ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ?ಹಲವಾರು ಖಾಯಿಲೆಗಳಿಗೆ ರಾಮಭಾಣ ಇದು!

ಜೀರಿಗೆಯಲ್ಲಿರುವ ನ್ಯೂಟ್ರೀಯೆಂಟ್ಸ್‌ಗಳು ಹಲವಾರು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಗೆ ಜೀರಿಗೆ ನೀರು ಸೇವನೆ ಮಾಡುವುದು ಉತ್ತಮ. ಇದರ ನೀರು ಕುಡಿಯಲು ಇಷ್ಟಪಡದೆ ಇದ್ದರೆ ಈ ನೀರನ್ನು ತರಕಾರಿ ಅಥವಾ ಅನ್ನದ ಜೊತೆ ಸೇವಿಸಬೇಕು. ಇಲ್ಲವಾದರೆ ಮಜ್ಜಿಗೆಯ ಜೊತೆ ಕೂಡ ಮಿಕ್ಸ್‌ ಮಾಡಿ ಸೇವಿಸಬಹುದು.

ಜೀರಿಗೆ ನೀರನ್ನು ದಿವಸ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಜೀರಿಗೆ ನೀರನ್ನು ದಿವಸ ಕುಡಿಯೋದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೋಗುತ್ತವೆ. ಜೀರ್ಣಕೋಶ ಶುಭ್ರವಾಗುತ್ತದೆ. ಮಲಭಾದೆ ಸಮಸ್ಯೆ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತದೆ. ಹಸಿವು ಇಲ್ಲದಿದ್ದರೆ ಈ ನೀರನ್ನು ಕುಡಿಯಬೇಕು. ಹೊಟ್ಟೆಯಲ್ಲಿ ಹುಳವಿದ್ದರೆ ಸತ್ತು ಹೋಗುತ್ತದೆ. ಜೀರಿಗೆ ನೀರು ಕುಡಿದರೆ ಮಹಿಳೆಯರಿಗೆ ಹಾಲು ಹೆಚ್ಚು ಉತ್ಪತ್ತಿಯಾಗುತ್ತದೆ. ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಜೀರಿಗೆ ನೀರು ಶಕ್ತಿಯುತ ಔಷಧಿ.

ಡಯಾಬಿಟೀಸ್‌ ಸಮಸ್ಯೆ ಉಳ್ಳವರು  ಇದರಿಂದ ದೇಹದಲ್ಲಿ ಗ್ಲೂಕೋಸ್‌ ಲೆವೆಲ್‌ ಮೆಂಟೈನ್‌ ಮಾಡಲು ಸಹಾಯವಾಗುತ್ತದೆ. ಇದರಿಂದ ಡಯಾಬಿಟೀಸ್‌ ಸಮಸ್ಯೆ ಕಾಡೋದಿಲ್ಲ.

ರಕ್ತನಾಳದಲ್ಲಿರುವ ತೊಂದರೆ ರಕ್ತನಾಳದಲ್ಲಿರುವ ತೊಂದರೆಗಳು ಹೋಗುತ್ತದೆ.ಫಲಿತವಾಗಿ ಹೃದಯದ ಸಮಸ್ಯೆ ಬರಲ್ಲ. ಸಹಜ ಸಿದ್ದವಾದ ಆಂಟಿ ವೈರಸ್,ಆಂಟಿ ಬೈಯೋಟಿಕ್, ಆಂಟಿ ಬ್ಯಾಕ್ಟೀರಿಯಾ,ಆಂಟಿ ಫಂಗಲ್ ಗುಣಗಳು ಜೀರಿಗೆ ನೀರಿನಲ್ಲಿ ಇರುತ್ತದೆ.ಆದುದರಿಂದ ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಮಸಲ್ಸ್‌ ನೋವು ಇದ್ದರೆ ಈ ಡ್ರಿಂಕ್‌ ಸೇವಿಸೋದರಿಂದ ಬ್ಲಡ್‌ ಸರ್ಕ್ಯುಲೇಶನ್‌ ಸರಿಯಾಗುತ್ತದೆ. ಇದರಿಂದ ಮಸಲ್ಸ್‌ ರಿಲ್ಯಾಕ್ಸ್‌ ಆಗುತ್ತದೆ ಹಾಗೂ ನೋವು ನಿವಾರಣೆಯಾಗುತ್ತದೆ.

ಕೆಮ್ಮು ಹಾಗೂ ನೆಗಡಿ ಬೇಗನೆ ವಾಸಿಯಾಗುತ್ತದೆ ಜೀರಿಗೆ ನೀರಿನಿಂದ ಮೂತ್ರ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ. ಮೂತ್ರ ಸುಲಭವಾಗಿ ಬರುತ್ತದೆ. ಕಿಡ್ನಿನಲ್ಲಿ ಕಲ್ಲು ಇದ್ದರೆ ಕರಗುತ್ತದೆ. ಹೊಟ್ಟೆ ನೋವು ಅಥವಾ ತಲೆ ತಿರುಗುತ್ತಿದ್ದರೆ ಜೀರಿಗೆ ನೀರನ್ನು ಕುಡಿಯಬೇಕು. ಹೊಟ್ಟೆಯಲ್ಲಿ ಹುಣ್ಣು ಇದ್ದರೆ ಜೀರಿಗೆ ನೀರು ಕುಡಿಯಿರಿ. ಸುಸ್ತಾಗುವ ಸಮಸ್ಯೆ ದೂರವಾಗುತ್ತದೆ. ನಿದ್ರೆ ಬಾರದಿದ್ದರೆ ಜೀರಿಗೆ ನೀರು ಕುಡಿಯಬೇಕು.

ನಿದ್ರಾಹೀನತೆ ಜೀರಿಗೆ ನೀರು ಸೇವನೆಯಿಂದ ಬ್ರೈನ್‌ ರಿಲ್ಯಾಕ್ಸ್‌ ಆಗುತ್ತದೆ. ಅಲ್ಲದೆ ನಿದ್ರೆ ಚೆನ್ನಾಗಿ ಬರಲು ಇದು ಸಹಕಾರಿಯಾಗಿದೆ. ಜ್ವರವನ್ನು ಸಹ ನಿವಾರಣೆ ಮಾಡುವ ಶಕ್ತಿ ಇದೆ. ಜೀರಿಗೆ ನೀರನ್ನು ಕುಡಿಯೋದರಿಂದ ದೇಹ ತಂಪಾಗುತ್ತದೆ. ಇದರಿಂದ ಜ್ವರ ಕಡಿಮೆಯಾಗುತ್ತದೆ.