ತನ್ನ ಹೊಸ ಗೆಟಪ್ ಮೂಲಕ ಅಬ್ಬರಿಸಲು ರೀಎಂಟ್ರಿ ಕೊಟ್ಟಿರುವ ನಟ ಕೋಮಲ್ ಬಗ್ಗೆ ಅಣ್ಣ ಜಗ್ಗೇಶ್ ಹೇಳಿದ್ದೇನು ಗೊತ್ತಾ.?

ಕನ್ನಡ ಚಿತ್ರರಂಗದ ಹಾಸ್ಯ ನಟರಲ್ಲಿ ಕೋಮಲ್ ಕೂಡ ಒಬ್ಬರು. ಆದರೆ ಹಲವಾರು ವರ್ಷಗಳಿಂದ ನಟ ಕೋಮಲ್ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಎಲ್ಲರಲ್ಲೂ ನಟ ಕೋಮಲ್ ಎಲ್ಲಿ ಹೋದರು ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ದೊಡ್ಡ ಗ್ಯಾಪಿನ ನಂತರ ತನ್ನ ವಿಭಿನ್ನ ಗೆಟಪ್ ಮೂಲಕ ನಟ ಕೋಮಲ್ ಕೆಂಪೇಗೌಡ 2 ಚಿತ್ರದ ಮೂಲಕ ಅಬ್ಬರಿಸಲು ಸಿದ್ಧರಾಗಿದ್ದಾರೆ.

ಕೆಂಪೇಗೌಡ 2 ಚಿತ್ರದ ಟ್ರೈಲರ್ ಯೂಟ್ಯೂಬ್ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿರುವುದೇ ಇದಕ್ಕೊಂದು ನಿದರ್ಶನ. ಕೆಂಪೇಗೌಡ 2 ಚಿತ್ರದ ಮೂಲಕ ತನ್ನ ಹೊಸ ಲುಕ್ ನಿಂದ ಎಂಟ್ರಿ ಕೊಟ್ಟಿರುವ ನಟ ಕೋಮಲ್ ತನ್ನ ಚಿತ್ರಕ್ಕೆ ಈ ಪಾಟಿ ಬೆಂಬಲ ಸಿಕ್ಕಿರುವುದರಿಂದ ತುಂಬಾ ಖುಷಿಯಾಗಿದ್ದಾರೆ.

ಇನ್ನು ಕೋಮಲ್ ರವರ ಅಣ್ಣ ನಟ ಜಗ್ಗೇಶ್ ಗೆ ಇದರಿಂದ ಖುಷಿಯಾಗುದೇ ಇರಲು ಸಾಧ್ಯವೇ. ಯಾವಾಗಲೂ ತಮ್ಮ ಕೋಮಲ್ ಬೆನ್ನೆಲುಬಾಗಿ ನಿಂತಿರುವ ನಟ ಜಗ್ಗೇಶ್ ಕೆಂಪೇಗೌಡ 2 ಚಿತ್ರದ ಟ್ರೈಲರ್ ಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲ ನೋಡಿ ತುಂಬಾ ಖುಷಿಯಾಗಿದ್ದಾರೆ. ಇದಕ್ಕಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಸಹೋದರ ಕೋಮಲ್ ಅವರ ಚಿತ್ರದ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ ಕನ್ನಡದ ಕುಲಕೋಟಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ರಾ ಸಿನಿಮಾ ನೋಡಿ ನನಗೆ ರೋಮಾಂಚನವಾಗಿದೆ. ಉತ್ತಮ ಕಮರ್ಷಿಯಲ್ ಮೂವಿಗಳ ಸಾಲಿಗೆ ಈ ಚಿತ್ರ ಸೇರುತ್ತದೆ ಎಂದು ನನ್ನ ಮನಸ್ಸು ಹೇಳುತ್ತಿದೆ. ಕೋಮಲ್ ರವರ ಅಣ್ಣನಾಗಿ ನನಗೆ ತುಂಬಾ ಸಂತೋಷದ ಜೊತೆಗೆ ಹೆಮ್ಮೆ ಕೂಡ ಆಗುತ್ತಿದೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಕೋಮಲ್ ಅಬ್ಬರಿಸಿರುವ ಕೆಂಪೇಗೌಡ 2 ಚಿತ್ರದ ಟ್ರೈಲರ್…

ನಟ ಕೋಮಲ್ ತನ್ನ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಶಂಕರಗೌಡ ನಿರ್ದೇಶನ ಮಾಡಿದ್ದಾರೆ. ಕನ್ನಡದ ಮತ್ತೊಬ್ಬ ನಟ ಲೂಸ್ ಮಾದ ಯೋಗಿ ಕೂಡ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ವಿಶೇಷವಾಗಿ ಕ್ರಿಕೆಟ್ ಆಗಿರುವ ಶ್ರೀಶಾಂತ್ ಕೂಡ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಗೆ ಸಿಕ್ಕಿರುವ ಬೆಂಬಲ ನೋಡಿ ಚಿತ್ರ ಗೆಲ್ಲುವ ಸ್ಪಷ್ಟ ಸೂಚನೆ ಕಾಣುತ್ತಿದೆ ಎಂದು ಹೇಳಲಾಗಿದೆ