ಕನ್ನಡ ಕೋಗಿಲೆ ಗ್ರಾಂಡ್ ಫಿನಾಲೆ ಸೀಸನ್ 2..ಯಾರಾಗ್ತಾರೆ ವಿನ್ನರ್.?

ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಂಗಿಂಗ್ ರಿಯಾಲಿಟಿ ಷೋ ಕನ್ನಡ ಕೋಗಿಲೆ ಸಂಚಿಕೆ ೨ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿರುವ ಈ ಸಂಗೀತ ಕಾರ್ಯಕ್ರಮ ಗ್ರಾಂಡ್ ಫಿನಾಲೆ ಹಂತ ತಲುಪಿದೆ. ಕನ್ನಡ ಕೋಗಿಲೆ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಆಗಸ್ಟ್ ೩ ಮತ್ತು ೪ ರಂದು ರಾತ್ರಿ ೮ ಗಂಟೆಗೆ ಪ್ರಸಾರವಾಗಲಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

ಈಗಾಗಲೇ ೬ ಜನ ಗಾಯಕರು ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಕರುನಾಡಿನ ಜನರ ಮನಸ್ಸು ಗೆದ್ದಿರುವ ಕೊಪ್ಪಳದ ಅರ್ಜುನ್ ಇಟಗಿ, ಹಾವೇರಿಯ ಕಾಸೀಮ್, ಬೆಂಗಳೂರಿನ ನೀತು ಸುಬ್ರಮಣ್ಯಮ್, ಉಡುಪಿಯ ಕಲಾವತಿ, ಮೈಸೂರಿನ ಆಲಾಪ್, ಮತ್ತು ಶಿವಮೊಗ್ಗದ ಪಾರ್ಥಸೇರಿದಂತೆ ೬ ಜನ ಗಾಯಕರು ಕನ್ನಡ ಕೋಗಿಲೆ ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಕೋಗಿಲೆ ವೀಕ್ಷಕರ ಮನ ಗೆದ್ದಿದ್ದು, ತನ್ನ ವಿಭಿನ್ನ ಗಾಯನದಿಂದಲೇ ಜನರ ಮನಸ್ಸು ಗೆದ್ದಿರುವ ಕೊಪ್ಪಳದ ಅರ್ಜುನ್ ಇಟಗಿ ಸೇರಿದಂತೆ ಆರು ಜನ ಗಾಯಕರಲ್ಲಿ ಕನ್ನಡದ ಕೋಗಿಲೆ ಭಾಗ ೨ರ ಪಟ್ಟ ಯಾರಿಗೆ ಸಿಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ ಕುತೂಹಲ.