ಮೇರುನಟಿ ಮಂಜುಳಾರವರ ಮಗನ ಈಗಿನ ಪರಿಸ್ಥಿತಿ ಹೇಗಿದೆ ಗೊತ್ತಾ?ನಟಿ ಮಂಜುಳಾ ಸತ್ತಿದ್ದು ಹೇಗೆ ಗೊತ್ತಾ?

ಕನ್ನಡ ಚಿತ್ರರಂಗ ಕಂಡ ಹೆಸರಾಂತ ನಟಿಯರಲ್ಲಿ ಮಂಜುಳಾ ಕೂಡ ಒಬ್ಬರಾಗಿದ್ದಾರೆ. ಮೇರು ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಶ್ರೀನಾಥ್ ಮುಂತಾದ ನಟರ ಜೊತೆ ನಟಿಸಿ ಅವರಿಗೆ ಸವಾಲು ಹಾಕುವಷ್ಟು ಅಭಿನಯ ಮಾಡುತ್ತಿದ್ದ ಮೇರು ನಟಿ ಮಂಜುಳಾ.

ಅಣ್ಣಾವ್ರ ಜೊತೆ ಸಂಪತ್ತಿಗೆ ಸವಾಲ್ ನಂತಹ ಅದ್ಭುತ ಚಿತ್ರದಲ್ಲಿ ಅವರು ಅಭಿನಯ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ಅವರು ಎಂತಹ ಅದ್ಭುತ ನಟಿ ಅಂತ. ಜೊತೆಗೆ ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಸೀತಾ ರಾಮು ಚಿತ್ರದಲ್ಲಿ ಪುರುಷ ವೇಷದಾರಿಯಾಗಿ ಮಾಡಿದ ಅವರ ಪಾತ್ರಾಭಿನಯ ಎಂತಹವರನ್ನು ಮಂತ್ರ ಮುಗ್ದಗೊಳಿಸುವಂತೆ ಮಾಡಿತ್ತು.

ಮೇರು ನಟಿ ಮಂಜುಳಾ ಕನ್ನಡ ನಮ್ಮನ್ನೆಲ್ಲಾ ಅಗಲಿ ಹಲವಾರು ವರ್ಷಗಳೇ ಕಳೆದಿವೆ.ಅವರು ಬೆಂಗಳೂರಿನ ಜಯನಗರದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಆದರೆ ದುರದೃಷ್ಟವಶಾತ್ ಇದ್ದಕಿದ್ದಂತೆ ನಡೆದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದರು.

ಮಂಜುಳಾರವರ ಸಾವಿನ ನಂತರ ಅವರ ಸಂಬಂದಿಗಳು ಮತ್ತು ಮನೆಯವರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದಿದ್ದರೂ, ಇವರ ಪತಿ ಅಮೃತಂ ಎಂದು. ಇವರು ದಕ್ಷಿಣ ದಕ್ಷಿಣ ಭಾರತದ ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು ಎಂಬುದರ ಮಾಹಿತಿ ಇದೆ.

ಮಂಜುಳಾರವರಿಗೆ ಅಭಿಷೇಕ್ ಎಂಬ ಮಗನಿದ್ದು, ಅವರು ತೀರಿಕೊಂಡಾಗ ಮಗನಿಗೆ ಕೇವಲ ಎರಡು ವರ್ಷವಾಗಿತ್ತು ಎಂದು ಹೇಳಲಾಗಿದೆ. ಮಂಜುಳರವರು ಸ್ವರ್ಗಸ್ತರಾದ ನಂತರ ಅವರ ಮಗ ಅಭಿಷೇಕ್ ರವರ ಜವಾಬ್ದಾರಿ ಮಂಜುಳಾರವರ ತಂದೆ ತಾಯಿ ವಹಿಸಿಕೊಂಡಿದ್ದರು.

ಈಗ ಮೇರು ನಟಿ ಮಂಜುಳಾರವರ ಮಗನಿಗೆ 33 ವರ್ಷಗಳಾಗಿದ್ದು ಅವರು ಬೆಂಗಳೂರಿನ ಪ್ರೈವೇಟ್ ಕಂಪನಿಯೊಂದರಲ್ಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮದುವೆಯಾಗಿ ಮಕ್ಕಳಿರುವ ಅಭಿಷೇಕ್ ಈಗ ಸರ್ಜಾಪುರದ ಆಗರದಲ್ಲಿ ವಾಸ ಮಾಡುತ್ತಿದ್ದು, ತನ್ನ ತಾಯಿಯಾದ ಮಂಜುಳಾರವರ ನೆನಪುಗಳು ಆಗಾಗ ಕಾಡುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.