ಕೇವಲ ಸಿರಿಂಜ್ ನಿಂದ ಜೆಸಿಬಿ ತಯಾರಿಸಿದ ಪುಟ್ಟ ಪೋರ!ವೈರಲ್ ಆಗಿದೆ ಗಾಳಿಯಿಂದಲೇ ಕೆಲಸ ಮಾಡುವ JCB ವಿಡಿಯೋ…

ಸಾಮಾಜಿಕ ಜಾಲತಾಣಗಳು ಎಲೆ ಮರೆ ಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ವೇದಿಕೆಯಾಗಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ನಿದರ್ಶನವೆಂಬಂತೆ ಕೇವಲ ಸಿರಿಂಜ್ ಗಳಿಂದ ಜೆಸಿಬಿ ಕೆಲಸ ಮಾಡುವುದನ್ನು ಕಂಡುಹಿಡಿದಿರುವ ಬಾಲಕನೊಬ್ಬನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು ಸಿರಿಂಜ್ ನಿಂದ ಜೆಸಿಬಿ ಕಾರ್ಯನಿರ್ವಹಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನಿಮ್ಮ ಎಂಜಿನಿಯರಿಂಗ್ ಪದವಿಯನ್ನು ಪಕ್ಕಕ್ಕೆ ಇತ್ತು, ಈ ಪುಟ್ಟ ಪೋರನ ಕೌಶಲ್ಯವನ್ನು ಒಮ್ಮೆ ನೋಡಿ ಎಂದು ಟ್ವೀಟ್ ಮಾಡಿದ್ದಾರೆ.

ಪುಟ್ಟ ಬಾಲಕ ಕಂಡುಹಿಡಿದಿರುವ JCB ಹೇಗೆ ಕೆಲಸ ಮಾಡುತ್ತೆ? ಈ ವಿಡಿಯೋ ನೋಡಿ…

ಈ ವಿಡಿಯೋದಲ್ಲಿ ಬಾಲಕನೊಬ್ಬ ತಾನೇ ತಯಾರಿಸಿದ ಇಂಧನವಿಲ್ಲದ, ಕೇವಲ ಗಾಳಿಯ ಸಹಾಯದಿಂದ ಸಿರಿಂಜ್ ಜೆಸಿಬಿಯಿಂದ ಕಾರ್ಯನಿರ್ವಹಿಸುವುದನ್ನು ಆ ಬಾಲಕನ ಸುತ್ತಲೆಯೂ ನಿಂತ ಜನರು ಮತ್ತು ಮಕ್ಕಳು ಕುತೂಹಲದಿಂದ ನೋಡುತ್ತಿದ್ದು ಪುಟ್ಟ ಪೋರನ ಪ್ರತಿಭೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೇವಲ ಎರಡು ದಿನಗಳ ಹಿಂದಷ್ಟೇ ಪುಟ್ಟ ಬಾಲಕನ ವಿಡಿಯೋವನ್ನು ಪೋಸ್ಟ್ ಮಾಡಿದ್ದು 1.39 ಲಕ್ಷ ಜನರು ನೋಡಿದರೆ, 1,200 ಕ್ಕೂ ಹೆಚ್ಚು ಜನರು ರೀ ಟ್ವೀಟ್ ಮಾಡಿದ್ದಾರೆ. 5,800ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಈ ಬಾಲಕನನ್ನು ಹುಡುಕಿ ಆತನ ಶಿಕ್ಷಣಕ್ಕೆ ಸಹಾಯ ಮಾಡಬೇಕು, ಆ ಹುಡುಗನ ಪ್ರತಿಭೆಯನ್ನು ಹೊರತೆಗೆಯಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಈ ಬಾಲಕ 2035ರ ವೇಳೆಗೆ ಜೆಸಿಬಿ ಕಂಪನಿಯ ಸಿಇಓ ಆಗುತ್ತಾನೆ ಎಂಬ ಭರವಸೆ ಇದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.