅವರ ಸೌಂದರ್ಯದ ಹಿಂದೆ ಇರುವುದು ಅವರು ಮಾಡಿಕೊಂಡಿರುವ ಮೇಕಪ್. ಆದರೆ ಅದೇ ನಟಿಯರು ಮೇಕಪ್ ಇಲ್ಲದೆ ಕಾಣಿಸಿಕೊಂಡಾಗ, ಇವರೇನಾ ಆ ನಟಿಯರು ಎಂದು ಎಂಥವರಿಗಾದರೂ ಸಂಶಯ ಮೂಡದೇ ಇರೋದಿಲ್ಲ.

ಇದಕ್ಕೆ ನಿದರ್ಶನವೆಂಬಂತೆ ಕೆಲವು ದಿನಗಳ ಹಿಂದಷ್ಟೇ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಮೇಕಪ್ ಇಲ್ಲದ ಫೋಟೋ ಹಾಕಿದ್ದರು. ಈ ಫೋಟೋಗೆ ಸಾಮಾಜಿಕ ಜಾಲಾತಾಣಗಳಲ್ಲಿ ಸಾಕಷ್ಟು ಮೆಚ್ಚೆಗೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಈಗ ಅದೇ ಹಾದಿಯಲ್ಲಿ ಸಾಗಿರುವ ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿ ಕೀರ್ತಿ ಸುರೇಶ್ ಮೇಕಪ್ ಇಲ್ಲದ ಫೋಟೋ ಹಾಕಿದ್ದು, ಸೋಷಿಯಲ್ ಮಿಡಿಯಾಗಳಲ್ಲಿ ಈ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳುದಂಗಾಗಿಬಿಟ್ಟಿದ್ದಾರೆ.

ಹಲವಾರು ಸಿನಿಮಾಗಳಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರೂ, ಇದರ ನಡುವೆಯೂ ಜಿಮ್ ನಲ್ಲಿ ವರ್ಕೌಟ್ ಮಾಡಿರುವ ಫೋಟೋವನ್ನು ಕೀರಿ ಸುರೇಶ್ ಹಾಕಿದ್ದಾರೆ. ಈ ಮೇಕಪ್ ಇಲ್ಲದ ಫೋಟೋವನ್ನು ನೋಡಿದ ಅವರ ಅಭಿಮಾನಿಗಳು ಇವರೇನಾ ಕೀರ್ತಿ ಸುರೇಶ ಎಂದು ಶಾಕ್ ಆಗಿದ್ದಾರೆ.