ಇದನ್ನ ಕುಡಿದ್ರೆ ಸಾಕು ನಿಮ್ಗೆ ಥೈರಾಯ್ಡ್ ಸಮಸ್ಯೆ ಮತ್ತೆ ಬರುವದಿಲ್ಲ..ಮನೆಯಲ್ಲೇ ಇದೇ ಇದಕ್ಕೆ ಮದ್ದು…

ಥೈರಾಯ್ಡ್ ಸಮಸ್ಯೆ ಮುಖ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ದೇಹದಲ್ಲಿ ಥೈರಾಡ್ ಹಾರ್ಮೋನ್ ನ ಅಸಮತೋಲನೆಯಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಾರಣವೇ ಇಲ್ಲದೆ ತೂಕ ಹೆಚ್ಚಾಗುತ್ತದೆ. ಕೆಲವರಲ್ಲಿ ತೂಕ ಕಡಿಮೆಯಾಗುತ್ತದೆ. ಥೈರಾಯ್ಡ್ ಸಮಸ್ಯೆಯಲ್ಲಿ ಎರಡು ವಿಧ. ಒಂದು ಹೈಪರ್ಥೈರಾಯ್ಡ್ ಇನ್ನೊಂದು ಹೈಪೋಥೈರಾಯ್ಡ್.

ಗಂಟಲಿನಲ್ಲಿ ನೋವು ಉಂಟಾಗುವುದು, ಹೊಟ್ಟೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಅಜೀರ್ಣ, ದೇಹದ ತೂಕ ನಿಯಂತ್ರಣಕ್ಕೆ ಬಾರದೆ ಇರುವುದು, ಋತು ಚಕ್ರ ಸರಿಯಾಗಿ ನಡೆಯದೇ ಇರುವುದು ಹೀಗೆ ಥೈರಾಯ್ಡ್ ಹಾರ್ಮೋನ್ ನ ಅಸಮತೋಲನೆಯಿಂದ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ವೈದ್ಯರಲ್ಲಿ ಭೇಟಿ ನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಆದರೆ ನಾವು ಕೆಲವು ಆಹಾರ ಸೇವನೆಯಿಂದ ಥೈರಾಡ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

ಥೈರಾಯ್ಡ್ ಸಮಸ್ಯೆಗೆ ರಾಮಬಾಣ ವಾಗಿರುವ ಕೆಲವು ಮನೆಮದ್ದುಗಳು ಇಲ್ಲಿವೆ…

ಧನಿಯಾ ಜ್ಯೂಸ್ಇದು ತೂಕವನ್ನು ಕಡಿಮೆ ಮಾಡಲು, ಥೈರಾಡ್ ಹಾರ್ಮೋನ್ ನ ಅಸಮತೋಲನೆಯನ್ನು ನಿಯಂತ್ರಿಸಲು ರಾಮ ಬಾಣವಾಗಿದೆ.

ಮಾಡುವ ವಿಧಾನ 1 ಕಪ್ ನಷ್ಟು ನೀರಿಗೆ ಒಂದು ಎರಡು ಚಮಚ ಧನಿಯಾವನ್ನು ಹಾಕಿ ಒಂದೆರಡು ಗಂಟೆಗಳ ಕಾಲ ನೆನೆಸಿ. ನಂತರ ಅದನ್ನು ಶೋಧಿಸಿ ಬೆಳಗ್ಗೆ ಹೊತ್ತು ದಿನವು ಕುಡಿಯಬೇಕು.ಇದಕ್ಕೆ ಬೇಕಾದರೆ ಜೇನುತುಪ್ಪವನ್ನು ಸಹ ಸೇರಿಸಿ ಕುಡಿಯಬಹುದು.

ಇಲ್ಲವೇ ರಾತ್ರಿ ಊಟ ಮಾಡಿದ ಒಂದು ಗಂಟೆಗಳ ನಂತರ ಧನ್ಯ ನೀರನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ ರಾತ್ರಿ ನಿದ್ದೆಯೂ ಚೆನ್ನಾಗಿ ಬರುತ್ತದೆ.

ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಕಾಯಿಲೆಗಳನ್ನು ಶಮನ ಮಾಡುತ್ತದೆ. ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಅಲ್ಲದೆ ಋತುಚಕ್ರವು ಸರಿಯಾಗಿ ನಡೆಯಲು ಪೂರಕವಾಗಿದೆ.

ಕ್ಯಾರೆಟ್ ಮತ್ತು ಸೌತೆಕಾಯಿ ಜ್ಯೂಸ್ಒಂದು ಮಿಕ್ಸಿ ಜಾರಿಯಲ್ಲಿ 1 ತುರಿದ ಕ್ಯಾರೆಟ್, ಅರ್ಧ ಹಚ್ಚಿದ ಸೌತೆಕಾಯಿ, ಸ್ವಲ್ಪ ನಿಂಬೆ ರಸ, ಸ್ವಲ್ಪ ಕೊತ್ತಂಬರಿ ಸೊಪ್ಪು ರುಬ್ಬಿ ನಂತರ ಅದನ್ನು ಶೋಧಿಸಿ ಜ್ಯೂಸ್ ತಯಾರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಇದರಿಂದ ಥೈರಾಯ್ಡ್ ಸಮಸ್ಯೆ ದೂರವಾಗುವುದಲ್ಲದೆ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ಮೈ ಮನಸ್ಸಿಗೆ ಚೈತನ್ಯ ಮೂಡುತ್ತದೆ. ಮೇಲಿನ ಮನೆ ಮದ್ದುಗಳ ಜೊತೆಗೆ ದಿನವೂ ಅಧಿಕ ನೀರನ್ನು ಕುಡಿಯಬೇಕು. ಮತ್ತು ಪ್ರತಿ ದಿನವೂ ತಪ್ಪದೆ ವ್ಯಾಯಾಮವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ಥೈರಾಯ್ಡ್ ಸಮಸ್ಯೆ ಅನುವಂಶೀಯವಾಗಿ ಬಂದಿರಲಿ ಅಥವಾ ಆಹಾರ ಪದ್ಧತಿ ವ್ಯಾಯಾಮ ಪೋಷಕಾಂಶದ ಕೊರತೆಯಿಂದ ಬಂದಿರಲಿ ಆದರೆ ಅದಕ್ಕೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯ ಜೊತೆಗೆ ಸರಿಯಾದ ಆಹಾರಕ್ರಮ, ವ್ಯಾಯಾಮ, ಒಳ್ಳೆಯ ಜೀವನಶೈಲಿ ಅತ್ಯವಶ್ಯಕವಾಗಿವೆ.