ಕಲ್ಲು ಸಕ್ಕರೆ ತಿನ್ನುವುದರಿಂದ ಆಗುವ ಅದ್ಭುತ ಲಾಭಗಳು.!ಕೋಟಿ ಕೊಟ್ಟರೂ ಸಿಗುವುದಿಲ್ಲ ಇದರ ಪ್ರಯೋಜನ…

ಕಲ್ಲು ಸಕ್ಕರೆಯನ್ನು ರಿಫೈಂಡ್ ಪ್ರೊಸೆಸ್ ಗೆ ಒಳಪಡಿಸದೆ ಸಿದ್ಧಪಡಿಸಲಾಗುತ್ತದೆ. ಆದ್ದರಿಂದಲೇ ನಾವು ದಿನ ಬಳಕೆಗೆ ಬಳಸುವ ಸಕ್ಕರೆಗಿಂತಲೂ ಇದು ಎಷ್ಟೋ ಉತ್ತಮವಾದದ್ದು. ಅಲ್ಲದೆ ಕಲ್ಲು ಸಕ್ಕರೆಯನ್ನು ಸೇವಿಸುವುದರಿಂದ ಅನೇಕ ಆರೋಗ್ಯದ ಪ್ರಯೋಜನಗಳು ಇವೆ ಮತ್ತು ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಲು ನೆರವಾಗುತ್ತದೆ.

ಹಾಗಾದರೆ ಕಲ್ಲುಸಕ್ಕರೆ ಯಾ ಸೇವನೆಯಿಂದ ಆಗುವ ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ…

*ಗಂಟಲು ನೋವಿಗೆ ಪರಿಹಾರ  ಕಲ್ಲು ಸಕ್ಕರೆ ಗಂಟಲು ನೋವಿಗೆ ರಾಮಬಾಣವಾಗಿದೆ. ಕಲ್ಲು ಸಕ್ಕರೆಯೊಂದಿಗೆ ಕಾಳು ಮೆಣಸು ಮತ್ತು ತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

*ಬಾಯಿಯ ದುರ್ವಾಸನೆಕಲ್ಲು ಸಕ್ಕರೆಯೊಂದಿಗೆ ಸೋಂಪು ಅನ್ನು ಸೇರಿಸಿ ತಿನ್ನುವುದರಿಂದ ಬಾಯಿಯ ದುರ್ವಾಸನೆಯೂ ದೂರವಾಗಿ ಬಾಯಿ ಸ್ವಚ್ಛವಾಗಿ ಫ್ರೆಶ್ ಎನಿಸುತ್ತದೆ.

*ಬಾಯಿಯ ಹುಣ್ಣುಕಲ್ಲು ಸಕ್ಕರೆಯೊಂದಿಗೆ ಏಲಕ್ಕಿಯನ್ನು ಬೆರೆಸಿ ಪೇಸ್ಟ್ ಮಾಡಿ ಬಾಯಿ ಹುಣ್ಣು ಆಗಿರುವುದಕ್ಕೆ ಜಾಗಕ್ಕೆ ಪ್ರತಿದಿನವೂ ಮೂರು ಬಾರಿ ಹಚ್ಚುವುದರಿಂದ ಬಾಯಿಯ ಹುಣ್ಣು ದೂರವಾಗುತ್ತವೆ.

ಕಲ್ಲು ಸಕ್ಕರೆಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ಇದು ನಾಚುರಲ್ ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ. ಯಾವಾಗಲಾದರೂ ನಿಮಗೆ ಸುಸ್ತಾದಾಗ ಕಲ್ಲು ಸಕ್ಕರೆಯನ್ನು ಬಾಯಲ್ಲಿ ಹಾಕಿ ತಿನ್ನುವುದರಿಂದ ತಕ್ಷಣ ಸುಸ್ತು ಕಡಿಮೆಯಾಗುತ್ತದೆ.

*ಕೈ ಕಾಲು ಉರಿ ಬೆಣ್ಣೆ ಮತ್ತು ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ನಿಮಗೆ ಕೈ ಕರೆಯುವ ಜಾಗಕ್ಕೆ ಹಚ್ಚುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ.

*ಮೂಗಲ್ಲಿ ರಕ್ತ ಸ್ರಾವ ವಾದಾಗ ಮೂಗಿನಲ್ಲಿ ರಕ್ತ ಸ್ರಾವವಾಗುವ ಗ ತಕ್ಷಣ ಕಲ್ಲು ಸಕ್ಕರೆಯನ್ನು ಸೇರಿಸುವುದರಿಂದ ಅದು ಕಡಿಮೆಯಾಗುತ್ತದೆ.

