ಎಂಬತ್ತು ವರ್ಷದ ಮುದುಕನೊಬ್ಬನಿಗೆ ಹೃದಯದ ಆಪರೇಶನ್ ಆಯ್ತು..ಆಸ್ಪತ್ರೆಯ ಬಿಲ್ಲು ನೋಡಿದ ಮುದುಕ…

ಮುದುಕನೊಬ್ಬನಿಗೆ ಹೃದಯದ ಆಪರೇಷನ್ ಆಗುತ್ತೆ. ಆತನಿಗೆ ೮೦ವರ್ಷ ವಯಸಾಗಿರುತ್ತೆ. ಆಸ್ಪತ್ರೆಯ ವೈದ್ಯರು ಆ ಮುದುಕನಿಗೆ ಆಪರೇಷನ್ ಗೆ ಖರ್ಚಾದ ಬಿಲ್ಲನ್ನು ಮುಂದಿಡುತ್ತಾರೆ. ಆಗ ಆ ಮುದುಕ 8 ಲಕ್ಷ… ಬಿಲ್ಲು ನೋಡಿ ಕಣ್ಣಿರು ಹಾಕಿದ… ಅದನ್ನು ಕಂಡ ವೈದ್ಯರು ಹೇಳಿದರು, ಅಳಬೇಡಿ ನಿಮ್ಮ ಬಿಲ್ಲು ಸ್ವಲ್ಪ ಕಡಿಮೆ ಮಾಡುತ್ತೇನೆ…

ಸರ್ ಈ ಬಿಲ್ಲು ತುಂಬಾ ಕಡಿಮೆ… 10 ಲಕ್ಷ ಆದರೂ ತುಂಬುವ ಯೋಗ್ಯತೆ ನನಗಿದೆ… ನಾನು ಅತ್ತಿದ್ದು ಅದಕ್ಕಲ್ಲ, ಯಾಕೆಂದರೆ ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಕಾಪಾಡಿದ್ದಕ್ಕೆ ಯಾವುದೇ ಬಿಲ್ಲು ನನಗೆ ಕಳಿಸಲಿಲ್ಲ… ನೀವು ಕೇವಲ 3 ಗಂಟೆ ನನ್ನ ಹೃದಯದ ಫಂಕ್ಷನಿಂಗ್ ನೋಡಿಕೊಂಡಿದ್ದಕ್ಕೆ 8 ಲಕ್ಷ ರೂಪಾಯಿಯೇ..?

ಓ ಪರಮಾತ್ಮ ನೀನು ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತಿಯಾ… ನೀನು ನಮ್ಮ ಒಂದೊಂದು ಅಂಗಾಂಗದ ಮೇಲೂ ಬೆಲೆಕಟ್ಟಲಾಗದ ಇನ್ವೆಸ್ಟ್ಮೆಂಟ್ ಮಾಡಿದ್ದೀಯಾ… ನಮ್ಮ ದೇಹದ ಯಾವುದೋ ಒಂದು ಅಂಗ ಸರಿಯಾಗಿ ಕೆಲಸಮಾಡಲಿಲ್ಲ ಅಂತ ಡಾಕ್ಟರ್ ಬಳಿಗೆ ಹೋದಾಗಲೇ ನಿನ್ನ ಬೆಲೆ ನಮಗೆ ಅರ್ಥವಾಗೋದು…

ನೀನು ಮ್ಯಾನ್ಯುಫ್ಯಾಕ್ಚರರ್, ನಿನ್ನನ್ನೆಂದೂ ನಾವು ನೀನು ನಮ್ಮ ಮೇಲೆ ಮಾಡಿರುವ ಇನ್ವೆಸ್ಟ್ಮೆಂಟ್ ಸಲುವಾಗಿಯಾದರೂ ನೆನೆಯಲಿಲ್ಲ… ಆದರೆ ಆಪರೇಷನ್ ಹೆಸರಿನಲ್ಲಿ ನೀನು ಫ್ರೀಯಾಗಿ ಕೊಟ್ಟ ಅಂಗಾಗವನ್ನು ಊನ ಮಾಡಿ ಏನೋ ಒಂದು ರಿಪೇರಿಮಾಡಿ ಕಳಿಸಿದ ಡಾಕ್ಟರ್ ಗಳಿಗೆ ಲಕ್ಷಾಂತರ ಹಣ ಕೊಟ್ಟು ಭಯ ಭಕ್ತಿಯಿಂದ ನಿನಗಿಂತಲೂ ಒಂದು ತೂಕ ಮೇಲೆ ಎಂದು ನಮಸ್ಕಾರ ಮಾಡಿ ಬರುತ್ತೇವೆ…

ಓ ಭಗವಂತ ! ಆದರೂ ನೀನು ಕೋಪಗೊಳ್ಳದೇ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿರುತ್ತೀಯಾ…‌ಎಂಥಹ ಕರುಣಾಳು ನೀನು…ಅಂಥಹ ನಿನ್ನನ್ನು ಇಷ್ಟು ದಿನ ನೆನೆಯದೇ ಬಿಟ್ಟೆನಲ್ಲ…ಕ್ಷಮಿಸು ನನ್ನನ್ನು… ಇಂದು ಅರಿವಾಯಿತು ನೀನು ನನ್ನ ಸ್ವಾಮಿ ನಾನು ನಿನ್ನ ದಾಸ ಎಂಬುದರ ಅರ್ಥ…

ನಿನ್ನ ಉಪಕಾರಕ್ಕೆ ಪ್ರತಿಯಾಗಿ ನನ್ನ ಬಳಿ ಏನಿದೆ ಕೊಡಲು..? ನಿನಗಿದೋ ನನ್ನ ಸಾಷ್ಟಾಂಗ ಪ್ರಣಾಮ… ಇಷ್ಟು ಮಾತ್ರ ನಾನು ಮಾಡವುದು ಸಾಧ್ಯ… ನಿನ್ನ ಮರೆತು ಬದುಕುವರನ್ನು ಕ್ಷಮಿಸು… ಅವರಿಗೂ ನಿನ್ನ ಬಗೆಗಿನ ಅರಿವು ಬರುವಂತೆ ಮಾಡು ಓ ಭಗವಂತ…