*ಮೆದುಳಿನ ಆರೋಗ್ಯಕ್ಕೆ ಕಲ್ಲು ಸಕ್ಕರೆಯು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಲ್ ನಟ್ ಮತ್ತು ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಹಾಲಿನಲ್ಲಿ ಸೇರಿಸಿ ಕುಡಿಯುವುದರಿಂದ ನಮ್ಮ ಮೆದುಳಿನ ಆರೋಗ್ಯ ಹೆಚ್ಚಾಗುತ್ತದೆ ಮತ್ತು ನೆನಪಿನ ಶಕ್ತಿ ಉತ್ಸಾಹ ವೃದ್ಧಿಸುತ್ತದೆ. ಕಿನ್ನತೆ ಉದ್ವೇಗ ಮುಂತಾದ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ. ಆದ್ದರಿಂದಲೇ ಕಲ್ಲು ಸಕ್ಕರೆಯನ್ನು ಬ್ರೈನ್ ಟಾನಿಕ್ ಎಂದು ಸಹ ಕರೆಯಲಾಗುತ್ತದೆ.

*ಹಾಲು ಉಣಿಸುವ ತಾಯಿಯರಿಗೆ ಪ್ರಯೋಜಕಹಾಲುಣಿಸುವ ತಾಯಿಯರು ಕಲ್ಲು ಸಕ್ಕರೆಯನ್ನು ಸೇರಿಸಲೇ ಬೇಕು. ಇದು ಎದೆ ಹಾಲನ್ನು ಹೆಚ್ಚು ಮಾಡುತ್ತದೆ. ಇದು ಎದೆ ಹಾಲನ್ನು ಹೆಚ್ಚು ಮಾಡುತ್ತದೆ. ಕಲ್ಲು ಸಕ್ಕರೆ ಮತ್ತು ಎಳ್ಳನ್ನು ತಿನ್ನುವುದರಿಂದ ತಾಯಂದಿರಲ್ಲಿ ಎದೆ ಹಾಲು ವೃದ್ಧಿಸುತ್ತದೆ.

*ಸೈನಸ್ ಗೆ ಪರಿಹಾರ ಕಲ್ಲು ಸಕ್ಕರೆ ಸೇವಿಸುವುದರಿಂದ ಸೈನಸ್ ಎಂಬ ತಲೆನೋವು ದೂರವಾಗುತ್ತದೆ.

*ಕಣ್ಣಿನ ಆರೋಗ್ಯಕ್ಕೆ ಕಲ್ಲುಸಕ್ಕರೆ ಬಾದಾಮಿ ಸೋಂಪು ಮತ್ತು ಕಾಳುಮೆಣಸನ್ನು ಪುಡಿಮಾಡಿ ಪೌಡರ್ ತಯಾರಿಸಿಕೊಳ್ಳಿ. 1 ಟೇಬಲ್ ಸ್ಪೂನ್ ಈ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ. ಮತ್ತು ಬುದ್ಧಿಶಕ್ತಿ ಹೆಚ್ಚುತ್ತದೆ. ನೆನಪಿನ ಶಕ್ತಿ ವೃದ್ಧಿಗೊಳ್ಳುತ್ತದೆ. ಕನಿಷ್ಟ ವಾರಕ್ಕೆ ಮೂರು ಬಾರಿಯಾದರೂ ಈ ಹಾಲನ್ನು ಕುಡಿಯುವುದು ಒಳ್ಳೆಯದು.

ಅಲ್ಲದೆ ಕಲ್ಲುಸಕ್ಕರೆ ಉಷ್ಣ ಶರೀರ ಹೊಂದಿರುವವರಿಗೆ ತುಂಬಾ ಒಳ್ಳೆಯದು ಇದು ದೇಹವನ್ನು ತಂಪಾಗಿಸುತ್ತದೆ. ನಿಮ್ಮ ದೇಹದ ಉಷ್ಣಾಂಶ ಅತಿಯಾಗಿದೆ ಎನಿಸಿದಾಗ ಕಲ್ಲು ಸಕ್ಕರೆಯನ್ನು ಸೇವಿಸಬಹುದು. ಹೀಗೆ ಕಲ್ಲು ಸಕ್ಕರೆಯ ಅನೇಕ ಪ್ರಯೋಜನಗಳನ್ನು ಹೊಂದಿದ್ದು ಎಲ್ಲರಿಗೂ ಸುಲಭವಾಗಿ ದೊರಕುತ್ತದೆ.